ಹನಿಮೂನ್ ನಲ್ಲೇ ಸಿಹಿಸುದ್ದಿ ನೀಡಿದ ಬಾಲಿವುಡ್ ನಟಿ…! ಬೇಬಿಬಂಪ್ ಜೊತೆ ವೈರಲ್ ಆಯ್ತು ಪೋಸ್ಟ್…!!

ಕಳೆದ ಎರಡು ತಿಂಗಳ ಹಿಂದೆಯಷ್ಟೇ ಎರಡನೇ ಮದುವೆಯಾದ ಬಾಲಿವುಡ್ ನಟಿ ದಿಯಾ ಮಿರ್ಜಾ, ಮದುವೆಯಾದ ಸ್ಪೀಡ್ ನಲ್ಲೇ ಸಿಹಿಸುದ್ದಿ ನೀಡೋ ಮೂಲಕ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ. ಹನಿಮೂನ್ ನಲ್ಲೇ ಬೇಬಿ ಬಂಪ್ ಜೊತೆ ಪೋಸ್ ನೀಡಿ ಗಮನ ಸೆಳೆದಿದ್ದಾರೆ.

2021 ರ ಫೆಬ್ರವರಿ 15 ರಂದು ಬಾಲಿವುಡ್ ನಟಿ ದಿಯಾ ಮಿರ್ಜಾ ಉದ್ಯಮಿ ವೈಭವ್ ರೇಖಿ ಜೊತೆ ಹೊಸಬದುಕಿಗೆ ಕಾಲಿರಿಸಿದ್ದರು. 39 ರ ಹರೆಯದಲ್ಲಿ ಎರಡನೇ ಮದುವೆಯಾದ ದಿಯಾ ಮಿರ್ಜಾ ಇದೇ ಕಾರಣಕ್ಕೆ ಸಖತ್ ಸುದ್ದಿಯಾಗಿದ್ದರು. ಈಮೊದಲು ತಮ್ಮ ದೆಹಲಿ ಮೂಲದ ಸ್ನೇಹಿತನನ್ನು ಮದುವೆಯಾಗಿದ್ದ ದಿಯಾ, 2019 ರಲ್ಲಿ ಡಿವೋರ್ಸ್ ಪಡೆದುಕೊಂಡಿದ್ದರು.

 

ಅಷ್ಟೇ ಅಲ್ಲ ಮದುವೆಯಾಗುತ್ತಿದ್ದಂತೆ ಮಾಲ್ಡೀವ್ಸ್ ಗೆ ಹನಿಮೂನ್ ಗೆ ಹಾರಿದ ದಿಯಾ ಮಿರ್ಜಾ ಹನಿಮೂನ್ ಟ್ರಿಪ್ ಗೆ ತಮ್ಮ ಮಲಮಗಳು ಅಂದ್ರೆ ಉದ್ಯಮಿ ಹಾಗೂ ಪತಿ ವೈಭವ್ ರೇಖಿ ಮೊದಲ ಪತ್ನಿ ಮಗಳನ್ನು ಕರೆದೊಯ್ಯುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.

ಮಲಮಗಳ ಜೊತೆ ದಿಯಾ ಮಿರ್ಜಾ ಹನಿಮೂನ್ ಹೋಗಿದ್ದು ಮಾತ್ರವಲ್ಲ ಆಕೆಯೊಂದಿಗೆ ನೀರಾಟವಾಡುವ ಪೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದರು. ಇದೀಗ ಮಾಲ್ಡೀವ್ಸ್ ನಿಂದ ಹನಿಮೂನ ಮುಗಿಸಿ ವಾಪಸ್ಸಾಗುತ್ತಿದ್ದಂತೆ ದಿಯಾ  ಮಿರ್ಜಾ ಸಿಹಿಸುದ್ದಿ ನೀಡಿದ್ದಾರೆ.

ಸೂರ್ಯಾಸ್ತದ ವೇಳೆ ಬೇಬಿ ಬಂಪ್ ಜೊತೆ ಪೋಟೋ ಶೂಟ್ ನಡೆಸಿರುವ ಪೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ದಿಯಾ ಮಿರ್ಜಾ, ನಿಮ್ಮ ಹೊಟ್ಟೆಯೊಳಗೆ ಹೊಸಜೀವವೊಂದು ಮೊಳೆಯುತ್ತಿರುವ ಖುಷಿ ವಿಭಿನ್ನ,ವಿಶಿಷ್ಟ ಅನುಭವ. ಎಲ್ಲರೂ ಹರಸಿ,ಆಶೀರ್ವದಿಸಿ ಎಂದು ಹೇಳಿಕೊಂಡಿದ್ದಾರೆ.

https://www.instagram.com/p/CNIATcpjlOt/?igshid=7ksm4zs5b8p5

ಹನಿಮೂನ್ ಮುಗಿಸಿ ಬರುತ್ತಿದ್ದಂತೆ ಬೇಬಿಬಂಪ್ ಜೊತೆ ಸಿಹಿಸುದ್ದಿ ನೀಡಿದ ದಿಯಾ ಮಿರ್ಜಾ ಪೋಟೋ ಹಾಗೂ ಪೋಸ್ಟ್ ಗೆ ನಟಿ ಪ್ರಿಯಾಂಕಾ ಚೋಫ್ರಾ ಸೇರಿದಂತೆ ಹಲವರು ಲೈಕ್ ನೀಡಿದ್ದು, ಶುಭಹಾರೈಸಿದ್ದಾರೆ. ಇನ್ನು ಅಭಿಮಾನಿಗಳು ಕೂಡ ಸಂಭ್ರಮದಿಂದ ಶುಭಹಾರೈಸಿದ್ದು, ಕೆಲವರು ಮಾತ್ರ ಇಷ್ಟು ಅರ್ಜೆಂಟಾ ಎಂದು ಕಾಲೆಳೆದಿದ್ದಾರೆ.

Comments are closed.