ಸಿಲಿಕಾನ್ ಸಿಟಿಯಲ್ಲಿ ನಿಗೂಢ ಸ್ಫೋಟ !

0

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಿಗೂಢ ಸ್ಪೋಟ ಸಂಭವಿಸಿದೆ. ನಗರದ ಆಡುಗೋಡಿಯ ಬಳಿ ಸ್ಪೋಟ ಸಂಭವಿಸಿದ್ದು, ಸ್ಪೋಟದ ತೀವ್ರತೆಗೆ ವ್ಯಕ್ತಿಯೋರ್ವನ ಕಾಲು ತುಂಡಾಗಿದೆ. ಗಾಯಾಳುವನ್ನು ನರಸಿಂಹಯ್ಯ (50 ವರ್ಷ) ಎಂದು ಗುರುತಿಸಲಾಗಿದೆ. ಕಸದ ರಾಶಿಯಲ್ಲಿ ಈ ಸ್ಪೋಟ ಸಂಭವಿಸಿದ್ದು, ಆತಂಕಕ್ಕೆ ಕಾರಣವಾಗಿದೆ. ಗ್ಯಾನೈಟ್ ಕತ್ತರಿಸುವ ಕೆಮಿಕಲ್ ತ್ಯಾಜ್ಯದ ರಾಶಿಗೆ ಎಸೆದಿದ್ದು, ಕೆಮಿಕಲ್ ರಿಯಾಕ್ಷನ್ ನಿಂದಲೇ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಡಿಸಿಪಿ ಶ್ರೀನಾಥ್ ಜೋಷಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
.

Leave A Reply

Your email address will not be published.