ಕೊರೋನಾ ರೋಗಿಗಳಿಗೆ ನೆರವಿನ ಹಸ್ತ ಚಾಚಿದ ಬಿಗ್ ಬಿ…! 50 ಆಕ್ಸಿಜನ್ ಸಾಂದ್ರಕ ಖರೀದಿಸಿದ ಅಮಿತಾಬ್ ಬಚ್ಚನ್..!!

ಕೊರೋನಾ ಸಂಕಷ್ಟದಲ್ಲಿರುವ ದೇಶದ ಜನತೆಗೆ ಬಾಲಿವುಡ್, ಟಾಲಿವುಡ್,ಸ್ಯಾಂಡಲ್ ವುಡ್ ಸೇರಿದಂತೆ ಹಲವು ಚಿತ್ರರಂಗದ ನಟರು ನೆರವಾಗಿದ್ದಾರೆ. ಈ ಮಧ್ಯೆ ಕೊರೋನಾ ಸಂತ್ರಸ್ಥರಿಗೆ ನೆರವಾಗಿಲ್ಲ ಎಂಬ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದ ಅಮಿತಾಬ್ ಇದೀಗ 2 ಕೋಟಿ ದೇಣಿಗೆ ಜೊತೆ 50 ಆಕ್ಸಿಜನ್ ಸಾಂದ್ರಕ ಒದಗಿಸಲು ಮುಂದಾಗಿದ್ದಾರೆ.

https://kannada.newsnext.live/telugu-tamil-chatrapati-movie-hindi-remake-sayipallavi-debue/

ಅಮಿತಾಬ್ ಪೋಲೆಂಡ್ ನಿಂದ ದೇಶದ ಕೊರೋನಾ ರೋಗಿಗಳಿಗಾಗಿ ಆಕ್ಸಿಜನ್ ಸಾಂದ್ರಕ ಖರೀದಿಸಿದ್ದು, ಇದರೊಂದಿಗೆ 20 ವೆಂಟಿಲೇಟರ್ ಗಳನ್ನು ಅಮಿತಾಬ್ ಬಚ್ಚನ್ ರೋಗಿಗಳಿಗಾಗಿ ಆರ್ಡರ್ ಮಾಡಿದ್ದಾರೆ.

https://kannada.newsnext.live/ramanatharai-attack-bjp-governament/

ಈಗಾಗಲೇ ಬಂದ 10 ವೆಂಟಿಲೇಟರ್ ಗಳನ್ನು ಅಮಿತಾಬ್ ಬಚ್ಚನ್ ಮುಂಬೈನ ಬಿಎಂಸಿ ಆಸ್ಪತ್ರೆಗೆ ದಾನ ಮಾಡಿದ್ದು, ರೋಗಿಗಳಿಗೆ ನೆರವಿನ ಹಸ್ತ ಚಾಚಿದ್ದಾರೆ.

ಅಮಿತಾಬ್ ಬಚ್ಚನ್ ಯಾವ ರೀತಿ ಕೊರೋನಾ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ ಎಂಬ ಟೀಕೆಗಳಿಗೆ ಟ್ವಿಟರ್ ನಲ್ಲಿ ಉತ್ತರಿಸಿರುವ ಬಿಗ್ ಬಿ, ತಾವು ನೀಡಿರುವ ಸಹಾಯವನ್ನು ಬಹಿರಂಗಪಡಿಸಿದ್ದಾರೆ.

ಆಕ್ಸಿಜನ್ ತುರ್ತು ಅವಶ್ಯಕತೆ ಇದ್ದಾಗ ತ್ವರಿತವಾಗಿ ಖರೀದಿಸಲು ಸಾಧ್ಯವಾಗಲಿಲ್ಲ. ಆಗ ನಾನು ಪೋಲೆಂಡ್ ನಲ್ಲಿದ್ದ ನನ್ನ ಸ್ನೇಹಿತ ಹಾಗೂ ರೊಕ್ಲಾದಲ್ಲಿರುವ ಭಾರತೀಯ ರಾಯಭಾರಿ ಸಹಾಯ ಪಡೆದೆ. ತಕ್ಷಣ ಆರ್ಡರ್ ಪಡೆಯಲಾಗಿದೆ. ಮೇ 15 ರಂದು ಮೆಶಿನ್ ಕೈಸೇರಿಲಿದೆ ಎಂದಿದ್ದಾರೆ.

https://kannada.newsnext.live/india-corona-covid-19-lockdown-pm-modi-icmr-suggest/

ಮುಂಬೈನ ವಿವಿಧ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಾಂದ್ರಕದ ಕೊರತೆ ಎದುರಾಗಿದ್ದು, ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾದ ಕಾರಣ ಪೊರೈಕೆಯಲ್ಲಿ ವ್ಯತ್ಯಯವಾಗಿತ್ತು. ಹೀಗಾಗಿ ಬಿಗ್ ಬಿ ಇಂಥಹ ರೋಗಿಗಳ ಸಹಾಯಕ್ಕೆ ಧಾವಿಸಿದ್ದಾರೆ.  

Comments are closed.