ಒಟ್ಟೊಟ್ಟಿಗೆ ವರ್ಕೌಟ್ ಮಾಡಿದ್ರು ಬಾಲಿವುಡ್ ಸುಂದರಿಯರು…! ಸಾರಾಅಲಿಖಾನ್-ಜಾಹ್ನವಿ ವಿಡಿಯೋ ವೈರಲ್…!!

ನಟಿಯರು ಸ್ಕ್ರೀನ್ ಮೇಲೆ ಒಳ್ಳೆಯ ಸ್ನೇಹಿತೆಯರಂತೆ ಕಂಡರೂ ರಿಯಲ್ ಲೈಫ್ ನಲ್ಲಿ ಒಬ್ಬರಿಗೊಬ್ಬರು ಸ್ನೇಹ ಉಳಿಸಿಕೊಳ್ಳೋದು ಕಡಿಮೆ. ಆದರೆ ಇದಕ್ಕೆ ಅಪವಾದವೆಂಬಂತೆ ಬಾಲಿವುಡ್ ನ ಎರಡು ಸುಂದರಿಯರು ಒಟ್ಟೊಟ್ಟಿಗೆ ವರ್ಕೌಟ್ ಮಾಡುವ ಮೂಲಕ ನಾವೇ ಡಿಫರೆಂಟ್ ಅಂತ ಸಾಬೀತು ಪಡಿಸಿದ್ದಾರೆ.

ಬಾಲಿವುಡ್ ನಟ ಸೈಫ್ ಅಲಿಕಾನ್ ಪುತ್ರಿ ಸಾರಾ ಅಲಿಖಾನ್ ಹಾಗೂ ನಟಿ ದಿ.ಜಾಹ್ನವಿ ಕಪೂರ್ ಒಟ್ಟೂಟ್ಟಿಗೆ ಬೆವರಿಳಿಸುವ ಮೂಲಕ ಅಭಿಮಾನಿಗಳ ಪಾಲಿಗೆ ಹಬ್ಬವಾಗಿದ್ದಾರೆ.  ಇಬ್ಬರೂ ಸುಂದರಿಯರು ಒಟ್ಟೂಟ್ಟಿಗೆ ವರ್ಕೌಟ್ ಮಾಡ್ತಿರೋ ವಿಡಿಯೋವನ್ನು ನಟಿ ಸಾರಾಅಲಿಕಾನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಗೋ ವಿತ್ ದಿ ಪ್ಲೋ ಸ್ಲೋ ಆಂಡ್ ಸ್ಟಡಿ  ಅನ್ನೋ ಟ್ಯಾಗ್ ಲೈನ್ ಜೊತೆ ಸಾರಾಅಲಿಕಾನ್ ಶೇರ್ ಮಾಡಿರೋ ವಿಡಿಯೋದಲ್ಲಿ ಸಾರಾ ಹಾಗೂ ಜಾಹ್ನವಿ ಕೈ ಕೈ ಹಿಡಿದು ವ್ಯಾಯಾಮ ಮಾಡೋ ಮೂಲಕ ತಮ್ಮ ಸ್ನೇಹದ ಬಾಂಡಿಂಗ್ ಪ್ರದರ್ಶಿಸಿದ್ದಾರೆ.

ಇತ್ತೀಚಿಗಷ್ಟೇ ಮಾಲ್ಡೀವ್ಸ್ ಗೆ ವೆಕೆಶನ್ ಗಾಗಿ ತೆರಳಿರೋ ಜಾಹ್ನವಿ ಹಾಟ್ ಆಂಡ್ ಬೋಲ್ಡ್ ಆಗಿ ಪೋಟೋಶೂಟ್ ಮಾಡಿಸುವ ಮೂಲಕ ಮನಸೆಳೆದಿದ್ದರು.

ಒಟ್ಟೂಟ್ಟಿಗೆ ಬಾಲಿವುಡ್ ಪ್ರವೇಶಿಸಿದ ಸಾರಾ ಹಾಗೂ ಜಾಹ್ನವಿ ಒಳ್ಳೆಯ ಸ್ನೇಹಿತರಾಗಿದ್ದು, ಮುಂಬೈನ ಹಲವು ಪಾರ್ಟಿಗಳಲ್ಲೂ ಒಟ್ಟೂಟ್ಟಿಗೆ ಮಸ್ತಿ ಮಾಡೋದು ಕಾಮನ್.

https://www.instagram.com/reel/CN4ryUjJ_bg/?igshid=1hzzraw9kbijr

ಈಗ ಮಾಲ್ಡೀವ್ಸ್ ನಲ್ಲೂ ಒಟ್ಟಿಗೆ ವೆಕೇಶನ್ ಸೆಲಿಬ್ರೆಟ್ ಮಾಡಿ ಅಭಿಮಾನಿಗಳ ಪಾಲಿಗೆ ಹಬ್ಬವಾಗಿದ್ದಾರೆ.

Comments are closed.