ಜೂನ್ 7 ರಿಂದ ಆರಂಭವಾಗಲಿದೆ ಬಿಎಂಟಿಸಿ ಸೇವೆ…! ಸೇವೆಗೆ ಹಾಜರಾಗಲು ನೌಕರರಿಗೆ ಸೂಚನೆ…!!

ಬೆಂಗಳೂರು: ಜೂನ್ 7 ರಂದು ರಾಜ್ಯದಲ್ಲಿ ಜಾರಿಯಾದ ಲಾಕ್ ಡೌನ್ ಮುಕ್ತಾಯಗೊಳ್ಳಲಿದ್ದು, ಲಾಕ್ ಡೌನ್ ಮುಂದುವರಿಕೆ ಬಗ್ಗೆ ಸರ್ಕಾರ ಯಾವುದೇ ಸೂಕ್ತ ತೀರ್ಮಾನ ಕೈಗೊಂಡಿಲ್ಲ. ಈ ಮಧ್ಯೆ ಬಿಎಂಟಿಸಿ ಬಸ್ ಓಡಿಸಲು ಸರ್ಕಾರ ತೀರ್ಮಾನಿಸಿದಂತಿದ್ದು, ಸೇವೆಗ ಹಾಜರಾಗಲು ನೌಕರರಿಗೆ ಸೂಚಿಸಿದೆ.

ಬೆಂಗಳೂರು ಜನರ ಜೀವನಾಡಿಯಂತಿರುವ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಸಾರಿಗೆ ಸಂಸ್ಥೆ ಸಾಕಷ್ಟು ನಷ್ಟದಲ್ಲಿದೆ. ಹೀಗಾಗಿ ಜೂನ್ 7 ರಿಂದ ಮತ್ತೆ ಬಿಎಂಟಿಸಿ ಕಾರ್ಯಾರಂಭ ಮಾಡಲಿದೆ ಎನ್ನಲಾಗುತ್ತಿದೆ.

https://kannada.newsnext.live/sandalwood-shree-harsha-singer-marriage-gouthami-mysore/

ಸರ್ಕಾರ ಲಾಕ್ ಡೌನ್ ಮುಂದುವರಿಕೆಗೆ ನಿರ್ಧರಿಸಿದರೂ ಕೆಲವೊಂದು ಸೇವೆಯಲ್ಲಿ ವಿನಾಯ್ತಿ ಸಿಗುವ ಸಾಧ್ಯತೆ ಇದೆ. ಹೀಗಾಗಿ ಬಿಎಂಟಿಸಿ ಬಸ್ ಸಂಚಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ನೌಕರರಿಗೆ ಜೂನ್ 7 ರಿಂದ ಸೇವೆಗೆ ಹಾಜರಾಗಲು ಸೂಚಿಸಿದೆ. ಸೂಕ್ತ ಕಾರಣ ಇಲ್ಲದೇ ಸೇವೆಗೆ ಗೈರಾಗುವವರ ವಿರುದ್ಧ ಕ್ರಮಜರುಗಿಸುವ ಎಚ್ಚರಿಕೆ ನೀಡಿದೆ.

https://kannada.newsnext.live/rural-hospital-apointed-doctors-governament/

ಬೆಂಗಳೂರಿನಲ್ಲಿ ಹೆಚ್ಚು ಪ್ರಯಾಣಿಕರು ಸಂಚರಿಸುವ ಮಾರ್ಗಗಳಲ್ಲಿ ಹಂತ-ಹಂತವಾಗಿ ಬಿಎಂಟಿಸಿ ಸಂಚಾರ ಆರಂಭಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಹೀಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಆದರೆ ಅಂತಿಮ ತೀರ್ಮಾನ ಸರ್ಕಾರದ ಲಾಕ್ ಡೌನ್ ಭವಿಷ್ಯದ ಬಳಿಕವೇ ನಿರ್ಧಾರವಾಗಲಿದೆ.

https://kannada.newsnext.live/lpg-price-down-good-news/

ಈ ಮಧ್ಯೆ ಸೇವೆಗೆ ಹಾಜರಾಗುವ ಬಿಎಂಟಿಸಿ ನೌಕರರಿಗೆ ಇಲಾಖೆ  ಷರತ್ತು ವಿಧಿಸಿದ್ದು, ಎರಡು ಡೋಸ್ ವಾಕ್ಸಿನೇಶನ್ ಪಡೆದಿರಬೇಕು ಹಾಗೂ ಕೊವೀಡ್ ನೆಗೆಟಿವ್ ವರದಿಯೊಂದಿಗೆ ಸೇವೆಗೆ ಹಾಜರಾಗಬೇಕು ಎಂದು ಸೂಚಿಸಿದೆ.  

ಒಟ್ಟಿನಲ್ಲಿ ಜೂನ್ 7 ರ ನಂತರ ಸಿಲಿಕಾನ ಸಿಟಿ ಬೆಂಗಳೂರು ಸಹಜ ಸ್ಥಿತಿಗೆ ಮರಳುವ ಮುನ್ಸೂಚನೆ ಸಿಕ್ಕಿದ್ದು, ಸರ್ಕಾರದ ನಿರ್ಧಾರದ ಮೇಲೆ ಬಿಎಂಟಿಸಿ ಬಸ್ ಸಂಚಾರದ ಭವಿಷ್ಯ ಅಡಗಿದೆ.

Comments are closed.