ರಾಜಕೀಯವನ್ನೇ ತ್ಯಜಿಸುತ್ತೇನೆ….! ಹಾಲಿ ಸಿಎಂಗೆ ಮಾಜಿ ಸಿಎಂ ಸವಾಲು…!!

ಆಂಧ್ರಪ್ರದೇಶ: ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿಯನ್ನಾಗಿ ಉಳಿಸಿಕೊಳ್ಳುವ ಹೋರಾಟದಲ್ಲಿ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ಹಾಲಿ ಸಿಎಂಗೆ ಸವಾಲೊಡ್ಡಿದ್ದು, ಜನರು ಅಮರಾವತಿಯನ್ನು ಬದಲಾಯಿಸುವ ನಿರ್ಣಯಕ್ಕೆ ಒಪ್ಪಿದರೇ ರಾಜಕೀಯ ನಿವೃತ್ತಿ ಪಡೆಯುವುದಾಗಿ ಪ್ರಕಟಿಸಿದ್ದಾರೆ.

ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ ನಿರ್ಮಿಸುವ ಪ್ರಸ್ತಾಪವನ್ನು ಹಾಲಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಕೈಗೊಂಡಿದ್ದು, ಇದಕ್ಕೆ ಅಮರಾವತಿಗಾಗಿ ಕೃಷಿಭೂಮಿ ದಾನ ಮಾಡಿದ ರೈತರ ವಿರೋಧ ವ್ಯಕ್ತವಾಗಿತ್ತು. ಈ ರೈತರ ಹೋರಾಟದಲ್ಲಿ ಕೈಜೋಡಿಸಿರುವ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು, ಸಿಎಂ ರಾಜಧಾನಿ ಬದಲಾವಣೆಯ ಬಗ್ಗೆ ಜನಾಭಿಪ್ರಾಯ ಕೋರಬೇಕು.

ರಾಜ್ಯದ ಜನತೆಯ ಸಹಿ ಸಂಗ್ರಹ ಮಾಡಲಿ. ಒಂದೊಮ್ಮೆ ಜನತೆಯ ರಾಜಧಾನಿ ಬದಲಾವಣೆಯ ಪರವಾಗಿ ಸಹಿ‌ ಮಾಡಿದರೇ‌ ನಾನು ರಾಜಕೀಯವನ್ನೇ ತ್ಯಜಿಸುತ್ತೇನೆ ಎಂದು ಜಗನ್‌ಮೋಹನ್ ರೆಡ್ಡಿಗೆ ಸವಾಲೆಸೆದಿದ್ದಾರೆ.

ಅಷ್ಟೇ ಅಲ್ಲ ರಾಜ್ಯದ ರಾಜಧಾನಿ ಅಮರಾವತಿ. ಜನರ ಇಷ್ಟಕ್ಕೆ ವಿರುದ್ಧವಾಗಿ ರಾಜಧಾನಿ ಬದಲಾಯಿಸುವ ನಿರ್ಧಾರ ಕೈಗೊಂಡ ಸಿಎಂ ಜಗನ್ ಮೋಹನ್ ಈ ನಿರ್ಧಾರ ಕೈಬಿಡಬೇಕು. ಹಾಗೂ ಜನರ ಕ್ಷಮೆಯಾಚಿಸಬೇಕೆಂದು ರೆಡ್ಡಿ ಒತ್ತಾಯಿಸಿದ್ದಾರೆ.

ಅಮರಾವತಿಯನ್ನು ರಾಜಧಾನಿಯನ್ನಾಗಿ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಮರಾವತಿಯಲ್ಲಿ ನಡೆದ ಅಮರಾವತಿ ಜನಭೇರಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ದಕ್ಷಿಣ ಆಫ್ರಿಕಾ ಮಾದರಿಯಲ್ಲಿ ಮೂರು ರಾಜಧಾನಿ ರಚಿಸಲು ನಿರ್ಧರಿಸಿದ್ದು ಅದಕ್ಕೆ ಸಚಿವ ಸಂಪುಟದ ಒಪ್ಪಿಗೆ ಪಡೆದಿದ್ದರು.

ಜಗನ್ ಮೋಹನ್ ರೆಡ್ಡಿ, ವಿಶಾಕಪಟ್ಟಣಂ ಅನ್ನು ಕಾರ್ಯಾಂಗ ರಾಜಧಾನಿ,ಅಮರಾವತಿಯನ್ನು ಶಾಸಕಾಂಗ ರಾಜಧಾನಿ ಹಾಗೂ ಕರ್ನೂಲ್ ನ್ನು ನ್ಯಾಯಾಂಗ ರಾಜಧಾನಿ ಮಾಡುವ ಚಿಂತನೆಯಲ್ಲಿದ್ದರು. ಈ ವಿಚಾರ ಹಾಲಿ ಮತ್ತು ಮಾಜಿ ಸಿಎಂಗಳ ನಡುವಿನ ಯುದ್ಧಕ್ಕೆ ನಾಂದಿಯಾಗಿದೆ.

Comments are closed.