ಮನೆಲಿ ಕೂತವರನ್ನುಕರ್ಕೊಂಡೋಗಿ ಓಟು ಹಾಕಿಸಿದ್ರಲ್ಲ….! ಹಾಗೆ ವಾಕ್ಸಿನ್ ಹಾಕಿಸಿ ಸರ್ಕಾರಕ್ಕೆ ಮಿಮಿಕ್ರಿ ದಯಾನಂದ ಆಗ್ರಹ…!!

ಬೆಂಗಳೂರು: ರಾಜ್ಯದ ಎಲ್ಲೆಡೆ ಕೊರೋನಾ ವಾಕ್ಸಿನ್ ಗಾಗಿ ಹಾಹಾಕಾರವೆದ್ದಿದೆ. ಜನರು ಆನ್ ಲೈನ್ ರಜಿಸ್ಟರ್ ಮಾಡಿಕೊಂಡ್ರು ವಾಕ್ಸಿನೇಶನ್ ಸಿಗದೇ ಪರದಾಡುತ್ತಿದ್ದಾರೆ. ಈ ಅವ್ಯವಸ್ಥೆ ಬಗ್ಗೆ ಕಿಡಿಕಾರಿರುವ ನಟ ಹಾಗೂ ಮಿಮಿಕ್ರಿ ಕಲಾವಿದ ದಯಾನಂದ  ಸರ್ಕಾರ ಮುಂದೇ ನಿಂತು ವಾಕ್ಸಿನ್ ಹಾಕಿಸಬೇಕು ಎಂದು ಆಗ್ರಹಿಸಿದ್ದಾರೆ.

 ವಿಜಯನಗರದ ಮೂಡಲಪಾಳ್ಯ ನಿವಾಸಿಯಾಗಿರುವ ಮಿಮಿಕ್ರಿ ದಯಾನಂದ ಎಲ್ಲಿ ವಾಕ್ಸಿನೇಶನ್ ಪಡೆದುಕೊಳ್ಳಬೇಕು ಎಂಬ ಗೊಂದಲದಿಂದ ಪರದಾಡಿದರಂತೆ. ಕೊನೆಗೆ ಅವರ ಸ್ನೇಹಿತ ವೈದ್ಯರ ಮಾರ್ಗದರ್ಶನದಂತೆ ಮನೆ ಸಮೀಪದ ಬಿಬಿಎಂಪಿ ಸೆಂಟರ್ ನಲ್ಲಿ ಪಡೆದುಕೊಂಡಿದ್ದಾರಂತೆ.

ಈ ಹಿನ್ನೆಲೆಯಲ್ಲಿ ವಾಕ್ಸಿನೇಶನ್ ಬಗ್ಗೆ ಆನ್ ಲೈನ್ ನಲ್ಲಿ ಸೂಕ್ತ ಮಾಹಿತಿ ಇಲ್ಲ ಎಂದಿರುವ ಮಿಮಿಕ್ರಿ ದಯಾನಂದ್, ಜನಸಾಮಾನ್ಯರು,ಬಡವರು ವಾಕ್ಸಿನೇಶನ್ ಪಡೆದುಕೊಳ್ಳುವುದು ಹೇಗೆಂದು ಅರ್ಥವಾಗದೇ ಕಂಗಾಲಾಗಿದ್ದಾರೆ. ಆಸ್ಪತ್ರೆಗಳಲ್ಲಿ, ಆರೋಗ್ಯ ಕೇಂದ್ರದಲ್ಲಿ ದಿನಗಟ್ಟಲೇ ಕ್ಯೂ ನಿಂತು ಪರದಾಡುತ್ತಿದ್ದಾರೆ.

ಚುನಾವಣೆಯಲ್ಲಿ ಜವಾಬ್ದಾರಿಯಿಂದ ಮನೆಯಲ್ಲಿ ಕೂತವರನ್ನು ವಾಹನದಲ್ಲಿ ಕರೆದೊಯ್ದು ಮತ ಹಾಕಿಸುವ ನೀವು ಈಗ್ಯಾಕೆ ಮೌನವಾಗಿದ್ದೀರಾ. ಕಡ್ಡಾಯವಾಗಿ ಜನರನ್ನು ಕರೆದೊಯ್ದು ಲಸಿಕೆ ಹಾಕಿಸಿ. ಮನೆಯಲ್ಲಿದ್ದವರ ಮತ ಬೇಕು. ಈಗ ಸಂಕಷ್ಟದಲ್ಲಿರುವ ಜನರ ಆರೋಗ್ಯ ನಿಮ್ಮ ಜವಾಬ್ದಾರಿ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

https://kannada.newsnext.live/bad-loans-sc-allows-banks-to-invoke-personal-guarantees-of-defaulters/

ಜನರು ನಿಜಕ್ಕೂ ಸಂಕಷ್ಟದಲ್ಲಿದ್ದಾರೆ. ಲಾಕ್ ಡೌನ್ ನಿಂದಾಗಿ ದುಡಿಮೆ ಇಲ್ಲದೇ ಪರದಾಡುತ್ತಿದ್ದಾರೆ. ಜನಸಾಮಾನ್ಯರ ಬಳಿ ವಾಕ್ಸಿನ್ ಪಡೆಯಲು ಹೋಗಲು ವಾಹನಗಳಿಲ್ಲ. ದುಡ್ಡುಕೊಟ್ಟು ವಾಕ್ಸಿನ್ ಪಡೆಯುವ ಸ್ಥಿತಿಯಲ್ಲೂ ಜನರಿಲ್ಲ. ಹೀಗಾಗಿ ದಯವಿಟ್ಟು ನೀವೆ ಜವಾಬ್ದಾರಿಯಿಂದ ಜನರಿಗೆ ವಾಕ್ಸಿನ್ ಕೊಡಿಸಿ ಎಂದು ಆಗ್ರಹಿಸಿದ್ದಾರೆ.

ಚುನಾವಣೆಯಲ್ಲಿ ಮತಪಟ್ಟಿಯಲ್ಲಿ ಹೆಸರಿರುವ ಎಲ್ಲರನ್ನು ಹುಡುಕಿಕರೆದೊಯ್ದು ಮತ ಹಾಕಿಸುವ ನೀವು ಈಗ್ಯಾಕೆ ಜನರ ಸಹಾಯಕ್ಕೆ ಬರುತ್ತಿಲ್ಲ? ನಿಮಗೆ ಜನರ ಮತ ಬೇಕು ಬದುಕು ಬೇಡವೇ ಎಂದು ಪ್ರಶ್ನಿಸಿದ್ದಾರೆ.

https://kannada.newsnext.live/new-type-of-coronavirus-originating-in-dogs-found-study/

ಮಿಮಿಕ್ರಿ ದಯಾನಂದ ಸರ್ಕಾರವನ್ನು ಆಗ್ರಹಿಸಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಜನರು ಸರ್ಕಾರ ನಿಜವಾಗಿಯೂ ಜನಸಾಮಾನ್ಯರ ಲಸಿಕೆಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

Comments are closed.