ವಿಮಾನಯಾನ ಪ್ರಯಾಣಿಕರಿಗೆ ಬಿಗ್ ಶಾಕ್ : ಶೆ. 15 ರಷ್ಟು ಏರಿಕೆಯಾಗಲಿದೆ ಪ್ರಯಾಣ ದರ

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಸಂಕಷ್ಟದಿಂದ ಜನರು ಬೇಸತ್ತಿದ್ದಾರೆ. ಈ ನಡುವಲ್ಲೇ ವಿಮಾನಯಾನದ ಟಿಕೇಟ್ ದರ ಹೆಚ್ಚಳ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಈ ಮೂಲಕ ವಿಮಾನ ಪ್ರಯಾಣಿಕರಿಗೆ ಕೇಂದ್ರ ಸರಕಾರ ಬಿಗ್ ಶಾಕ್ ಕೊಟ್ಟಿದೆ.

2020ರ ಮಾರ್ಚ್ 25 ರಿಂದ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಯನ್ನು ಭಾರತ ಸರಕಾರ ಸಂಪೂರ್ಣವಾಗಿ ಸ್ಥಗಿತಗೊಳಿಸಿ ಆದೇಶಿಸಿದೆ. ಇದೀಗ 2021ರ ಜೂನ್ 30ರ ವರೆಗೂ ಅಂತರಾಷ್ಟ್ರೀಯ ವಿಮಾನ ಸಂಚಾರದ ಮೇಲೆ ನಿರ್ಬಂಧವನ್ನು ಮುಂದುವರಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ಶುಕ್ರವಾರ ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಸರಕುಸಾಗಣೆ, ವಿಶೇಷ ಪರವಾನಿಗೆ ಪಡೆದ ವಿಮಾನ ಗಳು ಮತ್ತು ವಂದೇ ಭಾರತ್ ಮಿಷನ್ ವಿಮಾನಗಳಿಗೆ ಮಾತ್ರ ಸಂಚಾರ ಕ್ಕೆ ಅನುಮತಿ ನೀಡಲಾಗಿದೆ. ಅಲ್ಲದೇ ಏರ್ ಬಬಲ್ ಒಪ್ಪಂದ ಮಾಡಿಕೊಂಡ 27 ದೇಶಗಳೊಂದಿಗೆ ದೇಶದಿಂದ ನೇರ ವಿಮಾನ ಸಂಚಾರ ಮುಂದುವರೆಯಲಿದೆ.

ವಿಮಾನಯಾನ ಸೇವೆಯ ಮೇಲಿನ ನಿರ್ಬಂಧದ ಜೊತೆಗೆ ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ವಿಮಾನಗಳಲ್ಲಿ ಪ್ರಯಾಣಿಕರ ಸಾಮರ್ಥ್ಯವನ್ನು ಶೇ.50 ರಷ್ಟು ತಗ್ಗಿಸಲು ಕೇಂದ್ರ ಮುಂದಾಗಿದೆ. ಜೊತೆಗೆ ಹೊರೆಯನ್ನು ತಪ್ಪಿಸಿಕೊಳ್ಳಲು ವಿಮಾನ ಪ್ರಯಾಣದ ಟಿಕೆಟ್ ದರದಲ್ಲಿ ಶೇ.15 ರಷ್ಟು ಏರಿಕೆ ಮಾಡುವುದಾಗಿ ಘೋಷಣೆಯನ್ನು ಮಾಡಿದೆ.

ಜೂನ್ 1 ರಿಂದ ಜುಲೈ 31 ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ದೇಶಿಯ ವಿಮಾನಗಳ ಕನಿಷ್ಠ ಟಿಕೆಟ್ ದರ 2200 ರೂಪಾಯಿಯಿಂದ 7200 ರೂ. ಹಾಗೂ ಗರಿಷ್ಠ ದರ 7800 ರೂ.ನಿಂದ 24,200ರೂ. ಇದೆ. ಜೂನ್ 1 ರಿಂದ ಜಾರಿಗೆ ಬರುವಂತೆ ಕನಿಷ್ಠ ಪ್ರಯಾಣ ದರ ಕನಿಷ್ಠ 2600 ರೂಪಾಯಿಂದ 7800 ರೂಪಾಯಿಗೆ ಮತ್ತು ಗರಿಷ್ಠ ಪ್ರಯಾಣ ದರವನ್ನು 8700 ರೂ.ನಿಂದ 24,200 ರೂಪಾಯಿ ಹೆಚ್ಚಳ ಮಾಡಲಾಗಿದೆ.

Comments are closed.