ಎ.22 ರಿಂದ ಬೇಸಿಗೆ ರಜೆ ..!!! ಪರೀಕ್ಷೆಗೆ ಸಿದ್ದತೆ ನಡೆಸಿದ ಶಿಕ್ಷಣ ಇಲಾಖೆ

ಬೆಂಗಳೂರು : ಕೊರೊನಾ ಸೋಂಕಿನ‌ ಆರ್ಭಟದ ಜೊತೆಗೆ ರಾಜ್ಯದಲ್ಲಿ ಬೇಸಿಗೆ ತಾಪಮಾನ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಎಪ್ರಿಲ್ 22 ರಿಂದಲೇ ಬೇಸಿಗೆ ರಜೆ ಘೋಷಿಸಲು ಶಿಕ್ಷಣ‌ ಇಲಾಖೆ ಮುಂದಾಗಿದ್ದು, ಅದಕ್ಕೂ ಪೂರ್ವದಲ್ಲಿಯೇ ಪರೀಕ್ಷೆ ನಡೆಸಲು ಸಿದ್ದತೆ ನಡೆಸಿದೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದ್ದಂತೆಯೇ 6-9ನೇ ತರಗತಿ ಆಫ್‌ಲೈನ್ ತರಗತಿಗಳಿಗೆ ಬ್ರೇಕ್ ಹಾಕಿದೆ‌. ಬೇಸಿಗೆ ರಜೆಯನ್ನು ಘೋಷಿಸಿದ್ದು ಪರೀಕ್ಷಾ ದಿನಾಂಕ ಘೋಷಣೆ ಮಾಡುವುದಾಗಿಯೂ ಆದೇಶ ಹೊರಡಿಸಿದೆ. ವಿದ್ಯಾಗಮ ತರಗತಿಯನ್ನು ಬಂದ್ ಮಾಡಿದೆ. ಆದರೆ ಎಸ್ಎಸ್ಎಲ್ ಸಿ ತರಗತಿಗಳು ಎಂದಿನಂತೆಯೇ ನಡೆಯಲಿದ್ದು, ಕಡ್ಡಾಯ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ.

ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಜೊತೆ ಜೊತೆಗೆ ಬೇಸಿಗೆಯ ತಾಪ ತಡೆಯಲು ಸಾಧ್ಯವಾಗುತ್ತಿಲ್ಲ. ಕೊರೊನಾ ಭೀತಿಯಿಂದಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮಾಸ್ಕ್ ಧರಿಸಿ ತರಗತಿಳಿಗೆ ಹಾಜರಾಗುವುದು ಕಷ್ಟಕರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಶಾಲೆಗಳಿಗೆ ಬೇಸಿಗೆ ರಜೆ ನೀಡಲು ಚಿಂತನೆ ನಡೆಸುತ್ತಿದೆ.

ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಬೋಧನೆಯನ್ನು ಮಾಡಿದ್ದಾರೆ. ಇದೀಗ ಪುನರ್ ಮನನ ತರಗತಿಗಳು ಮುಕ್ತಾಯವನ್ನು ಕಂಡಿದೆ. ಹೀಗಾಗಿ ಎಪ್ರೀಲ್ 15ರಿಂದಲೇ 1 ರಿಂದ 9 ತರಗತು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಸಾಧ್ಯತೆಯಿದ್ದು, ಎಪ್ರಿಲ್ 22ರ ನಂತರದಲ್ಲಿ ಬೇಸಿಗೆ ರಜೆ ಘೋಷಣೆಯಾಗುವ ಸಾಧ್ಯತೆಯಿದೆ.

ಇನ್ನು ಎಸ್ಎಸ್ಎಲ್ ಸಿ ಪರೀಕ್ದೆಗಳನ್ನು ನಿಗದಿಯಾಗಿರುವ ದಿನಾಂಕದಂದೇ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಎಸ್ಎಸ್ಎಲ್ ಸಿ ತರಗತಿಗಳ ಪಠ್ಯಬೋಧನೆ ಬಹುತೇಕ ಮುಕ್ತಾಯಗೊಂಡಿದ್ದು, ಎಪ್ರೀಲ್ ಮೂರನೇ ವಾರದಿಂದಲೇ ಪರೀಕ್ಷಾ ಸಿದ್ದತೆಯ ರಜೆಯನ್ನು ಘೋಷಣೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ.

https://kannada.newsnext.live/corona-virus-hike-school-bund/

ಖುದ್ದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ.ಅನ್ಬುಕುಮಾರ್‌ ಅವರೇ ಹೇಳಿಕೆಯನ್ನು ನೀಡಿದ್ದು, ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಬೇಸಗೆ ರಜೆ ಇರುವುದಿಲ್ಲ. ಬದಲಾಗಿ ಪಠ್ಯಕ್ರಮ ಪೂರ್ಣಗೊಳ್ಳುತ್ತಿ ದ್ದಂತೆ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳಲು ರಜೆ ನೀಡಲಾಗುತ್ತದೆ. ಇನ್ನು ಎಪ್ರಿಲ್‌ ಅಂತ್ಯ ಹಾಗೂ ಮೇ ತಿಂಗಳಲ್ಲಿ ಮಕ್ಕಳಿಗೆ ತರಗತಿ ನಡೆಸುವುದು ಕಷ್ಟ. ಹೀಗಾಗಿ ಮೇ ತಿಂಗಳಲ್ಲಿ ರಜೆ ಘೋಷಿಸುವ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

ಖಾಸಗಿ ಶಾಲೆಗಳ ಒಕ್ಕೂಟ ಪರೀಕ್ಷಾ ದಿನಾಂಕವನ್ನು ತಕ್ಷಣಕ್ಕೆ ಘೋಷಿಸುವಂತೆ ಹೇಳಿದೆ. ಇನ್ನೊಂದೆಡೆ ಶಿಕ್ಷಕರೂ ಕೂಡ ತರಗತಿಗಳ ಸಮಯ ಬದಲಾವಣೆಯ ಜೊತೆಗೆ ಬೇಸಿಗೆ ರಜೆ ಘೋಷಣೆಗೆ ಮನವಿ ಮಾಡಿದ್ದಾರೆ. ಇನ್ನೊಂದೆಡೆ ಕೋವಿಡ್ ತಾಂತ್ರಿಕ ಸಮಿತಿ ಕೊರೊನಾ ಹೆಚ್ಚಳದ ಬೆನ್ನಲ್ಲೇ ಶಾಲೆಗಳಿಗೆ ರಜೆ ಘೋಷಣೆ ಮಾಡುವಂತೆಯೂ ಸೂಚನೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ತನ್ನ ನಿರ್ಧಾರವನ್ನು ಶೀಘ್ರದಲ್ಲಿಯೇ ಪ್ರಕಟಿಸುವ ಸಾಧ್ಯತೆಯಿದೆ.

https://kannada.newsnext.live/bollywood-vidyabalan-corona-newphotoshoot-instagram-post/

Comments are closed.