ಉದ್ಯಮಿಗಳಿಗೆ 6 ಪರ್ಸೆಂಟ್ ಬಡ್ಡಿಗೆ ಸಾಲ ಆಮಿಷ…! 2 ಕೋಟಿ ಮೌಲ್ಯದ ಚಿನ್ನದ ಜೊತೆ ತಮಿಳುನಾಡಿನ ಗೋಲ್ಡ್ ಮ್ಯಾನ್ ವಶಕ್ಕೆ…!

ಕೋಟ್ಯಾಂತರ ರೂಪಾಯಿ ಸಾಲದ ನೀರಿಕ್ಷೆಯಲ್ಲಿರೋ ಉದ್ಯಮಿಗಳನ್ನೇ ಟಾರ್ಗೆಟ್ ಮಾಡ್ತಿದ್ದ ಆ ಗೋಲ್ಡ್ ಕೇವಲ 6 ಪರ್ಸೆಂಟ್ ಬಡ್ಡಿಗೆ ಸಾಲ ಕೊಡಿಸೋ ಭರವಸ ನೀಡ್ತಿದ್ದ. ಬಳಿಕ ಪಂಚತಾರಾ ಹೊಟೇಲ್ ನಲ್ಲಿ ಮೀಟಿಂಗ್ ಮಾಡಿ ನಕಲಿ ಡಿಡಿ ತೋರಿಸಿ ಸರ್ವೀಸ್ ಚಾರ್ಜ್ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಪಡೆದು ಪರಾರಿಯಾಗ್ತಿದ್ದ. ಇಂಥ ಖತರ್ನಾಕ ಅಂತರರಾಜ್ಯ ವಂಚಕರ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಬಂಧಿತನಿಂದ ಬರೋಬ್ಬರಿ 3 ಕೆಜಿ ಚಿನ್ನ 8 ಲಕ್ಷ ರೂಪಾಯಿ ಹಾಗೂ ಕಾರು  ವಶಕ್ಕೆ ಪಡೆದಿದ್ದಾರೆ.

https://kannada.newsnext.live/corona-covid-19-chhattisgarh-homeopathic-medicine-bilaspur-8died-5-hospitalized/

ತಮಿಳುನಾಡಿನ ತಿರುನವೇಲಿ ಮೂಲದ ಎ.ಹರಿ ನಾಡರ್ ಅಲಿಯಾಸ್ ಹರಿಗೋಪಾಲ್ ಕೃಷ್ಣ ನಾಡರ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಈತನಿಂದ ಬರೋಬ್ಬರಿ 3.893 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಈತನೊಂದಿಗೆ ಸಹಚರ ಕೇರಳದ ರಂಜಿತ್ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಇವರು ಬೆಂಗಳೂರು ಮೂಲದ ಉದ್ಯಮಿ ವೆಂಕಟ್ರಮಣ ಶಾಸ್ತ್ರಿ ಎಂಬುವವರಿಗೆ 360 ಕೋಟಿ ರೂಪಾಯಿ ಸಾಲ ಕೊಡಿಸುವ ಭರವಸೆ ನೀಡಿದ್ದರು.

https://kannada.newsnext.live/sandlwood-sudeep-bigboss-show-ends-corona-covid-19-rules/

ಬಳಿಕ ಬೆಂಗಳೂರಿನ ಹಲವು ಸ್ಟಾರ್ ಹೊಟೇಲ್ ಕರೆಯಿಸಿ ಮೀಟಿಂಗ್ ಮಾಡಿ ಶಾಸ್ತ್ರಿಗಳ ವಿಶ್ವಾಸ ಸಂಪಾದಿಸಿದ್ದರು. ಬಳಿಕ ಲೋನ್ ಮಂಜೂರಾಗಿದೆ ಎಂದು ನಕಲಿ ಡಿಡಿ ತೋರಿಸಿ ಪ್ರೊಸೆಸಿಂಗ್ ಫೀಸ್ ಸೇರಿದಂತೆ ವಿವಿಧ ಲೆಕ್ಕಾಚಾರದಂತೆ 7.20 ಕೋಟಿ ರೂಪಾಯಿ ಪಡೆದು ಸಾಲವನ್ನು ಕೊಡಿಸದೇ ವಂಚನೆ ಮಾಡಿದ್ದರು.

https://kannada.newsnext.live/indian-cricketer-veda-krishnamoorthi-sister-death-corona-virus/

ಹರಿ ನಾಡರ್ ಮೈಮೇಲೆ ಅಂದಾಜು ಕೆಜಿ ಲೆಕ್ಕದ  ಚಿನ್ನಾಭರಣವನ್ನು ಧರಿಸಿದ್ದು, ಗೋಲ್ಡ್ ಮ್ಯಾನ್ ಎಂದೇ ಖ್ಯಾತಿ ಪಡೆದುಕೊಂಡಿದ್ದು, ಈತನ ಮೈಮೇಲಿರುವ ಚಿನ್ನವನ್ನು ನೋಡಿದ ಜನರು ಈತನ ಮಾತನ್ನು ಸತ್ಯವೆಂದು ನಂಬುತ್ತಿದ್ದರು. ಕೇವಲ ಕರ್ನಾಟಕ ಮಾತ್ರವಲ್ಲದೇ ಕೇರಳ, ತೆಲಂಗಾಣ,ಆಂಧ್ರಪ್ರದೇಶ,ಗುಜರಾತ,ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯದ ಉದ್ಯಮಿಗಳಿಗೆ ಹರಿ ನಾಡರ್ ಮೋಸಮಾಡಿದ್ದರು ಎನ್ನಲಾಗಿದ್ದು, ತನಿಖೆ ಮುಂದುವರೆದಿದೆ.

ಗೋಲ್ಡ್ ಮ್ಯಾನ್ ಖ್ಯಾತಿಯ ಹರಿ ನಾಡರ್ ಮೊನ್ನೆಯಷ್ಟೇ ಮುಕ್ತಾಯಗೊಂಡ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಅಲಗುಲಂ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ. ಆದರೆ ಈತನ ವಿರುದ್ಧ  ಎಐಎಡಿಎಂಕೆ ಪೌಲ್ ಮನೋಜ್ ಪಾಡ್ಯನ್ ಗೆಲುವು ಸಾಧಿಸಿದ್ದರು. ಇದಕ್ಕೂ ಮುನ್ನ 2019 ರ ಲೋಕಸಭಾ ಚುನಾವಣೆಯಲ್ಲೂ ಹರಿ ನಾಡರ್ ಕಣಕ್ಕಿಳಿದಿದ್ದ.

ಕಳೆದ ವರ್ಷ ಸ್ಯಾಂಡಲ್ ವುಡ್ ನ ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮೀ ಕೂಡ ಈತನ ವಿರುದ್ಧ ವಂಚನೆ ಆರೋಪ ಮಾಡಿದ್ದರು. ಸಧ್ಯ ಈತನಿಂದ ಇನ್ನಷ್ಟು ವಂಚನೆ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದ್ದು, ಸಹಚರ ರಂಜಿತ್ ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Comments are closed.