ಬೋವಿ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ನೀಡಿ : ಕೆ.ಜಯಪ್ರಕಾಶ್ ಹೆಗ್ಡೆ

ಕುಂದಾಪುರ : ಉತ್ತರ ಕನ್ನಡದಲ್ಲಿ ಬೋವಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಆದರೆ ಕುಂದಾಪುರ ತಾಲೂಕಿನಲ್ಲಿ ಯಾಕೆ ಜಾತಿ ಪ್ರಮಾಣ ಪತ್ರವನ್ನು ನೀಡಲಾಗುತ್ತಿಲ್ಲ. ಕೂಡಲೇ ಬೋವಿ ಜನಾಂಗದವರಿಗೆ ಜಾತಿ ಪ್ರಮಾಣಪತ್ರ ವನ್ನು ನೀಡಬೇಕೆಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರು ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಲವೆಡೆಗಳಿಗೆ ಭೇಟಿ ನೀಡಿದ ಹಿಂದುಳಿದ ವರ್ಗಗಳ ಆಯೋಗ, ಕೇದೂರಿನಲ್ಲಿ ಬೋವಿ ಸಮಾಜ ಬಾಂಧವರ ಸಮಸ್ಯೆಯನ್ನು ಆಲಿಸಿದೆ. ನಂತರ ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ್ದಾರೆ. ಅಲ್ಲದೇ ಕುಂದಾಪುರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಜೊತೆಗೆ ಸಭೆಯನ್ನು ನಡೆಸಿ ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸುವಂತೆಯೂ ಸೂಚನೆಯನ್ನು ನೀಡಿದ್ದಾರೆ.

ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳಲ್ಲಿರುವ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ, ಈ ಬಾರಿ ಕೇವಲ ಎಚ್ಚರಿಕೆಯನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿಯೂ ಸಮಸ್ಯೆ ಪುನರಾವರ್ತನೆಯಾದ್ರೆ ಶಿಸ್ತುಕ್ರಮಕೈಗೊಳ್ಳಲಾಗುತ್ತದೆ. ವಿದ್ಯಾರ್ಥಿಗಳ ಊಟ, ವಸತಿ ವ್ಯವಸ್ಥೆಯನ್ನು ಸಮರ್ಪಕವಾಗಿ ಒದಗಿಸುವಂತೆಯೂ ಅವರು ಸೂಚನೆಯನ್ನು ನೀಡಿದ್ದಾರೆ.

ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿಯಲ್ಲಿರುವ ಹಾಸ್ಟೆಲ್ ಗೆ ಆಯೋಗ ಭೇಟಿ ನೀಡಿದ ಸಂದರ್ಭದಲ್ಲಿ ಆಯೋಗದ ಸದಸ್ಯ ಅರುಣ್ ಕುಮಾರ್ ಕಲ್ಲುಗದ್ದೆ ಅವರು ವಿದ್ಯಾರ್ಥಿಗಳಲ್ಲಿ ಸಮಸ್ಯೆಯನ್ನು ಕೇಳಿದ್ದಾರೆ. ಈ ವೇಳೆಯಲ್ಲಿ ವಿದ್ಯಾರ್ಥಿಗಳು ಸೊಳ್ಳೆ ಕಾಟ, ಸಂಜೆಯ ವೇಳೆಯಲ್ಲಿ ಉಪಹಾರದ ಅವ್ಯವಸ್ಥೆ, ಬೆಡ್ ಶೀಟ್ ಸಮಸ್ಯೆ ಸೇರಿದಂತೆ ಹಲವು ದೂರು ನೀಡಿದ್ದರು.

ಸಮಸ್ಯೆಯನ್ನು ಸಂಬಂಧಪಟ್ಟ ವರು ಕೂಡಲೇ ಸರಿಪಡಿಸಬೇಕು. ಇಲ್ಲವಾದ್ರೆ ಲೋಪವೆಸಗಿದ ಈ ಹಿಂದಿನ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡುವಂತೆಯೂ ಸೂಚನೆಯನ್ನು ನೀಡಿದ್ದಾರೆ.

ಇನ್ನು ಕೋಟೇಶ್ವರದ ಸರಕಾರಿ ಹಾಸ್ಟೆಲ್ ಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸಿಬ್ಬಂಧಿಗಳು ತಮ್ಮ ಅಳಲನ್ನು ತೋಡಿಕೊಂಡಿ ದ್ದಾರೆ. ತಮಗೆ ವೇತನವನ್ನು ಸರಿಯಾದ ಸಮಯದಲ್ಲಿ ನೀಡುತ್ತಿಲ್ಲ. ಹೊರಗುತ್ತಿಗೆ ಹುದ್ದೆಯನ್ನು ತೆಗೆದು ಹುದ್ದೆಯನ್ನು ಖಾಯಂ ಗೊಳಿಸುವಂತೆಯೂ ಮನವಿಯನ್ನು ಮಾಡಿದ್ದಾರೆ.

ಇದನ್ನೂ ಓದಿ : 7 ನಿಮಿಷ ಕಣ್ಣೆದುರಲ್ಲೇ ತಯಾರಾಗುತ್ತೆ ಕೇಕ್ : ಕುಂದಾಪುರಕ್ಕೆ ಬಂದಿದೆ 7th Heaven

https://kannada.newsnext.live/7minutes-of-tearing-cake-came-to-kundapur-7th-heaven/

ರಾಜ್ಯ ಹಿಂದುಳಿದ ಆಯೋಗದ ಸದಸ್ಯರಾದ ಅರುಣ್ ಕುಮಾರ್ ಕಲ್ಲುಗದ್ದೆ, ಕೆ.ಟಿ.ಸುವರ್ಣ, ಬಿ.ಎಸ್.ರಾಜಶೇಖರ್, ಎಚ್.ಎಸ್ ಕಲ್ಯಾಣ್ ಕುಮಾರ್ ಅವರು ಆಯೋಗದಲ್ಲಿದ್ದರು. ಎಸಿ ರಾಜು ಕೆ., ತಹಶೀಲ್ದಾರ್ ಆನಂದಪ್ಪ ಎಚ್.ನಾಯ್ಕ್, ಹಿಂದುಳಿದ ವರ್ಗಗಳ ಇಲಾಖೆಯಯ ಅಧಿಕಾರಿ ದಯಾನಂದ, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪ್ರಮುಖರಾದ ಕೇಶವ ಶೆಟ್ಟಿಗಾರ್, ಗಣೇಶ್ ಕೆ, ಬಿಜೆಪಿ ಮುಖಂಡರಾದ ಶಂಕರ ಅಂಕದ ಕಟ್ಟೆ, ಕಿಶೋರ್ ಕುಮಾರ್, ಮೀನುಗಾರಿಕೆ ಇಲಾಖೆಯ ಹೇಮಲತಾ, ಪುರಸಭಾ ಸದಸ್ಯ ಗಿರೀಶ್ ಜಿ.ಕೆ ಮುಂತಾದವರು ಉಪಸ್ಥಿತರಿದ್ದರು.

Comments are closed.