ರೈತರಿಗೆ ವಿಷಬೂದಿ ಭಾಗ್ಯ ಕರುಣಿಸಿದ ಕರೊಮಂಡಲ್ : ಬೆಳೆ ಉಳಿಸಿಕೊಳ್ಳಲು ಅನ್ನದಾತರ ಹರಸಾಹಸ

0

ಮಂಡ್ಯ : ಆ ಗ್ರಾಮಗಳ ಅನ್ನದಾತರು ಸಾಲಸೋಲ ಮಾಡಿ ಅಡಿಕೆ, ಮೆಕ್ಕೆಜೋಳ, ತೆಂಗು ಬೆಳೆ ಬೆಳೆದಿದ್ದರು. ಉತ್ತಮ ಫಲವೂ ಸಿಗ್ತಾ ಇದ್ದಿದ್ರಿಂದ ರೈತರು ಕೂಡ ನೆಮ್ಮದಿಯಾಗಿದ್ರು. ಆದ್ರೆ ಸಕ್ಕರೆ ಕಾರ್ಖಾನೆಯಿಂದ ಹೊಸ ಸೂಸುತ್ತಿರೋ ವಿಷಕಾರಿ ಬೂದಿ ರೈತ ಫಸಲಿಗೆ ಮಾರಕವಾಗಿದ್ದು, ಬೆಳೆ ಕಳೆದುಕೊಳ್ಳೋ ಆತಂಕವನ್ನು ತಂದೊಡ್ಡಿದೆ.

ಮಂಡ್ಯ ಜಿಲ್ಲೆಯ ಮಾಕವಳ್ಳಿಯಲ್ಲಿರೋ ಕೋರಮಂಡಲ್ ಸಕ್ಕರೆ ಕಾರ್ಖಾನೆಯಿಂದ ಹೊಸ ಸೂಸೋ ವಿಷಕಾರಿಯಾಗಿರೋ ಬೂದಿ ಇದೀಗ ರೈತರ ಬೆಳೆಗಳಿಗೆ ಹಾನಿ ಮಾಡುತ್ತಿದೆ. ವಿಷಕಾರಿ ಬೂದಿ ತೆಂಗು, ಅಡಿಕೆಯ ಮರದ ಗರಿಯ ಮೇಲೆ ಕೂರುವುದರಿಂದ ಮರಗಳಲ್ಲಿನ ಫಸಲು ಕುಂಠಿತವಾಗುತ್ತಿದೆ. ಇನ್ನು ಮಾಕವಳ್ಳಿ ಸುತ್ತಮುತ್ತಿನ ಗ್ರಾಮಗಳಲ್ಲಿ ಹೇರಳ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯುತ್ತಿದ್ದು, ವಿಷಕಾರಿ ಬೂದಿಯಿಂದ ಮೆಕ್ಕೆಜೋಳದ ಫಸಲು ನೆಲಕಚ್ಚುತ್ತಿದೆ.


ಕೇವಲ ಬೆಳೆ ನಾಶವಾಗುತ್ತಿರೋದು ಮಾತ್ರವಲ್ಲ ಜನರ ಆರೋಗ್ಯದ ಮೇಲೆಯೂ ಗಂಭೀರವಾದ ಪರಿಣಾಮವನ್ನು ಬೀರುತ್ತಿದೆ. ಹಲವರು ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೂ ದಾಖಲಾಗಿದ್ದಾರೆ. ಈ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ.

ಹೀಗಾಗಿ ನಿನ್ನೆ ಗ್ರಾಂಕ್ಕೆ ಆಗಮಿಸಿದ ಗ್ರಾಮಸ್ಥರನ್ನು ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ. ಕುಂಟು ನೆಪ ಹೇಳಿ ಕಾಟಾಚಾರಕ್ಕೆ ವರದಿ ಸಿದ್ದಪಡಿಸಲು ಮುಂದಾದ ಅಧಿಕಾರಿಗಳ ಬೆವರಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಕಾರ್ಖಾನೆಯಿಂದ ರೈತರಿಗಾಗುತ್ತಿರೋ ಅನ್ಯಾಯವನ್ನು ಸರಿಪಡಿಸುವಂತೆ ರೈತರು ಅಧಿಕಾರಿಗಳಿಗೆ ಮನವಿ ಮಾಡಿದ್ರು. ರೈತ ಮುಖಂಡರಾಗಿರೋ ಕರೋಟಿ ತಮ್ಮಯ್ಯ, ಮಾಕವಳ್ಳಿ ಕೆಂಗೆಗೌಡಸ್ವಾಮಿ, ಹುಚ್ಚೇಗೌಡ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.