ರಣಜಿ ಟ್ರೋಫಿ: ಡಬಲ್ ಸೆಂಚುರಿ ಬಾರಿಸಿ ಬಿಸಿಸಿಐಗೆ ಸ್ಟ್ರಾಂಗ್ ಮೆಸೇಜ್ ಕೊಟ್ಟ ಅಜಿಂಕ್ಯ ರಹಾನೆ

ಮುಂಬೈ: ಭಾರತ ಟೆಸ್ಟ್ ತಂಡದಿಂದ ಹೊರ ಬಿದ್ದಿರುವ ಮುಂಬೈನ ಅನುಭವಿ ಬ್ಯಾಟ್ಸ್’ಮನ್ ಅಜಿಂಕ್ಯ ರಹಾನೆ (Ajinkya Rahane double century) ರಣಜಿ ಟ್ರೋಫಿ ಪಂದ್ಯದಲ್ಲಿ(Ranji Trophy 2022-23) ಶತಕ ಬಾರಿಸುವ ಮೂಲಕ, ತಮ್ಮನ್ನು ಕಡೆಗಣಿಸುತ್ತಿರುವ ಬಿಸಿಸಿಐಗೆ ಸ್ಟ್ರಾಂಗ್ ಮೆಸೇಜ್ ರವಾನಿಸಿದ್ದಾರೆ.

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆಯುತ್ತಿರುವ ಎಲೈಟ್ ಗ್ರೂಪ್ ‘ಬಿ’ ಹಂತದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಅಜಿಂಕ್ಯ ರಹಾನೆ ಅಮೋಘ ದ್ವಿಶತಕ ಬಾರಿಸಿದರು. ಮೊದಲ ದಿನದಂತ್ಯಕ್ಕೆ ಅಜೇಯ 139 ರನ್ ಗಳಿಸಿದ್ದ ರಹಾನೆ, ದ್ವಿತೀಯ ದಿನದಾಟದಲ್ಲಿ 253 ಎಸೆತಗಳಲ್ಲಿ ದ್ವಿಶತಕ ಪೂರ್ತಿಗೊಳಿಸಿದರು.

ಈ ವರ್ಷದ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್’ಟೌನ್’ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಡಿದ್ದೇ ಕೊನೆ. ನಂತರ ಅಜಿಂಕ್ಯ ರಹಾನೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದು, ರಹಾನೆ ಜಾಗವನ್ನು ಮುಂಬೈನ ಮತ್ತೊಬ್ಬ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ ಆಕ್ರಮಿಸಿಕೊಂಡಿದ್ದಾರೆ.

ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡ ನಂತರ ದೇಶೀಯ ಕ್ರಿಕೆಟ್’ಗೆ ಮರಳಿರುವ ಅಜಿಂಕ್ಯ ರಹಾನೆ ಮುಂಬೈ ತಂಡದ ನಾಯಕತ್ವ ವಹಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿ ಭಾರತ ಟೆಸ್ಟ್ ತಂಡಕ್ಕೆ ಕಂಬ್ಯಾಕ್ ಮಾಡುವ ಗುರಿ ಹೊಂದಿರುವ ರಹಾನೆ, ಆಂಧ್ರಪ್ರದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 44 ರನ್ ಅಷ್ಟೇ ಗಳಿಸಿದ್ದರು.ಆದರೆ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿರುವ 34 ವರ್ಷದ ಅಜಿಂಕ್ಯ ರಹಾನೆ 261 ಎಸೆತಗಳಲ್ಲಿ 26 ಬೌಂಡರಿ ಹಾಗೂ 3 ಸಿಕ್ಸರ್’ಗಳ ನೆರವಿನಿಂದ 204 ರನ್ ಗಳಿಸಿ ಔಟಾದರು.

ಮುಂಬೈ ಪರ ಎಡಗೈ ಓಪನರ್ ಶಸ್ವಿ ಜೈಸ್ವಾಲ್ 195 ಎಸೆತಗಳಲ್ಲಿ 162 ರನ್ ಗಳಿಸಿದ್ರೆ, ನ್ಯೂಜಿಲೆಂಡ್ ಪ್ರವಾಸದಿಂದ ವಾಪಸ್ಸಾಗಿ ರಣಜಿ ಟ್ರೋಫಿ ಟೂರ್ನಿಗೆ ಮರಳಿದ ಸೂರ್ಯಕುಮಾರ್ ಯಾದವ್ 80 ಎಸೆತಗಳಲ್ಲಿ 90 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ ಕೂಡ ಶತಕ ಬಾರಿಸಿ ಅಬ್ಬರಿಸಿದ್ದಾರೆ.

ಇದನ್ನೂ ಓದಿ : Suryakumar Yadav: ರಣಜಿ ಪಂದ್ಯದಲ್ಲೂ ಮುಂದುವರಿದ “ಸೂರ್ಯ” ಶಿಕಾರಿ, ಹತ್ತೇ ರನ್ನಿಂದ ಸೆಂಚುರಿ ಮಿಸ್, ಸಿಗಲಿದ್ಯಾ ಟೆಸ್ಟ್ ಕ್ಯಾಪ್..?

ಇದನ್ನೂ ಓದಿ : India Vs Bangladesh 2nd test : ನಾಳೆಯಿಂದ 2ನೇ ಟೆಸ್ಟ್, ಸೇಡಿನ ಬೆಂಕಿಯಲ್ಲಿ ಧಗ ಧಗಿಸುತ್ತಿದೆ ಟೀಮ್ ಇಂಡಿಯಾ

ಇದನ್ನೂ ಓದಿ : Newsnext special: Manish Pandey IPL 2023 : ಐಪಿಎಲ್‌ನಲ್ಲಿ ಮೊದಲ ಶತಕ ಬಾರಿಸಿದ ಭಾರತೀಯ, ಯಾರ ಪಾಲಾಗಲಿದ್ದಾರೆ ಮನೀಶ್ ಪಾಂಡೆ ?

ಐಪಿಎಲ್ 2023 ಆಟಗಾರರ ಹರಾಜಿಗೆ ಕೇವಲ ಎರಡು ದಿನಗಳು ಬಾಕಿ ಇರುವ ಹೊತ್ತಲ್ಲಿ ಭರ್ಜರಿ ದ್ವಿಶತಕ ಬಾರಿಸಿರುವ ಅಜಿಂಕ್ಯ ರಹಾನೆ, ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ಇತ್ತ ತಮ್ಮ ಸಾಮರ್ಥ್ಯವಿನ್ನೂ ಉಡುಗಿಲ್ಲ ಎಂಬ ಸಂದೇಶವನ್ನು ಬಿಸಿಸಿಐ ಆಯ್ಕೆ ಸಮಿತಿಗೂ ರವಾನಿಸಿದ್ದಾರೆ.

Ajinkya Rahane double century: Ranji Trophy: Ajinkya Rahane gave a strong message to BCCI by scoring a double century.

Comments are closed.