ತೆಂಗಿನ ಕಾಯಿ ಕೊಯ್ಯಲು ಮರವೇರಿದ ವ್ಯಕ್ತಿ ಮಾಡಿದ್ದೇನು ಗೊತ್ತಾ..?

ಮನುಷ್ಯನ ಜೀವನದಲ್ಲಿ ಊಟ,ವ್ಯಾಯಾಮ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ನಿದ್ರೆ ಕೂಡ. 8 ಗಂಟೆಯ ಕಾಲ ನಿದ್ರೆ ಮಾಡಿದರೆ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂಬುದು ಅನೇಕ ಅಧ್ಯಯನಗಳೇ ಬಹಿರಂಗಪಡಿಸಿವೆ. ಹಾಗಾದ್ರೆ ಸರಿಯಾಗಿ ನಿದ್ರೆಯಿಲ್ಲವಾದರೆ ಅದೇನೆಲ್ಲ ಅವಾಂತರ ಸೃಷ್ಟಿಯಾಗುತ್ತೆ ಗೊತ್ತಾ. ತಂಜಾವೂರಿನ ಕರಂತೇಯ ಸರುಕ್ಕೆಯ ವೇಲೂರಿನಲ್ಲಿ ಅಂಥದ್ದೊಂದು ಘಟನೆ ನಡೆದಿದೆ.

ತೆಂಗಿನ ಕಾಯಿ ಕೀಳುವುದರಲ್ಲಿ ಎಕ್ಸ್ಪರ್ಟ್ ಆಗಿದ್ದ ಅಲ್ಲಿನ ನಿವಾಸಿ ಎಂ.ಲೋಕನಾಥನ್ ನಿನ್ನೆ ವ್ಯಕ್ತಿಯೊಬ್ಬರ ತೋಟದಲ್ಲಿ ಕಾಯಿ ಕೀಳಲು ಹೋಗಿದ್ದ.. ಎತ್ತರದ 55 ಅಡಿ ಮರದಲ್ಲಿ ಕಾಯಿ ಕೀಳಲೆಂದು ಮರ ಹತ್ತಿದ. ಆದರೆ ಅಲ್ಲಿಂದ ವಾಪಸ್ ಬರಲೇ ಇಲ್ಲ. ಇನ್ನೇನು ಕಾಯಿ ಕಿತ್ತು ಕೆಳಗೆ ಹಾಕುತ್ತಾನೆ ಎಂದು ಗಂಟೆಗಳ ಕಾಲ ಕಾಯಿಗಾಗಿ ಕಾದು,ಕೂಗಿ ಕರೆದರೂ ಮೇಲಿಂದ ಉತ್ತರ ಬರದಾಗ ದಿಗಿಲುಗೊಂಡರು.

ಏನು ಮಾಡಬೇಕು ಎಂದು ತಿಳಿಯದೆ ಕೊನೆಗೆ ಗ್ರಾಮಸ್ಥರು ತಂಜಾವೂರಿನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ಅಗ್ನಿ ಶಾಮಕದಳದ ಸಿಬ್ಬಂದಿಗೆ ವಿಚಾರ ತಿಳಿಸಿ ಸ್ಥಳಕ್ಕೆ ಕರೆಸಿದ್ದಾರೆ.ಅಗ್ನಿ ಶಾಮಕ ದಳದವರು ಬಂದು ಸ್ಟೀಲ್ ಏಣಿ ಇಟ್ಟು ಮರವನ್ನೇರಿ ನೋಡಿ ಒಂದು ಕ್ಷಣ ಗಾಬರಿಗೊಂಡರು.

ಹೌದು, ಮರವೇರಿದ್ದ ಲೋಕನಾಥನ್ ಅಲ್ಲಿಯೇ ಕಣ್ಣು ಮುಚ್ಚಿದ್ದ, ಆದರೆ ಉಸಿರಾಡುತ್ತಿದ್ದ. ತಕ್ಷಣ ಅವನನ್ನು ಅಗ್ನಿ ಶಾಮಕ ಸಿಬ್ಬಂದಿ ಎಚ್ಚರ ಗೊಳಿಸಿದ್ದಾರೆ. ಆಗ ಲೋಕನಾಥನ್ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಸ್ಟೀಲ್ ಏಣಿಯನ್ನು ನೋಡಿ ಶಾಕ್ ಆಗಿ ನೀವ್ಯಾಕೆ ಇಲ್ಲಿ ಬಂದಿರಿ ಎಂದು ಕೇಳಿದ್ದಾನೆ. ಆಗ ಅಗ್ನಿ ಶಾಮಕ ಸಿಬ್ಬಂದಿ ನಡೆದ ವಿಚಾರ ತಿಳಿಸಿದ್ದಾರೆ.

ಅಯ್ಯೋ ಇಷ್ಟು ದೊಡ್ಡ ಮರ ಏರಿ ಬಂದನಲ್ಲ. ಬಹಳ ಸುಸ್ತಾಗಿತ್ತು. ಯಾವಾಗ ನಿದ್ರೆ ಬಂತೋ ಗೊತ್ತಿಲ್ಲ. ಹಾಗೆಯೇ ಮಲಗಿಬಿಟ್ಟೆ. ಗಾಡ ನಿದ್ರೆ ಬಂದುಬಿಟ್ಟಿತು ಎಂದಿದ್ದಾನೆ. ಕೊನೆಗೆ ಆತನನ್ನು ಬೈದುಕೊಂಡು ಕೆಳಗೆ ಕರೆದು ತಂದಿದ್ದಾರೆ. ಇದಕ್ಕಾಗಿಯೇ ತಿಳಿದವರು ಹೇಳೋದು ನಿದ್ರೆಯ ಮಹತ್ವ ತಿಳಿಯಲೇ ಬೇಕು ಅಂತ.

Comments are closed.