ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯನ್ನು ಕರೆದೊಯ್ದು ಅತ್ಯಾಚಾರವೆಸಗಿದ ಆಟೋ ಚಾಲಕ

ಬೆಂಗಳೂರು : ಬಸ್ಸಿಗಾಗಿ ಕಾಯುತ್ತ ಕುಳಿತಿದ್ದ ವಿದ್ಯಾರ್ಥಿನಿಯೋರ್ವಳಿಗೆ ಡ್ರಾಪ್ ಕೊಡುವ ನಾಟಕವಾಡಿದ ಆಟೋ ಚಾಲಕನೋರ್ವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ ಘಟನ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ.

ಆಟೋ ಚಾಲಕ ಮುಬಾರಕ್ ಎಂಬಾತನೇ ಅತ್ಯಾಚಾರವೆಸಗಿದ ಆಟೋ ಚಾಲಕ. ಬೆಂಗಳೂರಿನ ಕಾಲೇಜೊಂದರಲ್ಲಿ ಕಂಪ್ಯೂಟರ್ ಸೈನ್ಸ್ ಅಭ್ಯಾಸ ಮಾಡುತ್ತಿರುವ ಯುವತಿಯೊಬ್ಬಳು, ಇಂದು ಬೆಳಗ್ಗೆ ಆರು ಗಂಟೆ ಸುಮಾರಿಗೆ ಥಣಿ ಸಂದ್ರ ಮುಖ್ಯ ರಸ್ತೆಯಲ್ಲಿ ಬಸ್ಸಿಗಾಗಿ ಕಾಯತ್ತಿದ್ದ ಳು. ಇದೇ ವೇಳೆಯಲ್ಲಿ ಅಲ್ಲಿಗೆ ಬಂದ ಆಟೋ ಚಾಲಕ ಮುಬಾರಕ್ ವಿದ್ಯಾರ್ಥಿನಿಯನ್ನು ತಲಪಬೇಕಾದ ಸ್ಥಲಕ್ಕೆ ಕರೆದೊಯ್ಯುವ ಭರವಸೆ ನಿಡಿದ್ದಾನೆ.

ಆದರೆ ಆಟೋ ಚಾಲಕ ವಿದ್ಯಾರ್ಥಿನಿಯನ್ನು ಬೆರೆಡೆಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆಯಲ್ಲಿ ಎಚ್ಚೆತ್ತುಕೊಂಡ ಯುವತಿ ಜೋರಾಗಿ ಕೂಗಿಕೊಂಡಿದ್ದಾಳೆ. ಈ ವೇಳೆಯಲ್ಲಿ ಆಟೋ ಚಾಲಕ ತನಗೆ ಹಣ ಬರಬೇಕಾಗಿದೆ. ಒಬ್ಬರಿಂದ ಹಣವನ್ನು ಪಡೆದು ನಿಮ್ಮನ್ನು ನೀವು ತಲುಪ ಬೇಕಾದ ಸ್ಥಳಕ್ಕೆ ತಲುಪಿಸುವುದಾಗಿ ಹೇಳಿದ್ದಾನೆ. ನಂತರ ಕಾಮುಕ ಆಟೋ ಚಾಲಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ.

ಅತ್ಯಾಚಾರಕ್ಕೊಳಗಾ ಯುವತಿ ಕಷ್ಟಪಟ್ಟು ನಿರ್ಜನ ಪ್ರದೇಶದಿಂದ ರಸ್ತೆಗೆ ಬಂದಿದ್ದಾಳೆ. ಈ ವೇಳೆಯಲ್ಲಿ ಬೈಕ್ ಸವಾರರೊಬ್ಬರ ಸಹಕಾರ ದಿಂದ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂಡು ನೀಡಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಆರೋಪಿ ಆಟೋ ಚಾಲಕನನ್ನು ಬಂಧಿಸಿದ್ದಾರೆ.

Comments are closed.