ಉತ್ತರ ಕರ್ನಾಟಕದ ಉಡುಗೆಯಲ್ಲಿ ಮಿಂಚಿದ ಚಿಟ್ಟೆ…! ಪೋಟೋಶೂಟ್ ಗೆ ಮರುಳಾದ ಅಭಿಮಾನಿಗಳು…!

ಮೊನ್ನೆ ಮೊನ್ನೆಯಷ್ಟೇ ಬಾಲಿವುಡ್ ಹಿರೋ ಜೊತೆ ಕನ್ನಡದ ಹಾಡು ಹಾಡಿ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದ ಸ್ಯಾಂಡಲ್ ವುಡ್ ಚಿಟ್ಟೆ ಹರ್ಷಿಕಾ ಪೂಣಚ್ಚ ಈಗ ಖಡಕ್ ಜವಾರಿ ಹುಡುಗಿ ಅವತಾರದಲ್ಲಿ ಮಿಂಚಿದ್ದಾರೆ. ಬಿರುಬೇಸಿಗೆಯಲ್ಲಿ ಮೈತುಂಬ ಸೀರೆ ಉಟ್ಟು ನತ್ತು ತೊಟ್ಟು ಉತ್ತರ ಕರ್ನಾಟಕದ ಸ್ಟೈಲ್ ನಲ್ಲಿ ಮಿಂಚಿ ಮೋಡಿ ಮಾಡಿದ್ದಾರೆ.

ಭೋಜ್ ಪುರಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಹರ್ಷಿಕಾ ಸಿನಿಮಾ ಮುಗಿಯುತ್ತಿದ್ದಂತೆ ಪೋಟೋಶೂಟ್ ನತ್ತ ಮುಖಮಾಡಿದ್ದಾರೆ. ಸದಾಕಾಲ ಮಾರ್ಡನ್ ಉಡುಪುಗಳಲ್ಲೇ ಮೋಡಿ ಮಾಡ್ತಿದ್ದ ಹರ್ಷಿಕಾ ಈ ಭಾರಿ ಸೀರೆಗೆ ಸೈ ಎಂದಿದ್ದಾರೆ.

ಅಷ್ಟೇ ಅಲ್ಲ ಅಪ್ಪಟ ಉತ್ತರ ಕರ್ನಾಟಕದ ಶೈಲಿನಲ್ಲಿ ಸೀರೆ ಉಟ್ಟು ಮೂಗಿಗೆ ದೊಡ್ಡದಾದ ಮುತ್ತಿನ ನತ್ತು ತೊಟ್ಟು, ಬೈತಲೆ ಬೊಟ್ಟು, ಮೈತುಂಬೋ ಆಭರಣ,ಹಣೆಗೆ ಬೊಟ್ಟಿಟ್ಟು ಅಪ್ಪಟ ದೈಶಿ ಶೈಲಿಯಲ್ಲಿ ಪೋಟೋಶೂಟ್ ಗೆ ಪೋಸ್ ನೀಡಿದ್ದಾರೆ.

https://www.instagram.com/p/CMZsWjFH4g3/?utm_source=ig_web_copy_link

ನೀಲಿಬಣ್ಣದ ಸೀರೆಗೆ ಗೋಲ್ಡ್ ಡಾಟ್, ಅದಕ್ಕೊಪ್ಪುವ ಅಚ್ಚ ಕೆಂಪು ಬ್ಲೌಸ್ ತೊಟ್ಟಿರೋ ಹರ್ಷಿಕಾ ಪ್ರೇಕ್ಷಕರ ಎದೆಬಡಿತ ಹೆಚ್ಚಿಸುವಂತೆ ಪೋಟೋಶೂಟ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಉತ್ತರ ಕರ್ನಾಟಕದ ಸ್ಟೈಲ್ ನಲ್ಲಿ ಪೋಟೋಶೂಟ್ ಮಾಡಿಸ್ತಾ ಇರೋದು ಖುಷಿತಂದಿದೆ ಎಂದಿದ್ದಾರೆ.

ಹೊಸ ಹೊಸ ಸಿನಿಮಾಗಳ ಆಫರ್ ಕೈಯಲ್ಲಿದ್ದು, ಈ ಕಾರಣಕ್ಕಾಗಿ ಹರ್ಷಿಕಾ ಕೂಡ ವಿಭಿನ್ನ ಶೈಲಿನಲ್ಲಿ ಪೋಟೋಶೂಟ್ ಗಳಲ್ಲಿ ಬ್ಯುಸಿಯಾಗಿದ್ದಾರಂತೆ.  

Comments are closed.