ರಾಪರ್ ಜಗತ್ತಿನಲ್ಲಿ ಹೊಸ ಕತೆ….! ಮೇಘಾ ಶೆಟ್ಟಿ ನಡಿತಿದ್ದಾರೆ ಚಂದನ್ ಜೊತೆ-ಜೊತೆ….!!

ರ್ಯಾಪಿಂಗ್ ಜಗತ್ತಿನಲ್ಲಿ ಹೊಸ ಶಕೆ ಸೃಷ್ಟಿಸಿದ ರ್ಯಾಪರ್ ಹಾಗೂ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಹೊಸ ಸಾಹಸವೊಂದಕ್ಕೆ ಅಡಿ ಇಟ್ಟಿದ್ದು, ನೋಡು ಶಿವ ಎನ್ನುತ್ತ ಅದ್ದೂರಿ ರ್ಯಾಪ್ ಸಾಂಗ್ ಚಿತ್ರೀಕರಣಕ್ಕೆ ಮುಂದಾಗಿದ್ದಾರೆ.

ಚಂದನ್ ಶೆಟ್ಟಿಯ ಈ ಸಾಹಸದಲ್ಲಿ ಜೊತೆ-ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ. ನೋಡು ಶಿವ ಎಂಬ ಸಾಲುಗಳಿಂದ ಆರಂಭವಾಗೋ ಈ ಕನ್ನಡ ರ್ಯಾಪ್ ಹಾಡಿಗೆ ಚಂದನ ಶೆಟ್ಟಿ ಸಂಗೀತ ನೀಡಿದ್ದು, ಅವರೇ ಹಾಡಿದ್ದಾರೆ.

ಸುಮಿತ್ ಎಂ .ಕೆ ಚಂದನ್ ಗಾಗಿ ಸಾಹಿತ್ಯ ರಚಿಸಿದ್ದು, ಹಾಡಿನಲ್ಲೂ ಬಂದು ಹೋಗುತ್ತಾರಂತೆ. ಇನ್ನು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸದಾ ಮುಗ್ಧೆಯಂತೆ ಪೋಸು ಕೊಡೋ ಮೇಘಾ ಶೆಟ್ಟಿ ಈ ಸಾಂಗ್ ನಲ್ಲಿದ್ದು ಸಖತ್ ಮಾಡರ್ನ್ ಆಗಿ ಕಾಣಿಸಿಕೊಂಡಿದ್ದಾರಂತೆ.

ಎಎಂಸಿ ಗ್ರೂಪ್ ಆಫ್ ಇನ್ಸಿಟ್ಯೂಷನ್ಸ್ ನ ವೈಸ್ ಪ್ರೆಸಿಡೆಂಟ್ ಮೋನಿಕಾ‌ ಕಲ್ಲೂರಿ ಈ ಅಲ್ಬಂ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಎಲ್ಲದರಲ್ಲೂ ಸೋತ ಹುಡುಗನೊಬ್ಬ ದೇವರ ಬಳಿ ತನ್ನ ಕಷ್ಟ ತೋಡಿಕೊಳ್ಳುವ ಸಂಗತಿಯನ್ನು ಫನ್ನಿಯಾಗಿ ಚಿತ್ರಿಸಲಾಗಿದೆಯಂತೆ.

ಹಿಂದೆಂದೂ ಮೂಡಿಬಂದಿರದಷ್ಟು ಅದ್ದೂರಿಯಾಗಿ‌ ಹಾಡುಗಳು ಚಿತ್ರೀಕರಣವಾಗುತ್ತಿದ್ದು ,ಈ ಅಲ್ಬಂ ನಿರ್ಮಾಣಕ್ಕಾಗಿ ,೩೦ ಲಕ್ಷ ರೂಪಾಯಿ ವೆಚ್ಚದಲ್ಲಿ ಸೆಟ್ ನಿರ್ಮಿಸಲಾಗಿದೆಯಂತೆ.

ಈ ಹಾಡು ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಮೂಡಿ ಬರಲಿದ್ದು, ೬೦ ವೃತ್ತಿಪರ ಡ್ಯಾನ್ಸರ್ ಗಳು, ೨೦೦ ಕಲಾವಿದರು ಹಾಡಿಗೆ ಹೆಜ್ಜೆ ಹಾಕಲಿದ್ದಾರಂತೆ. ಒಂದು ತಿಂಗಳಿನಿಂದ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ಇತರರು ಹಾಡಿನ ಚಿತ್ರೀಕರಣದ ಸಿದ್ಧತೆಯಲ್ಲಿದ್ದಾರಂತೆ.

Comments are closed.