ಕೊರೋನಾ ನಡುವೆ ಪೋಷಕರ ಸಂಕಷ್ಟ….! ಶುಲ್ಕ ಕಡಿಮೆಮಾಡಿ ಎಂದು ಸಿಎಂಗೆ ಪತ್ರ ಬರೆದ ನಟ…!!

ಕೊರೋನಾ ಸಂಕಷ್ಟದಿಂದ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಬಾಗಿಲು ಮುಚ್ಚಿದೆ. ಆದರೆ ಶಾಲಾ-ಕಾಲೇಜುಗಳು ತರಗತಿ ಬಂದ್ ಮಾಡಿದ್ದರೂ ಶುಲ್ಕದಲ್ಲಿ ಯಾವುದೇ ವಿನಾಯ್ತಿ ನೀಡಿಲ್ಲ. ಹೀಗಾಗಿ ಪೋಷಕರ ಕಷ್ಟ ಅರಿತ ಸ್ಯಾಂಡಲ್ ವುಡ್  ನಟ ಕಿರಣರಾಜ್ ಶುಲ್ಕದಲ್ಲಿ ವಿನಾಯ್ತಿ ನೀಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ.

https://kannada.newsnext.live/bad-loans-sc-allows-banks-to-invoke-personal-guarantees-of-defaulters/

ಶಾಲಾ-ಕಾಲೇಜುಗಳು ಆನ್ ಲೈನ್ ತರಗತಿ ನಡೆಸುತ್ತಿದ್ದರೂ ಶುಲ್ಕದಲ್ಲಿ ವಿನಾಯ್ತಿ ನೀಡಿಲ್ಲ. ಹೀಗಾಗಿ ಲಾಕ್ ಡೌನ್, ಕೊರೋನಾ ಸೇರಿದಂತೆ ಹಲವು ಕಾರಣಕ್ಕೆ ಆದಾಯವಿಲ್ಲದೇ ಕಂಗಾಲಾಗಿರುವ ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೀಗಾಗಿ ಕನ್ನಡ ಕಿರುತೆರೆಯ ಕನ್ನಡತಿ ಸೀರಿಯಲ್ ನಟ ಕಿರಣ ರಾಜ್ ಸಿಎಂಗೆ ಪತ್ರ ಬರೆದಿದ್ದಾರೆ. ಶುಲ್ಕ ಪಾವತಿ ಸಂಕಷ್ಟ ಎದುರಿಸುತ್ತಿರುವ ಪೋಷಕರ ಪರವಾಗಿ ಧ್ವನಿ ಎತ್ತಿರುವ ಕಿರಣ ರಾಜ್, ಕೊರೋನಾ ಬಿಕ್ಕಟ್ಟಿನಲ್ಲಿ ಪೂರ್ತಿ ಶುಲ್ಕ ಪಾವತಿಸುವುದು ಕಷ್ಟ. ಹೀಗಾಗಿ ಶುಲ್ಕದಲ್ಲಿ ವಿನಾಯ್ತು ನೀಡುವಂತೆ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಆದೇಶಿಸಬೇಕೆಂದು  ಮನವಿ ಮಾಡಿದ್ದಾರೆ.

https://kannada.newsnext.live/new-type-of-coronavirus-originating-in-dogs-found-study/

ಜಗತ್ತಿನೆಲ್ಲೆಡೆ ಕೊವೀಡ್-19 ವ್ಯಾಪಕವಾಗಿ ಹರಡುತ್ತಿದ್ದು, ಸಾಮಾನ್ಯ ಜನರ ಬದುಕು ಅಲ್ಲೋಲಕಲ್ಲೋಲವಾಗಿದೆ.ಶಾಲಾ ಮಕ್ಕಳು ಆನ್ ಲೈನ್ ಶಿಕ್ಷಣಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲೂ ಶಾಲಾ ಕಾಲೇಜುಗಳು ಶುಲ್ಕ ಕಡಿಮೆ ಮಾಡಿಲ್ಲ. ಹೀಗಾಗಿ ಪೋಷಕರು ಬೀದಿಗೆ ಬರುವ ಸ್ಥಿತಿಯಲ್ಲಿದ್ದಾರೆ.

ಶಾಲಾಕಾಲೇಜುಗಳು ಶುಲ್ಕದಲ್ಲಿ ವಿನಾಯ್ತಿ ನೀಡದಿದ್ದರೇ ಪೋಷಕರು ಸಂಕಷ್ಟಕ್ಕಿಡಾಗಲಿದ್ದಾರೆ. ಹೀಗಾಗಿ ಶುಲ್ಕದಲ್ಲಿ ವಿನಾಯ್ತಿ ನೀಡಬೇಕೆಂದು ಎಲ್ಲಾ ಪೋಷಕರ ಪರವಾಗಿ ಕಿರಣರಾಜ್ ಮನವಿ ಮಾಡಿದ್ದಾರೆ.

ಕಿರಣರಾಜ್ ಈಗಾಗಲೇ ಕೊರೋನಾ ಸಂತ್ರಸ್ಥರಿಗೆ ತಮ್ಮ ಫೌಂಡೆಶನ್ ವತಿಯಿಂದ ಸಹಾಯ ಮಾಡುತ್ತಿದ್ದು, ಊಟ-ಆಹಾರ ಒದಗಿಸಿ  ನೆರವಾಗುತ್ತಿದ್ದಾರೆ.

Comments are closed.