ಕೃಷಿಕನ ಕನಸಿಗೆ ರೆಕ್ಕೆಯಾದ ಏರ್ ಪೋರ್ಟ್…! ದಾಳಿಂಬೆ ರಫ್ತಿನಲ್ಲಿ ಭಾರತದಲ್ಲೇ ನಂಬರ್ ಒನ್ ಪಟ್ಟಕ್ಕೆರಿದ ಬೆಂಗಳೂರು…!!

ಬೆಂಗಳೂರು: ಲಾಕ್ ಡೌನ್ ಅವಧಿಯಲ್ಲೂ ದಾಖಲೆಯ ದಾಳಿಂಬೆ ರಫ್ತು ಕೈಗೊಂಡ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಳೆಗಾರರ ಕೈ ಹಿಡಿದಿದ್ದಲ್ಲದೇ, ಭಾರತದಲ್ಲೇ ನಂಬರ್ ಒನ್ ಪಟ್ಟಕ್ಕೇರಿದೆ.

ಕರ್ನಾಟಕದಲ್ಲಿ ಬೆಳೆದ ದಾಳಿಂಬೆ ಯಲ್ಲಿ ಶೇಕಡಾ ೯೯ ರಷ್ಟನ್ನು ರಫ್ತು ಮಾಡಿರುವ ಬೆಂಗಳೂರು ಏರ್ ಪೋರ್ಟ್ ಇದುವರೆಗೂ ಅಂದಾಜು ೧,೮೦,೭೪೫ ಲಕ್ಷ ಕೆಜಿಗಳಷ್ಟು ದಾಳಿಂಬೆ ರಫ್ತು ಮಾಡಿದೆ ಎಂದು ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಪ್ರಾಧಿಕಾರ(ಎಪಿಇಡಿಎ) ಮತ್ತು ವಾಣಿಜ್ಯ ಬೇಹುಗಾರಿಕೆ ಹಾಗೂ ಅಂಕಿಅಂಶಗಳ ಪ್ರಧಾನ ನಿರ್ದೇಶನಾಲಯ ಮಾಹಿತಿ ನೀಡಿದೆ.

ಬೆಂಗಳೂರು ಏರ್ ಪೋರ್ಟ್, 9 ಜಾಗತಿಕ ಸರಕು ಸಾಗಾಣಿಕಾ ವಿಮಾನ ಸಂಸ್ಥೆಗಳ ಸಹಾಯದಿಂದ 12 ಅಂತಾರಾಷ್ಟ್ರೀಯ ಸ್ಥಳಗಳಿಗೆ ದಾಳಿಂಬೆ ರಫ್ತು ಮಾಡಿದ್ದು, ದಾಳಿಂಬೆ ರಫ್ತಿನಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ.

 ಜಾಗತಿಕ ಸರಕು ಸಾಗಣೆ ವಿಮಾನ ಸಂಸ್ಥೆಗಳಾದ ಏರ್ ಫ್ರಾನ್ಸ್, ಬ್ರಿಟಿಷ್ ಏರ್ವೇಸ್, ಕ್ಯಾಥೆ ಪೆಸಿಫಿಕ್, ಎಮಿರೇಟ್ಸ್ ಏರ್ ಲೈನ್ಸ್, ಎತಿಹಾದ್ ಏರ್ವೇಸ್, ಕೆಎಲ್‍ಎಂ ರಾಯಲ್ ಡಚ್ ಏರ್ ಲೈನ್ಸ್,  ಕಟಾರ್ ಏರ್ ವೇಸ್, ಸಿಂಗಪುರ್ ಏರ್ ಲೈನ್ಸ್,  ಮತ್ತು ಟರ್ಕಿಷ್ ಏರ್‍ ವೇಸ್ ಗಳು ಮೂಲಕ 12 ದೇಶಗಳಿಗೆ ಭಾರತದ ದಾಳಿಂಬೆ ತಲುಪಿದೆ.

ಸರಕು ಸಾಗಿಸುವಲ್ಲಿ ಹೆಸರುವಾಸಿಯಾದ ಏರ್ ಇಂಡಿಯಾ ಸ್ಯಾಟ್ಸ್ಮತ್ತು ಮೆಂಜೀಸ್ ಏವಿಯೇಷನ್ ಬಬ್ಬಾ ಬೆಂಗಳೂರುಗಳ ಬೆಂಬಲ ಹೊಂದಿರುವ,ಬೆಂಗಳೂರು ವಿಮಾನ ನಿಲ್ದಾಣ ಉತ್ಪನ್ನಗಳು ತಮ್ಮ ಗುರಿಗಳನ್ನು ಉತ್ತಮಸ್ಥಿತಿಯಲ್ಲಿ ತಲುಪುವ ಖಾತ್ರಿ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಟರ್ಮಿನಲ್‍ಗಳಲ್ಲಿ ಈ ಹಣ್ಣುಗಳನ್ನು ಇಡುವ ಸಮಯವನ್ನು ಕಡಿಮೆಮಾಡುವುದಲ್ಲದೆ, ಅವುಗಳನ್ನು ಅಗತ್ಯ ತಾಪಮಾನ ನಿಯಂತ್ರಿತ ವಾತಾವರಣದಲ್ಲಿಇಡುವುದರೊಂದಿಗೆ ಆದ್ಯತೆಯ ಮೇರೆಗೆ ವಿಮಾನಗಳಿಗೆ ಸಾಗಿಸಲಾಗುತ್ತದೆ. ಈಮೂಲಕ ಅವುಗಳಲ್ಲಿನ ತಾಜಾತನವನ್ನು ಉಳಿಸಿ ಖರೀದಿದಾರರ ಮೆಚ್ಚುಗೆಗೆ ಪಾತ್ರವಾಗುವಂತೆ ಮಾಡುವಲ್ಲಿ ಏರ್ ಪೋರ್ಟ್ ಶ್ರಮಿಸಿದೆ.

ದಕ್ಷಿಣ ಭಾರತದಲ್ಲಿ ಕೆ.ಐ.ಎ.ಬಿ. ಅತ್ಯಂತ ನೆಚ್ಚಿನ ಆಯ್ಕೆಯ ಸರಕು ಸಾಗಣೆ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಕೋಲ್ಡ್ ಝೋನ್-ಎಐಎಸ್‍ಎಟಿಎಸ್ ಕೂಲ್‍ಪೋರ್ಟ್ ಕೂಲರ್ ವ್ಯವಸ್ಥೆ ಇದ್ದು, ಇದು  ವಾರ್ಷಿಕ 40,000 ಮೆಟ್ರಿಕ್ ಟನ್‍ಗಳಷ್ಟು ವಸ್ತುಗಳನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ದಾಳಿಂಬೆ ರಫ್ತಿನಲ್ಲಿ ನಿಗದಿತ ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದು, ರೈತ ಕೈಗಳಿಗೆ ಶಕ್ತಿ ತುಂಬಿದೆ.

Comments are closed.