ನೀವು ನಿಮ್ಮ ಮನೆ ಮುಂದೇ ಕಾರ್ ನಿಲ್ಲಸ್ತಿರಾ…?! ನಿಮಗೆ ಶಾಕ್ ನೀಡೋದಿಕ್ಕೆ ಸಜ್ಜಾಗಿದೆ ಬಿಬಿಎಂಪಿ…!!

ಸಿಲಿಕಾನ ಸಿಟಿಯಲ್ಲೆರೋ ಮನೆಗಳಿಗಿಂತ ಜಾಸ್ತಿ ಸಂಖ್ಯೆಯಲ್ಲಿದೆ ಕಾರು. ಹೀಗಾಗಿ ರಸ್ತೆ ಬದಿಯಲ್ಲಿ, ಮನೆಮುಂದೇ ಎಲ್ಲ ಕಾರುಗಳದ್ದೇ ಕಾರುಭಾರು. ಇಂತಹ ರೋಡ್ ಪಾರ್ಕಿಂಗ್ ಕಾರ್ ಗಳ ಮೇಲೆ ಕಣ್ಣೀಟ್ಟಿರೋ ಬಿಬಿಎಂಪಿ ಮನೆ ಮುಂದೇ, ರಸ್ತೆ ಬದಿಯಲ್ಲಿ ಪಾರ್ಕ್ ಮಾಡೋ ಕಾರುಗಳ ಮಾಲೀಕರಿಗೆ ಪಾರ್ಕಿಂಗ್ ಶುಲ್ಕ  ವಿಧಿಸಲು ಮುಂದಾಗಿದೆ.

ನೀವು ನಿಮ್ಮ ಮನೆ ಮುಂದೇ, ರಸ್ತೆ ಬದಿಯಲ್ಲಿ ಅಂದ್ರೆ ನಿಗದಿತ ಪಾರ್ಕಿಂಗ್ ಹೊರತು ಪಡಿಸಿ ಬೇರೆ ಯಾವುದೇ ಸಾರ್ವಜನಿಕ ಜಾಗದಲ್ಲಿ ಕಾರು ನಿಲ್ಲಿಸೋದಾದ್ರೆ ಬಿಬಿಎಂಪಿಗೆ ಪಾರ್ಕಿಂಗ್ ಶುಲ್ಕ ಪಾವತಿಸಲೇಬೇಕು. ಇಂತಹದೊಂದು ಯೋಜನೆಯನ್ನು ಜಾರಿಗೆ ತರಲು ಬಿಬಿಎಂಪಿ ಸಿದ್ಧತೆ ನಡೆಸಿದ್ದು, ಈಗಾಗಲೇ ಯೋಜನೆ ಕಾರ್ಯರೂಪಕ್ಕೆ ತರಲು ಸಜ್ಜಾಗಿದೆ.

ಕೇಂದ್ರ ನಗರ ಸಾರಿಗೆ ಸಹಕಾರದೊಂದಿಗೆ ಈ ಯೋಜನೆ ಸಿದ್ಧಪಡಿಸಲಾಗಿದ್ದು, ಕಾರುಗಳ ಆಧಾರದ ಮೇಲೆ ಸಣ್ಣ ಕಾರುಗಳಿಗೆ 1 ಸಾವಿರ ರೂಪಾಯಿಯಿಂದ 5 ಸಾವಿರ ರೂಪಾಯಿವರೆಗೆ ದಂಡ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ. ಪ್ರಾಯೋಗಿಕವಾಗಿ ಬೆಂಗಳೂರಿನ ಎರಡು ಪ್ರದೇಶದಲ್ಲಿ ಈ ಯೋಜನೆ ಜಾರಿಗೆ ಬರಲಿದೆ.

ಕೇವಲ ತಿಂಗಳ ದಂಡ ಮಾತ್ರವಲ್ಲ ಒಂದೊಮ್ಮೆ ಕಾರು ಮಾಲೀಕರು ಬಯಸಿದಲ್ಲಿ ಕಾರ್ ಪಾರ್ಕಿಂಗ್ ಫೀಸ್ ಪಾವತಿಸಿ ಪಾಸ್ ಪಡೆಯುವ ಅವಕಾಶವನ್ನು ಬಿಬಿಎಂಪಿ ನೀಡಿದೆ. 2012 ರಲ್ಲಿಯೇ ಬಿಬಿಎಂಪಿ ಬೆಂಗಳೂರು ಪಾರ್ಕಿಂಗ್ ಪ್ಲ್ಯಾನ್ 2.0 ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಿತ್ತು.

ಆದರೆ ಆಗ ಸಾರ್ವಜನಿಕ ಸಂಪರ್ಕ ಸುಧಾರಣೆಯ ಯೋಜನೆಗಳು, ಮೆಟ್ರೋ ಟ್ಯಾಕ್ಸಿ-ಓಲಾದಂತಹ ವ್ಯವಸ್ಥೆಗಳಿಂದ ಪಾರ್ಕಿಂಗ್ ನೀತಿ ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. ಆದರೆ ಈಗ ನಗರದ ,ಸೌಂದರ್ಯ ಹಾಗೂ ಸಂಚಾರದ ಅವ್ಯವಸ್ಥೆ ,ದಟ್ಟಣೆ ತಡೆಯಲು ಇದು ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ನಗರ ಸಾರಿಗೆ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಗೆ ಈ ಆದೇಶ ನೀಡಿದೆ.

ಆದರೆ ಕೆಲದಿಗಳ ಹಿಂದೆಯಷ್ಟೇ ಕಸಕ್ಕೂ ಟ್ಯಾಕ್ಸ್ ವಿತರಿಸಿ ಹಣ ಸಂಗ್ರಹಿಸುವ ಪ್ರಯತ್ನಕ್ಕೆ ಮುಂಧಾಗಿ ಕೈಸುಟ್ಟುಕೊಂಡ ಬಿಬಿಎಂಪಿ ಪಾರ್ಕಿಂಗ್ ಫೀಸ್ ಯೋಜನೆಯಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

Comments are closed.