ಬಿಗ್ ಬಾಸ್ ನಿಂದ ಹೊರಬಿದ್ದ ವಾಸುಕಿ : ಶೈನ್ ಶೆಟ್ಟಿ, ಕುರಿ ಪ್ರತಾಪ್ ನಡುವೆ ಬಿಗ್ ಫೈಟ್

0

ಬೆಂಗಳೂರು : ಕಿರುತೆರೆಯಲ್ಲಿ ಪ್ರೇಕ್ಷಕರನ್ನು ಕುತೂಹಲದಲ್ಲಿ ಕೂರಿಸಿದ್ದ ಬಿಗ್ ಬಾಸ್ ಶೋ 7ನೇ ಆವೃತ್ತಿ ಫೈನಲ್ ಹಂತವನ್ನು ತಲುಪಿದೆ. ಫಿನಾಲೆ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿ ಮಾಡಿದೆ. ಟಾಪ್ 2 ಫೈನಲಿಸ್ಟ್ ಸಾಲಿನಲ್ಲಿರ್ತಾರೆ ಅಂತಾ ನಿರೀಕ್ಷಿಸಿದ್ದ ವಾಸುಕಿ ವೈಭವ್ ಬಿಗ್ ಬಾಸ್ ನಿಂದ ಹೊರಬಿದ್ದಿದ್ದು, ಎರಡನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಫೈನಲ್ ಪ್ರವೇಶಿಸಿದ್ದ ಭೂಮಿ ಶೆಟ್ಟಿ, ದೀಪಿಕಾ ದಾಸ್ ಹೊರಬಿದ್ದಿದ್ದು, ಇದೀಗ ವಾಸುಕಿ ವೈಭವ್ ಕೂಡ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಹೀಗಾಗಿ ಶೈನ್ ಶೆಟ್ಟಿ ಹಾಗೂ ಕುರಿ ಪ್ರತಾಪ್ ನಡುವೆ ಬಿಗ್ ಬಾಸ್ ಪಟ್ಟಕ್ಕಾಗಿ ಬಿಗ್ ಫೈಟ್ ನಡೆಯುತ್ತಿದೆ.

Leave A Reply

Your email address will not be published.