ಚಿರು ಕನಸುಗಳಿಗೆ ಜೀವ ತುಂಬಿದ ಗಟ್ಟಿಗಿತ್ತಿ…! ಮೇಘನಾ ರಾಜ್ ಹ್ಯಾಟ್ಸ್ಆಫ್ ಅಂತಿದೆ ಸ್ಯಾಂಡಲ್ ವುಡ್…!!

ಬೆಂಗಳೂರು: ಪತಿ-ಪತ್ನಿ ಒಂದಾಗಿ ಕಾಣೋ ಕನಸುಗಳು ನೂರಾರು. ಆದರೆ ಅಕಸ್ಮಾತ್ ಪತಿ ನಿಧನವಾದ್ರೇ ಆ ಕನಸುಗಳೆಲ್ಲ ನುಚ್ಚು ನೂರಾಗುತ್ತೆ. ಆದರೇ ಸ್ಯಾಂಡಲ್ ವುಡ್ ನ ಸ್ಟಾರ್ ಜೋಡಿ ಮೇಘನಾ ಮತ್ತು ಚಿರು ಮಾತ್ರ ಇದಕ್ಕೆ ಅಪವಾದದಂತಿದ್ದು ಅಗಲಿಕೆಯ ಬಳಿಕವೂ ತಮ್ಮ ಒಂದೊಂದು ಕನಸನ್ನು ನನಸು ಮಾಡಿಕೊಂಡಿದ್ದಾರೆ.


ಹೌದು ಚಿರು ಇನ್ನಿಲ್ಲವಾದರೂ ತಮ್ಮ ಕನಸುಗಳನ್ನು ಅನಾಥವಾಗಲು ಬಿಡಲಿಲ್ಲ ಗಟ್ಟಿಗಿತ್ತಿ ಮೇಘನಾ ರಾಜ್. ಐದು ತಿಂಗಳ ಗರ್ಭಿಣಿಯಾಗಿದ್ದಾಗ ಚಿರುವನ್ನು ಕಳೆದುಕೊಂಡ ಮೇಘನಾ ಅಕ್ಷರಷಃ ಕಲ್ಲುಬಂಡೆಯಂತೆ ನಿಂತು ಚಿರುವಿನ ಒಂದೊಂದೆ ಆಸೆ ಪೊರೈಸಿದ್ದಾರೆ.

ಚಿರುವಿಗಾಗಿ ಅದ್ದೂರಿ ಸೀಮಂತಕ್ಕೂ ಸೈ ಎಂದ ಮೇಘನಾ,ಶಾಸ್ತ್ರೋಕ್ತವಾಗಿ ಸೀಮಂತ, ಪತಿಯ ಆಸೆಯಂತೆ ಖಾಸಗಿ ಹೊಟೇಲ್ ನಲ್ಲಿ ಬೇಬಿ ಶವರ್ ಕೂಡ ಮಾಡಿಸಿಕೊಂಡಿದ್ದಾರೆ. ಯಾಕೆಂದರೇ ಹೀಗೆ ಅದ್ದೂರಿಯಾಗಿ ಈ ಖುಷಿಯನ್ನು ಸೆಲಿಬ್ರೇಟ್ ಮಾಡೋದು ಚಿರುವಿನ ಕನಸಾಗಿತ್ತು.

ಇನ್ನು ಆಸ್ಪತ್ರೆ, ಮಗುವಿನ ಜನನ ಎಲ್ಲದರಲ್ಲೂ ಚಿರುವಿನ ಕನಸುಗಳಿಗೆ ಜೀವ ತುಂಬಿದ್ದು ಮೇಘನಾ ರಾಜ್. ಚಿರು ಆಸೆಯಂತೆ ಅವರ ಸ್ನೇಹಿತನ ಆಸ್ಪತ್ರೆಯಲ್ಲಿ ಆರಂಭದಿಂದಲೂ ಚಿಕಿತ್ಸೆ ಪಡೆದುಕೊಂಡಿದ್ಲು ಮೇಘನಾ. ಅಷ್ಟೇ ಅಲ್ಲ ಚಿರು ನಿಧನದ ನಂತರವೂ ಯಾವುದು ಬದಲಾಗದೇ ಎಲ್ಲವನ್ನು ಹಾಗೇ ಮುಂದುವರೆಸಿದ್ರು.

