ಮತ್ತೆ ಬಾಲಿವುಡ್ ನಲ್ಲಿ ಸದ್ದು ಮಾಡಿದ ಕಾಸ್ಟಿಂಗ್ ಕೌಚ್….! ಹೀರೋ ಜೊತೆ ಮಲಗಲು ಹೇಳಿದ್ರು ಎಂದ ನಟಿ…!!


ಮಾಡೆಲ್ ಹಾಗೂ ಹಿಂದಿಕಿರುತೆರೆ ನಟಿ ಕಿಶ್ವರ್ ಮರ್ಚೆಂಟ್ ಮತ್ತೊಮ್ಮೆ ಕಾಸ್ಟಿಂಗ್ ಕೌಚ್ ನೆನಪುಗಳನ್ನು ಹಂಚಿಕೊಳ್ಳುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ತಾಯಿಯೊಂದಿಗೆ ಸಿನಿಮಾದ ಬಗ್ಗೆ ಮಾತನಾಡಲು ಹೋದಾಗ ನನಗೆ ಸಿನಿಮಾ ನಿರ್ಮಾಪಕರು ಹೀರೋ ಜೊತೆ ಮಲಗಲು ಹೇಳಿದ್ರು ಎಂಬ ಬಾಂಬ್ ಸಿಡಿಸಿದ್ದಾರೆ.

ಪ್ರಸ್ತುತ ತಮ್ಮ ಕೆರಿಯರ್ ನಿಂದ ಬಿಡುವು ಪಡೆದು ಮೊದಲ ತಾಯ್ತನದ ಸಂಭ್ರಮದಲ್ಲಿರೋ ಕಿಶ್ವರ್ ಮರ್ಚಂಟ್  ತಾವು ಕೆರಿಯರ್ ನಲ್ಲಿ ಅನುಭವಿಸಿದ ಹಿಂಸೆಯನ್ನು ವಿವರಿಸಿದ್ದು, ಬಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಒಂದು ಸಾಮಾನ್ಯ ಸಂಗತಿ ಎಂಬುದನ್ನು ಉಲ್ಲೇಖಿಸಿದ್ದಾರೆ.

ಇತ್ತೀಚಿಗೆ ಮೀಡಿಯಾವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ ಪ್ಯಾರ್ ಕಿ ಯೇ ಏಕ ಕಹಾನಿ ನಟಿ ಕಿಶ್ವರ್, ನಾನು ತಾಯಿಯೊಂದಿಗೆ ಹೋಗಿದ್ದೆ. ಆಗ ಇಂತಹದೊಂದು ಆಫರ್ ನನಗೆ ಬಂತು.

ನಾನು ನಯವಾಗಿ ನಿರಾಕರಿಸಿ ಎದ್ದು ಬಂದೆ. ಇಂತಹ ಅನುಭವಗಳು ಹಲವರಿಗೆ ಆಗಿದೆ. ಬಾಲಿವುಡ್ ಇದೇ ಕಾರಣಕ್ಕೆ ಕುಖ್ಯಾತಿಯನ್ನು ಪಡೆದಿದೆ ಎಂದು ಕಿಶ್ವರ ಹೇಳಿದ್ದಾರೆ.

https://kannada.newsnext.live/government-assistance-for-artists-click-here-to-apply/

ನಾಯಕ ಹಾಗೂ ನಿರ್ಮಾಪಕರ ಹೆಸರನ್ನು ಹೇಳಲು ನಾನು ಇಷ್ಟಪಡುವುದಿಲ್ಲ ಎಂದಿರುವ ಕಿಶ್ವರ ಸದ್ಯ ತಾಯ್ತನದ ಬಿಡುವಿನಲ್ಲಿ ತಮ್ಮ ನಟನೆಯ ಮೆಮೋರಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತ ಎಂಜಾಯ್ ಮಾಡುತ್ತಿದ್ದಾರೆ.

https://kannada.newsnext.live/ipl-shift-uae-bcci-clarification/

ಹಿಪ್ ಹಿಪ್ ಹುರ್ರೆ, ಏಕ್ ಹಸೀನಾ ಥೀ, ಇತನಾ ನಾ ಕರೋ ಮುಜೇ ಪ್ಯಾರ್ ಸೇರಿದಂತೆ ಹಲವು ರಿಯಾಲಿಟಿಶೋ,ಕಾರ್ಯಕ್ರಮಗಳಲ್ಲಿ ನಟಿಸಿರುವ ಕಿಶ್ವರ, ಬಿಗ್ ಬಾಸ್ ಸೀಸನ್ 9 ರ ಸ್ಪರ್ಧಿ ಕೂಡ ಹೌದು.

https://kannada.newsnext.live/sandalwood-777charli-movie-newfilm-rakshithshetty-role/

5 ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ಕಿಶ್ವರ ಕಾಸ್ಟಿಂಗ್ ಕೌಚ್ ಆರೋಪಕ್ಕೆ ಹಲವು ಬೆಂಬಲ ಕೂಡ ವ್ಯಕ್ತಪಡಿಸಿದ್ದು, ಇಂಡಸ್ಟ್ರಿಯ ಕರಾಳತೆ ಇದು ಎಂದಿದ್ದಾರೆ. 2016 ರಲ್ಲಿ ಸುಯ್ಯೇಶ್ ರೈ ಜೊತೆ ವಿವಾಹವಾದ ಕಿಶ್ವರ ಈಗ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ.

Comments are closed.