ಕೊನೆಗೂ ಸಿಕ್ಕರೂ ಐಶ್ವರ್ಯಾ ತದ್ರೂಪಿ….! ಪೋಟೋ ನೋಡಿ ಅಚ್ಚರಿಗೊಂಡ ಅಭಿಮಾನಿಗಳು…!!

ಬಾಲಿವುಡ್ ನಟಿ, ಕರಾವಳಿ ಬೆಡಗಿ ಐಶ್ವರ್ಯಾ ತಮ್ಮ ಅನುರೂಪ ಸೌಂದರ್ಯದಿಂದಲೇ ಗಮನ ಸೆಳೆದವರು. ಬಾಲಿವುಡ್ ನ ದೊಡ್ಮನೆಯ ಸೊಸೆಯಾಗಿರುವ ಐಶ್ವರ್ಯಾ ರೈ ಹೋಲುವಂತ ನಟಿಮಣಿಯೊಬ್ಬರು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದಾರೆ.

ಥಟ್ ನೇ ನೋಡಿದ್ರೆ ಐಶ್ವರ್ಯಾ ರೈ ಎಂದೇ ಎನ್ನಿಸುವಂತ ತದ್ರೂಪ ಸೌಂದರ್ಯ ಹೊಂದಿರುವ ನಟಿ ಸ್ನೇಹಾ ಉಲ್ಲಾಳ್. ತಮ್ಮ ನ್ ಸ್ಟಾಗ್ರಾಂ ಖಾತೆಯಲ್ಲಿ ಪೋಟೋಗಳನ್ನು ಹಂಚಿಕೊಂಡಿದ್ದು,ಎಲ್ಲ ಪೋಟೋದಲ್ಲೂ ಥೇಟ್ ಐಶ್ವರ್ಯಾ ರೈ ರಂತೆ ಕಾಣುತ್ತಿದ್ದು, ಅಭಿಮಾನಿಗಳು ಕನ್ ಪ್ಯೂಸ್ ಆಗಿದ್ದಾರೆ.

ದೇವದಾಸ್ ಸೇರಿದಂತೆ ವಿವಿಧ ಚಿತ್ರದಲ್ಲಿ ಐಶ್ವರ್ಯಾ ರೈ ಧರಿಸಿದಂತಹುದ್ದೇ ಕಾಸ್ಟ್ಯೂಮ್ ಗಳಲ್ಲಿ ಪೋಟೋ ತೆಗೆಸಿಕೊಂಡಿರುವ ಸ್ನೇಹಾ ಉಲ್ಲಾಳ್ ಪೋಟೋಗಳು ಈಗ ಸಖತ್ ವೈರಲ್ ಆಗಿದೆ.

ನಟಿಯಾಗಿ ಗುರುತಿಸಿಕೊಂಡಿರೋ ಸ್ನೇಹಾ, ಲಕ್ಕಿ ನೋ ಟೈಂ ಫಾರ್ ಲವ್ ಚಿತ್ರದಲ್ಲಿ ಸಲ್ಮಾನ್ ಜೊತೆ ನಟಿಸುವ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು.

ಐಶ್ವರ್ಯಾ ರೈ ಹೋಲುವ ಸೌಂದರ್ಯದ ಕಾರಣಕ್ಕೆ ಸ್ನೇಹಾಗೆ ಬಾಲಿವುಡ್ ನಲ್ಲಿ ಹೆಚ್ಚಿನ ಅವಕಾಶ ಸಿಗ್ತಿದೆ ಎಂಬ ಮಾತು ಕೇಳಿಬಂದಿತ್ತು.

https://kannada.newsnext.live/heavy-steam-attack-black-fungus/

ಆದರೆ ಸ್ನೇಹಾ ಉಲ್ಲಾಳ್ ಮಾತ್ರ ಐಶ್ವರ್ಯಾ ರೈರಂತೆ ಕಾಣುತ್ತೇನೆ ಎಂಬ ಅಂಶವನ್ನು ಲಾಭದಾಯಕವಾಗಿ ಬಳಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಸ್ನೇಹಾ ಉಲ್ಲಾಳ್, ನಾನು ಐಶ್ವರ್ಯಾ ರೈಯವರ ಅಭಿಮಾನಿ.ಆದರೆ ಅವರೊಂದಿಗೆ ಹೋಲಿಕೆ ಮಾಡುವುದರಲ್ಲಿ ನನ್ನ ಖುಷಿಯಿಲ್ಲ. ನಾನು ನನ್ನದೇ ಆದ ಪ್ರತ್ಯೇಕ ಸಾಧನೆಯೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತೇನೆ ಎಂದಿದ್ದರು.

https://kannada.newsnext.live/loan-recovery-not-permitted-udupi-dc-warning/

Comments are closed.