ಜ್ಯೂನಿಯರ್ ಚಿರು ಆಗಮನಕ್ಕೆ ಚಿರು ಸ್ನೇಹಿತನ ಆಸ್ಪತ್ರೆಯಲ್ಲಿ ಅದ್ದೂರಿ ಸಿದ್ಧತೆ ನಡೆದಿತ್ತು. ಕಳೆದ ಮೂರು ತಿಂಗಳಿನಿಂದ ಮೇಘನಾಗೆ ರೂಂ ಕಾಯ್ದಿರಿಸಿ ಅಲ್ಲಿ ಚಿರು ಪೋಟೋಗಳನ್ನು ಹಾಕಿ ವಿಶಿಷ್ಟವಾಗಿ ಸಿದ್ಧಪಡಿಸಲಾಗಿತ್ತು.

ಇನ್ನು ಹೆರಿಗೆಯಾಗುತ್ತಿದ್ದಂತೆ ತಮ್ಮ ಮಗುವನ್ನು ಮೊದಲು ಚಿರು ಪೋಟೋಕ್ಕೆ ತೋರಿಸಬೇಕೆಂದು ಮನೆ ಜನರಿಗೆ ಹೇಳಿದ್ದರಂತೆ. ಅವರ ಆಸೆಯಂತೆ ಗುರುವಾರ ಮಧ್ಯಾಹ್ನ ಮಗು ಜನಿಸುತ್ತಿದ್ದಂತೆ ಬೆಚ್ಚನೆಯ ಬಟ್ಟೆಯಲ್ಲಿ ಮಗುವನ್ನು ಸುತ್ತಿದ ಆಸ್ಪತ್ರೆ ಸಿಬ್ಬಂದಿ ಚಿಕ್ಕಪ್ಪ ದ್ರುವ್ ಸರ್ಜಾ ಕೈಯಲ್ಲಿಟ್ಟರು. ತಕ್ಷಣವೇ ಮಗುವನ್ನು ಅಣ್ಣನ ಪೋಟೋ ಎದುರಿಟ್ಟ ಧ್ರುವ ಕಣ್ಣಿರಾದರು.


ಕೇವಲ ಮಗುವಿನ‌ ಜನನ ಮಾತ್ರವಲ್ಲ ಮುಂದೇಯೂ ತಂದೆಯ ಕನಸಿನಂತೆ ಮಗುವನ್ನು ಸಾಕೋದಾಗಿ ಮೇಘನಾ ನಿರ್ಧರಿಸಿದ್ದಾರಂತೆ. ಸೀಮಂತದಂದು ಚಿರು ಪೋಟೋ ಎದುರು ನಿಂತು ಮೇಘನಾ ಮಾತುಕೊಟ್ಟಿದ್ದಾರಂತೆ. ನಿಮ್ಮ ಕನಸಿನಂತೆ, ನಿಮ್ಮಂತೆ ನಿಮ್ಮ ಮಗುವನ್ನು ಬೆಳೆಸುತ್ತೇನೆ ಎಂದು ಮೇಘನಾ ಚಿರುಗೆ ವಾಗ್ದಾನ ಮಾಡಿದ್ದಾರಂತೆ.

ಒಟ್ಟಿನಲ್ಲಿ ಪ್ರೀತಿಸಿ ಬದುಕು ಕಟ್ಟಿದ ಸ್ಯಾಂಡಲ್ ವುಡ್ ನ ಈ ಸ್ಟಾರ್ ಜೋಡಿ ಆ ಪ್ರೀತಿಯನ್ನು ಕಷ್ಟದಲ್ಲೂ,ದುಃಖದಲ್ಲೂ ಮಾದರಿಯಾಗುವಂತೆ ನಿಭಾಯಿಸಿದ್ದು ಅಭಿಮಾನಿಗಳ ಪಾಲಿಗೆ ಖುಷಿ ತಂದಿದೆ.

ಯಾವ ಹೆಣ್ಣಿಗೂ ಬರಬಾರದಂತ ಕಷ್ಟದಲ್ಲೂ ತನ್ನನ್ನು ತಾನು ಸಂಭಾಳಿಸಿಕೊಂಡು ಮುದ್ದಾದ ಆರೋಗ್ಯವಂತ ಮಗುವನ್ನು ಭೂಮಿಗೆ ತಂದ ನಟಿ ಮೇಘನಾ ರಾಜ್ ತಾಳ್ಮೆ, ಧೈರ್ಯ,ಕಷ್ಟ ಸಹಿಷ್ಣುತೆಗೆ ಸಲಾಂ ಅಂತಿದೆ ಸ್ಯಾಂಡಲ್ ವುಡ್.

Comments are closed.