ಪ್ರೇಮಿಗಳ ದಿನಕ್ಕೆ ವಿಶೇಷ ಉಡುಗೊರೆ : ಪತ್ನಿಗೆ ಕಿಡ್ನಿಯನ್ನೇ ಗಿಫ್ಟ್ ಕೊಟ್ಟ ಪತಿ..!

ಅಹಮದಾಬಾದ್ : ಇಂದು ಪ್ರೇಮಿಗಳ ದಿನ. ಪ್ರೇಮಿಗಳು ಪರಸ್ಪರ ಶುಭಾಶಯ ಕೋರುತ್ತಾ, ಗಿಫ್ಟ್ ಎಕ್ಸ್ ಚೇಂಜ್ ಮಾಡಿಕೊಳ್ಳುವುದು ಮಾಮೂಲು. ಆದ್ರೆ ಇಲ್ಲೊಬ್ಬ ಪತಿ ತನ್ನ ಪತ್ನಿಗೆ ಜೀವನದಲ್ಲೇ ಮರೆಯಲಾಗದ ಗಿಫ್ಟ್ ಕೊಟ್ಟಿದ್ದಾನೆ. ಪ್ರೇಮಿಗಳ ದಿನದಂದೇ ಪ್ರೀತಿಯ ಸಂಕೇತವಾಗಿ ತನ್ನ ಕಿಡ್ನಿಯನ್ನೇ ದಾನ ಮಾಡಿದ್ದಾನೆ.

ಅಹಮದಾಬಾದ್ ನ ವಿನೋದ್ ಪಟೇಲ್ ಹಾಗೂ ರೀಟಾ ಪಟೇಲ್ ದಂಪತಿಗಳು ಪ್ರೇಮಿಗಳ ದಿನದಂದೇ ತಮ್ಮ 23ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಪತ್ನಿಗೆ ಅಪರೂಪದ ಗಿಫ್ಟ್ ಕೊಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ರೀಟಾ ಪಟೇಲ್ ಕಳೆದ ಮೂರು ವರ್ಷಗಳಿಂದಲೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಡಯಾಲಿಸಿಸ್ ಮಾಡುವ ವೇಳೆಯಲ್ಲಿ ಪತ್ನಿ ನೋವಿನಿಂದ ಬಳಲುತ್ತಿರೋದನ್ನು ಕಂಡ ಪತಿ ವಿನೋದ್ ಪಟೇಲ್ ಪತ್ನಿಗೆ ಕಿಡ್ನಿದಾನ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ನಂತರದಲ್ಲಿ ಇಬ್ಬರೂ ವೈದರ ಬಳಿಯಲ್ಲಿ ತಪಾಸಣೆಗೆ ಒಳಪಡಿಸಿದಾಗ ಕಿಡ್ನಿ ಹೊಂದಿಕೆಯಾಗುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿನೋದ್ ಅವರ ಕಿಡ್ನಿಯನ್ನು ಪತ್ನಿ ರೀಟಾ ಅವರಿಗೆ ಅಳವಡಿಸಲಾಗುತ್ತಿದೆ. ಅಹಮದಾಬಾದ್‌ನ ಡಾ. ಸಿದ್ಧಾರ್ಥ ಮಾವಾನಿ ಅವರು ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದಾರೆ. ಮೊದಲ ಬಾರಿಗೆ, ಪ್ರೇಮಿಗಳ ದಿನದಂದು, ನಾವು ಶಸ್ತ್ರಚಿಕಿತ್ಸೆ ನಡೆಸುತ್ತೇವೆ. ನಾವು ತುಂಬಾ ಉತ್ಸುಕರಾಗಿದ್ದೇವೆ. ವಿನೋದ್ ತನ್ನ ಹೆಂಡತಿಯ ನೋವನ್ನು ನೋಡಿ ತನ್ನ ಮೂತ್ರಪಿಂಡವನ್ನು ದಾನ ಮಾಡಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ನನ್ನ ಹೆಂಡತಿ ಕಳೆದ ಮೂರು ವರ್ಷಗಳಿಂದ ಈ ಕಾಯಿಲೆಯಿಂದ ಬಳಲುತ್ತಿದ್ದಳು ಮತ್ತು ಒಂದು ತಿಂಗಳ ಹಿಂದೆಯೇ ಡಯಾಲಿಸಿಸ್‌ಗೆ ಒಳಪಡಿಸಲಾಯಿತು. ಅವಳ ನೋವನ್ನು ನೋಡಿ ನಾನು ನನ್ನ ಮೂತ್ರಪಿಂಡವನ್ನು ದಾನ ಮಾಡಲು ನಿರ್ಧರಿಸಿದೆ. ಆಕೆಗೆ 44 ವರ್ಷ. ಪ್ರತಿಯೊಬ್ಬರೂ ತಮ್ಮ ಸಂಗಾತಿಯನ್ನು ಗೌರವಿಸಬೇಕು ಮತ್ತು ಅಗತ್ಯವಿದ್ದಾಗ ಪರಸ್ಪರ ಸಹಾಯ ಮಾಡಬೇಕು ಎಂಬ ಸಂದೇಶವನ್ನು ನಾನು ಸಮಾಜಕ್ಕೆ ನೀಡಲು ಬಯಸುತ್ತೇನೆ ಎಂದು ವಿನೋದ್ ಹೇಳಿದ್ದಾರೆ.

ಪತಿಗೆ ಕೃತಜ್ಞತೆ ಸಲ್ಲಿಸಿದ ರೀಟಾ, ಕಷ್ಟದ ಸಮಯದಲ್ಲಿ ತನ್ನನ್ನು ಬೆಂಬಲಿಸಿದ ಅದ್ಭುತ ಪಾಲುದಾರನನ್ನು ಹೊಂದಲು ತಾನು ಅದೃಷ್ಟಶಾಲಿ ಎಂದು ಪರಿಗಣಿಸಿದ್ದೇನೆ ಎಂದು ಹೇಳಿದರು. ನಾನು ಉಸಿರಾಟದಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದೆ. ನನ್ನ ಪತಿ ತನ್ನ ಒಂದು ಮೂತ್ರಪಿಂಡವನ್ನು ನನಗೆ ದಾನ ಮಾಡುತ್ತೇನೆ ಮತ್ತು ನಾವಿಬ್ಬರೂ ಒಟ್ಟಿಗೆ ಬದುಕಬಹುದು ಎಂದು ಹೇಳಿದ್ದರು. ನಾನು ಮತ್ತೆ ಬದುಕಲು ಸಾಧ್ಯವಾಗುತ್ತದೆ ಎಂದು ನಾನು ಅದೃಷ್ಟಶಾಲಿ ಎಂದು ಪರಿಗಣಿಸುತ್ತೇನೆ. ನನ್ನ ಪತಿ ಮತ್ತು ನನ್ನ ಕುಟುಂಬಕ್ಕೆ ನಾನು ಕೃತಜ್ಞಳಾಗಿದ್ದೇನೆ ಎಂದಿದ್ದಾರೆ. ಒಟ್ಟಿನಲ್ಲಿ ವಿನೋದ್ ಹಾಗೂ ರೀಟಾ ದಂಪತಿ ನಿಜಕ್ಕೂ ಇತರರಿಗೆ ಮಾದರಿಯಾಗಿದ್ದಾರೆ.

Comments are closed.