ಪ್ರೇಯಸಿ ಮನೆಗೆ ಕನ್ನ ಹಾಕಿ 13 ಲಕ್ಷ ದೋಚಿದ ಪ್ರಿಯಕರ ..!

ಮುಂಬೈ : ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಪ್ರಿಯಕರನ ಮೇಲೆ ಅಪಾರ ನಂಬಿಕೆಯಿಟ್ಟಿದ್ದ ಪ್ರೇಯಸಿ ಮನೆಯ ಡೂಪ್ಲಿಕೇಟ್ ಕೀಯನ್ನು ಪ್ರಿಯಕರನಿಗೆ ಕೊಟ್ಟಿದ್ದಾಳೆ. ತಾನು ಮಾಡಿದ ತಪ್ಪಿಗೆ ಬರೋಬ್ಬರಿ 13 ಲಕ್ಷ ರೂಪಾಯಿ ಕಳೆದುಕೊಂಡಿದ್ದಾಳೆ.

ಮುಂಬೈನಲ್ಲಿ ನೆಲೆಸಿದ್ದ ಈಕೆ ಆಗಾಗ ಮನೆಗೆ ಬರುತ್ತಿದ್ದ ಪ್ರಿಯಕರಿಗೆ ಮನೆಯ ಡೂಪ್ಲಿಕೇಟ್ ಕೀ ಕೊಟ್ಟಿದ್ದಳು. ಮನೆಯವರೆಲ್ಲಾ ಟೂರ್ ಹೊರಟಾಗ ತಾನೂ ಪ್ರಿಯಕರನ ಜೊತೆಗೆ ಮನೆಯಲ್ಲಿಯೇ ಉಳಿದುಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದ್ದಳು. ಆದರೆ ಮನೆಯವರು ಒಬ್ಬಂಟಿಯಾಗಿ ಯುವತಿಯನ್ನು ಬಿಟ್ಟು ಹೋಗೋದಕ್ಕೆ ಸಿದ್ದರಿರಲಿಲ್ಲ. ಹೀಗಾಗಿ ಆಕೆ ಕೂಡ ಟೂರ್ ಗೆ ಹೋಗಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲಾ ಅನ್ನೋದನ್ನು ಖಚಿತ ಪಡಿಸಿಕೊಂಡ ಆಸಾಮಿ ತನ್ನ ಪ್ರಿಯತಮೆ ಕೊಟ್ಟಿದ್ದ ಡೂಪ್ಲಿಕೇಟ್ ಕೀ ಬಳಸಿ ಮನೆಯಲ್ಲಿದ್ದ 13 ಲಕ್ಷ ರೂಪಾಯಿಯನ್ನು ದೋಚಿ ಪರಾರಿಯಾಗಿದ್ದಾನೆ.

ಕುಟುಂಬಸ್ಥರು ಮನೆಗೆ ಮರಳಿದಾಗಿ ಕಳ್ಳತನವಾಗಿರೋದು ಬಯಲಿಗೆ ಬಂದಿದೆ. ಪೊಲೀಸರಿಗೆ ದೂರು ಕೊಟ್ಟು ವಿಚಾರಣೆ ನಡೆಸಿದ ವೇಳೆಯಲ್ಲಿ ಮನೆಯ ಡೂಪ್ಲಿಕೇಟ್ ಕೀ ಕೊಟ್ಟಿರೋ ವಿಚಾರವನ್ನು ಯುವತಿ ಬಾಯ್ಬಿಟ್ಟಿದ್ದಾಳೆ. ನಂತರ ಪೊಲೀಸರು ಕಳ್ಳ ಪ್ರಿಯಕರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Comments are closed.