ಕೊನೆಗೂ ಈಡೇರಿತು ಕರಾವಳಿಗರ ದಶಕದ ಬೇಡಿಕೆ : ಪಂಪ್ ವೆಲ್ ಪ್ಲೈಓವರ್ ಉದ್ಘಾಟನೆ

0

ಮಂಗಳೂರು : ಕಳೆದೊಂದು ದಶಕಗಳಿಂದಲೂ ಕರಾವಳಿಗರು ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹಾದು ಹೋಗಿರೋ ಪಂಪ್ ವೆಲ್ ಪ್ಲೈಓವರ್ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು ಅವರು ಪ್ಲೈಓವರ್ ಉದ್ಘಾಟಿಸಿದರು.  2010ರಲ್ಲಿ ಪಂಪ್ ವೆಲ್ ಪ್ಲೈಓವರ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಕುಟುಂತ್ತಾ ಸಾಗಿತ್ತು. ಹೀಗಾಗಿ ಸಾರ್ವಜನಿಕರು, ವಾಹನ ಸವಾರರು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದರು. ಹಲವು ಬಾರಿ ಹೋರಾಟಗಳು ನಡೆದಿದ್ದದವು. ಸಂಸದರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗಿತ್ತು.ಇದರ ಬೆನ್ನಲ್ಲೇ ಸಂಸದ ನಳಿನ್ ಕುಮಾರ್ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದರು. ಪ್ಲೈಓವರ್ ಕಾಮಗಾರಿಯ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಿದ್ದರು. ಇದರ ಫಲವಾಗಿಯೇ ಪ್ಲೈಓವರ್ ಕಾಮಗಾರಿ ಚುರುಕಿನಿಂದ ನಡೆದಿದ್ದು, ಇಂದು ಪಂಪ್ ವೆಲ್ ಪ್ಲೈ ಓವರ್ ಉದ್ಘಾಟನೆಗೊಂಡಿದೆ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.