ಕರ್ನಾಟಕದಲ್ಲಿಂದು ಕೊರೊನಾ ಸುನಾಮಿ : 49,058 ಮಂದಿಗೆ ಸೋಂಕು, 328 ಸಾವು

ಬೆಂಗಳೂರು : ರಾಜ್ಯದಲ್ಲಿಂದು ಕೊರೊನಾ ಸುನಾಮಿಯೇ  ಬೀಸಿದೆ. ನಿನ್ನೆ ಅರ್ಧ ಲಕ್ಷದಷ್ಟು ಸೋಂಕು ಪತ್ತೆಯಾಗಿದ್ದು, ಇಂದೂ ಕೂಡ 49,058 ಮಂದಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ ಬರೋಬ್ನರಿ 328 ಮಂದಿಯನ್ನು ಮಹಾಮಾರಿ ಬಲಿ ಪಡೆದಿದೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿಂದು ಬರೋಬ್ಬರಿ 23,706 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 139 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾ ಸೋಂಕಿಗೆ ತುತ್ತಾದವರ ಸಂಖ್ಯೆ5,47,208 ಏರಿಕೆಯಾಗಿದೆ. ಅಲ್ಲದೇ ಸದ್ಯ  3,32,732 ಸಕ್ರೀಯ ಪ್ರಕರಣಗಳಿವೆ.

ರಾಜ್ಯದಲ್ಲಿ ಇದುವರೆಗೆ 1790104 ‌ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದರೆ 5,17,075 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿದೆ. ಬೆಂಗಳೂರು ನಗರವನ್ನು ಹೊರತು ಪಡಿಸಿದ್ರೆ ಮೈಸೂರು, ತುಮಕೂರು, ಉಡುಪಿ, ದಕ್ಷಿಣ ಕನ್ನಡ, ಕಲಬುರಗಿ ಹಾಗೂ ಮಂಡ್ಯದಲ್ಲಿ ದಾಖಲೆಯ ಪ್ರಕರಣ ದಾಖಲಾಗಿದೆ.

Comments are closed.