HDFC Bank ನಲ್ಲಿ ಪದವೀಧರರಿಗೆ 1367 ಹುದ್ದೆ : ಇಂದೇ ಅರ್ಜಿ ಸಲ್ಲಿಸಿ

ಉದ್ಯೋಗ ಹುಡುಕುತ್ತಿರುವ ಪದವೀಧರರಿಗೆ ಎಚ್ ಡಿಎಫ್ ಸಿ ಬ್ಯಾಂಕ್ ಅವಕಾಶವೊಂದನ್ನು ಕಲ್ಪಿಸಿದೆ. ಒಟ್ಟು ಖಾಲಿಯಿರುವ 1367 ಹುದ್ದೆಗಳ ಭರ್ತಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಹೌಸಿಂಗ್ ಡೆವಲಪ್ಮೆಂಟ್ ಫಿನಾನ್ಸ್ ಕಾರ್ಪೋರೇಶನ್ ಲಿಮಿಟೆಡ್ (ಹೆಚ್ಡಿಎಫ್ಸಿ) ಪ್ರೊಬೆಷನರಿ ಅಧಿಕಾರಿ, ಅಸಿಸ್ಟೆಂಟ್ ಮ್ಯಾನೇಜರ್, ಎಕ್ಸಿಕ್ಯುಟಿವ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ: ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ: ಕನಿಷ್ಟ 21 ರಿಂದ ಗರಿಷ್ಟ 26 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
ಕೊನೆಯ ದಿನಾಂಕ : ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 31ರೊಳಗೆ ಅರ್ಜಿ ಸಲ್ಲಿಸಬಹುದಾಗಿ ತಿಳಿಸಿದೆ.

ವೇತನ : ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 58,200ರೂ ವೇತನವನ್ನು ಸಿಗಲಿದೆ.
ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ : ಆನ್ಲೈನ್ ಮೂಲಕ ಅಧಿಕೃತ ವೆಬ್ಸೈಟ್ https://www.hdfcbank.com/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ಮಾಹಿತಿಯನ್ನು ಓದಿ ನಂತರ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.

Comments are closed.