ತಿಳಿನೀರಿನಲ್ಲೂ ಮತ್ತೇರಿಸಿದ ಬಾಲಿವುಡ್ ಬೆಡಗಿ…! ಜಾಹ್ನವಿ ಕಪೂರ್ ವೆಕೆಶನ್ ಪೋಟೋಸ್ ವೈರಲ್….!!

ಮಾಲ್ಡೀವ್ಸ್  ಭೂಲೋಕದ ಸ್ವರ್ಗದಂತಿದ್ದು ಸೆಲೆಬ್ರೆಟಿಗಳ  ಪಾಲಿಗೆ ಹಾಟ್ ಫೇವರಿಟ್. ಮೊನ್ನೆ ಮೊನ್ನೆಯಷ್ಟೇ ಬಾಲಿವುಡ್ ಬೆಡಗಿ ದಿಯಾ ಮಿರ್ಜಾ, ಸ್ಯಾಂಡಲ್ ವುಡ್ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ  ಹನಿಮೂನ್ ಮುಗಿಸಿ ಮರಳಿದ್ದಾರೆ. ಈ ಮಧ್ಯೆ ಮಾಲ್ಡೀವ್ಸ್ ಗೆ ಬಾಲಿವುಡ್ ನ ಹಾಟ್ ಸುಂದರಿ ಜಾಹ್ನವಿ ಕಪೂರ್ ಎಂಟ್ರಿ ಕೊಟ್ಟಿದ್ದಾರೆ.

ರೂಹಿ ಚಿತ್ರದ ಶೂಟಿಂಗ್ ಬಳಿಕ ವೆಕೆಶನ್ ಗಾಗಿ ಮಾಲ್ಡೀವ್ಸ್ ಗೆ ಹಾರಿದ ಜಾಹ್ನವಿ ಕಪೂರ್ ನೆಲಕಾಣುವಂತ ತಿಳಿನೀರಿದ ಸಮುದ್ರದಲ್ಲಿ ಮತ್ತೇರಿಸುವ ಮಾದಕ ನೋಟ ಬೀರುತ್ತ ಯುವಕರ ಎದೆಬಡಿತ ಹೆಚ್ಚಿಸುವ ಬಟ್ಟೆ ತೊಟ್ಟು ಮಿಂಚುತ್ತಿದ್ದಾರೆ. ತಮ್ಮ ಹಾಟ್ ವೆಕೆಶನ್ ನ ಸ್ಪೆಶಲ್ ಪೋಟೋಸ್ ಗಳನ್ನು ಜಾಹ್ನವಿ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸ್ವಿಮ್ ಸೂಟ್ ಹಾಗೂ ಸಖತ್ ಮಾಡರ್ನ್ ಡ್ರೆಸ್ ಗಳಲ್ಲಿ ನೀರಾಟವಾಡುತ್ತ ಜಾಹ್ನವಿಕಪೂರ್ ಪೋಸ್ ನೀಡುತ್ತಿದ್ದು, ಸಖತ್ ಸಖತ್ ಟೈಟಲ್ ಜೊತೆ ಪೋಟೋಸ್ ಕೂಡ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.

https://www.instagram.com/janhvikapoor/?utm_source=ig_embed

ಇತ್ತೀಚಿಗಷ್ಟೇ ಸಹೋದರಿ ಖುಷಿ ಕಪೂರ್ ಸಿನಿಮಾ ಬಗ್ಗೆ ಅಧ್ಯಯನ ನಡೆಸುತ್ತಿರುವ ನ್ಯೂಯಾರ್ಕ್ ಸಿಟಿಗೆ ಭೇಟಿ ನೀಡಿದ್ದ ಜಾಹ್ನವಿ ಕಪೂರ್ ತಂಗಿ ಜೊತೆ ಶಾಪಿಂಗ್ ಮಾಡಿ ಸಖತ್ ಎಂಜಾಯ್ ಮಾಡಿದ್ದರು. ಬಳಿಕ ರಜೆಗಾಗಿ ಮಾಲ್ಡೀವ್ಸ್ ಗೆ ಹಾರಿದ್ದಾರೆ.

https://www.instagram.com/janhvikapoor/?utm_source=ig_embed

ರಾಜಕುಮಾರ್ ರಾವ್ ಹಾಗೂ ವರುಣ ಶರ್ಮಾ ಅಭಿನಯದ  ಹಾರರ್ ಕಾಮಿಡಿ ಸಿನಿಮಾ ರೂಹಿಯಲ್ಲಿ ನಟಿಸಿದ ಜಾಹ್ನವಿ ಕಪೂರ್ ಹಲವು ನೆಟ್ ಫಿಕ್ಸ್ಲ್ ನ ಭೂತದ ಸೀರಿಸ್ ಗಳಲ್ಲೂ ಕಾಣಿಸಿಕೊಂಡಿದ್ದಾರೆ.

2018 ರಲ್ಲಿ ಧಡಕ್ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಜಾಹ್ನವಿ ಕಪೂರ್ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ಶ್ರೀದೇವಿ ಹಾಗೂ ಬೋನಿಕಪೂರ್ ಪುತ್ರಿ.  

Comments are closed.