ಪಾಕಿಸ್ತಾನಕ್ಕೆಯುಎಇ ಕೊಡ್ತು ಬಿಗ್ ಶಾಕ್ : 13 ರಾಷ್ಟ್ರಗಳ ಉದ್ಯೋಗಿಗಳಿಗೆ ನಿರ್ಬಂಧ ಹೇರಿಕೆ

ನವದೆಹಲಿ : ಪಾಕಿಸ್ತಾನ ಸೇರಿದಂತೆ ವಿಶ್ವದ 13 ರಾಷ್ಟ್ರಗಳಿಗೆ ಯುಎಇ ಬಿಗ್ ಶಾಕ್ ನೀಡಿದೆ. ಒಟ್ಟು13 ರಾಷ್ಟ್ರಗಳ ಉದ್ಯೋಗಿಗಳಿಗೆ ನಿರ್ಬಂಧ ವಿಧಿಸಿರುವ ಯುಎಇ ಈ ಪಟ್ಟಿಯಲ್ಲಿ ಪಾಕಿಸ್ತಾನವನ್ನೂ ಸೇರಿಸಿದೆ.

ಸದ್ಯ ಯುಎಇ 13 ರಾಷ್ಟ್ರಗಳಿಂದ ಕಾರ್ಮಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದಕ್ಕೆ ಕೋವಿಡ್-19 ಕಾರಣವನ್ನು ನೀಡಿದ್ದು, ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದೆ.

ಭದ್ರತಾ ದೃಷ್ಟಿಯಿಂದ ಅಫ್ಘನ್ನರು, ಪಾಕಿಸ್ತಾನಿಗಳಿಗೆ ಹೊಸದಾಗಿ ವೀಸಾ ನೀಡಲು ನಿರಾಕರಿಸಲಾಗುತ್ತಿರುವುದರ ಕುರಿತು ಸುದ್ದಿವಾಹಿನಿ ಯೊಂದು ವರದಿ ಮಾಡಿದೆ. ಯುಎಇ ನಿಷೇದಿತ ಪಟ್ಟಿಯಲ್ಲಿ ಸಿರಿಯಾ, ಸೊಮಾಲಿಯಾ, ಇರಾಕ್, ಯೆಮೆನ್ ಸೇರಿದಂತೆ ಸೌದಿ ವಿರೋಧಿ ರಾಷ್ಟ್ರಯಾದ ಟರ್ಕಿಯೂ ಸೇರಿದೆ.

Comments are closed.