ಬ್ರಿಟನ್ ನಿಂದ ಬಂದಿದ್ದ 151 ಮಂದಿ ನಾಪತ್ತೆ ! ರಾಜ್ಯಕ್ಕೆ ಎದುರಾಗಿದೆ ಬ್ರಿಟನ್ ವೈರಸ್ ಸಂಕಷ್ಟ

ಬೆಂಗಳೂರು : ಕೊರೊನಾ ವೈರಸ್ ಸೋಂಕು ತಗ್ಗಿದ ಬೆನ್ನಲ್ಲೇ ರಾಜ್ಯಕ್ಕೀಗ ಬ್ರಿಟನ್ ವೈರಸ್ ತಲೆನೋವಾಗಿ ಪರಿಣಮಿಸಿದೆ. ಅದ್ರಲ್ಲೂ ಬ್ರಿಟನ್ ನಲ್ಲಿ ಕೊರೊನಾ ಹೊಸ ವೈರಸ್ ಪತ್ತೆಯಾದ ದಿನವೇ ಬೆಂಗಳೂರಿಗೆ ವಿದೇಶದಿಂದ ಬಂದಿಳಿದವರ ಪೈಕಿ 151 ಮಂದಿ ನಾಪತ್ತೆಯಾಗಿರೋದು ಆತಂಕ ಮೂಡಿಸಿದೆ.

ಬ್ರಿಟನ್ ವೈರಸ್ ಸೋಂಕು ವಿಶ್ವದಾದ್ಯಂತ ಆತಂಕವನ್ನು ಮೂಡಿಸಿದೆ. ಬ್ರಿಟನ್, ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮರಣ ಮೃದಂಗವನ್ನೇ ಬಾರಿಸಿರುವ ಬ್ರಿಟನ್ ವೈರಸ್ ಸೋಂಕು ಇದೀಗ ರಾಜ್ಯಕ್ಕೂ ಕಾಲಿಟ್ಟಿದೆ. ಅದ್ರಲ್ಲೂ ರಾಜ್ಯಕ್ಕೆ ವಿದೇಶದಿಂದ ಬಂದಿಳಿದಿರುವ ಸುಮಾರು 151 ಮಂದಿ ಪ್ರಯಾಣಿಕರು ನಾಪತ್ತೆಯಾಗಿದ್ದಾರೆ.

ಬ್ರಿಟನ್ ನಲ್ಲಿ ಹೊಸ ಕೊರೊನಾ ವೈರಸ್ ಸೋಂಕು ಪತ್ತೆಯಾದ ದಿನದಂದೇ ವಿದೇಶಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸುಮಾರು 1585 ಮಂದಿ ಆಗಮಿಸಿದ್ದರು. ಈ ಪೈಕಿ 11 ಮಂದಿ ವಿದೇಶಿ ಪ್ರಯಾಣಿಕರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 28 ಮಂದಿಯನ್ನೂ ಕ್ವಾರಂಟೈನ್ ಮಾಡಲಾಗಿದೆ. ಆದರೆ ಈ ಪ್ರಯಾಣಿಕರ ಪೈಕಿ 151 ಮಂದಿಯ ಸುಳಿವು ಪತ್ತೆಯಾಗಿಲ್ಲದಿರೋದು ಬ್ರಿಟನ್ ವೈರಸ್ ತನಿಖಾಧಿಕಾರಿಗಳಿಗೆ ನಿದ್ದೆಗೆಡಿಸಿದೆ.

ವಿದೇಶದಿಂದ ಬಂದಿದ್ದ 11 ಮಂದಿಯಲ್ಲಿ ಕಂಡು ಬಂದಿರುವುದು ಕೊರೊನಾ ರೂಪಾಂತರ ವೈರಸ್ ಅಥವಾ ಕೊರೊನಾ ವೈರಸ್ ಅನ್ನೋದು ಪತ್ತೆಯಾಗಿಲ್ಲ. ಈಗಾಗಲೇ ಸೋಂಕಿತ ಸ್ವಾಬ್ ಗಳನ್ನು ಮೈಕ್ರೋ ಲ್ಯಾಬ್ ಗೆ ರವಾನಿಸಲಾಗಿದೆ. ವರದಿ ಬಂದ ನಂತರವೇ ಎಲ್ಲಾ ಆತಂಕಗಳಿಗೂ ತೆರೆ ಬೀಳಲಿದೆ.

ಅದ್ರಲ್ಲೂ ನಾಪತ್ತೆಯಾಗಿರುವ 151 ಮಂದಿ ಬೆಂಗಳೂರಿನವರೇ ಅಥವಾ ಹೊರ ಜಿಲ್ಲೆಯವರಾ ಅನ್ನೋದು ಗೊತ್ತಾಗಿಲ್ಲ. ಒಂದೊಮ್ಮೆ ನಾಪತ್ತೆಯಾದವರಲ್ಲಿ ಸೋಂಕು ಕಾಣಿಸಿಕೊಂಡ್ರೆ ರಾಜ್ಯಕ್ಕೆ ವ್ಯಾಪಿಸುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ನಾಪತ್ತೆಯಾದವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡುತ್ತಿದ್ದಾರೆ. ಒಂದೊಮ್ಮೆ ಉದ್ದೇಶಪೂರ್ವಕವಾಗಿಯೇ ನಾಪತ್ತೆಯಾಗಿದ್ರೆ ಅಂತಹವರ ವಿರುದ್ದ ಪ್ರಕರಣ ದಾಖಲು ಮಾಡುವುದುಆಗಿ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಅವರು ತಿಳಿಸಿದ್ದಾರೆ.

Comments are closed.