ಸೆನ್ಸಾರ್ ನಿಂದ ಗ್ರೀನ್ ಸಿಗ್ನಲ್ ಪಡೆದ ಪೊಗರು…! ಫೆ.14 ಕ್ಕೆ ಅದ್ದೂರಿಯಾಗಿ ಆಡಿಯೋ ರಿಲೀಸ್….!!

ಕೊರೋನಾ ಬಳಿಕ ರಿಲೀಸ್ ಆಗುತ್ತಿರುವ ಬಹುನೀರಿಕ್ಷಿತ ಚಿತ್ರ ಪೊಗರುಗೆ   ಬಿಡುಗಡೆಗೆ ಮುನ್ನವೇ ಸಖತ್ ರೆಸ್ಪಾನ್ಸ್ ಲಭ್ಯವಾಗುತ್ತಿದೆ. ಚಿತ್ರದ ತಮಿಳು,ತೆಲುಗು ಹಾಗೂ ಕನ್ನಡ ಟೀಸರ್, ಟ್ರೇಲರ್ ,ಡೈಲಾಗ್ ಗಳು ಸಖತ್ ಹಿಟ್ ಆಗಿದ್ದು, ಈಗ ಸೆನ್ಸಾರ್ ಮಂಡಳಿ ಕೂಡ ಯು/ಎ ಸರ್ಟಿಫಿಕೇಟ್ ನೀಡಿ  ಗ್ರೀನ್ ಸಿಗ್ನಲ್ ನೀಡಿದೆ.

ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಈ ಸಂಗತಿ ಹಂಚಿಕೊಂಡಿದ್ದು, ಪೊಗರು ಸಿನಿಮಾಗೆ ಯು/ಎ ಸರ್ಟಿಫಿಕೇಟ್ ನೀಡಿದೆ. ಫೆ.19 ರಂದು ಸಿನಿಮಾ ರಿಲೀಸ್ ಆಗಲಿದೆ. ಕುಟುಂಬಸ್ಥರೆಲ್ಲ ಒಟ್ಟಾಗಿ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಖುಷಿ ಪಡಿ ಎಂದು ಮನವಿ ಮಾಡಿದ್ದಾರೆ.

ಈಗಾಗಲೇ ತೆಲುಗು, ತಮಿಳು,ಕನ್ನಡ ಟೀಸರ್ ಗಳು ಸಖತ್ ಹಿಟ್ ಆಗಿದ್ದು, ಜನರು ಧ್ರುವ್ ಸರ್ಜಾ ಮಾಸ್ ಎಂಟ್ರಿ, ಸಖತ್ ರಗಡ್ ಲುಕ್ ಹಾಗೂ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಆಯಕ್ಟಿಂಗ್ ನೋಡೋಕೆ ಕುತೂಹಲದಿಂದ ಕಾಯ್ತಿದ್ದಾರೆ.  ತಮಿಳಿನಲ್ಲಿ ಚಿತ್ರದ ಪ್ರಮೋಶನ್ ಮುಗಿಸಿರುವ ಚಿತ್ರತಂಡ ಹೈದ್ರಾಬಾದ್ ಗೆ ತೆರಳಿದ್ದು, ಅಲ್ಲಿಯೂ ಪ್ರಮೋಶನ್ ಕಾರ್ಯದಲ್ಲಿ ಬ್ಯುಸಿಯಾಗಿದೆ.

ಮೊನ್ನೆಯಷ್ಟೇ ತಮಿಳಿನಲ್ಲಿ ಖರಾಬು ಹಾಡು ರಿಲೀಸ್ ಮಾಡಿದ್ದ ಚಿತ್ರತಂಡಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಒಂದೇ ದಿನದಲ್ಲಿ ಹಾಡು 1.3 ಮಿಲಿಯನ್ ವಿವ್ಸ್ ದಾಖಲಿಸಿತ್ತು.  ಪೊಗರು ಚಿತ್ರತಂಡ ಅದ್ದೂರಿ ಸಮಾರಂಭದಲ್ಲಿ ಆಡಿಯೋ ರಿಲೀಸ್ ಮಾಡಲಿದ್ದು, ದಾವಣಗೆರೆಯ ಸರ್ಕಾರಿ ಹೈಸ್ಕೂಲ್ ಗ್ರೌಂಡ್ ನಲ್ಲಿ ಸಮಾರಂಭ ನಡೆಯಲಿದೆ.

ನಂದಕಿಶೋರ್ ನಿರ್ದೇಶನದಲ್ಲಿ  ಮೂಡಿ ಬಂದಿರುವ ಪೊಗರು ಚಿತ್ರದಲ್ಲಿ ನಾಯಕ ಧ್ರುವ್ ಸರ್ಜಾ ಅಂತಾರಾಷ್ಟ್ರೀಯ ಖ್ಯಾತಿಯ ಕುಸ್ತಿಪಟುಗಳ ಜೊತೆ ಸೆಣಸುವ ದೃಶ್ಯದಲ್ಲಿ ನಟಿಸಿದ್ದು, ಪೋಟೋಗಳು ಸಖತ್ ವೈರಲ್ ಆಗಿವೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದು,  ಚಿತ್ರವನ್ನು ಕೆ.ವಿ.ಎನ್.ಪ್ರೊಡಕ್ಷನ್ ಅಡಿಯಲ್ಲಿ ಬಿ.ಕೆ.ಗಂಗಾಧರ್ ನಿರ್ಮಿಸಿದ್ದಾರೆ.

Comments are closed.