ಕರಾವಳಿಯ ಪ್ರಭಾವಿ ರಾಜಕಾರಣಿಯ ಕಚೇರಿಯಲ್ಲೇ ಲವ್ವಿಡವ್ವಿ ! ಸಾರ್ವಜನಿಕರಿಂದ ಪೊಲೀಸರಿಗೆ ದೂರು

0

ಮಂಗಳೂರು : ಕರಾವಳಿ ಭಾಗದ ಪ್ರಭಾವಿ ರಾಜಕಾರಣಿಯೋರ್ವರ ಕಚೇರಿಯಲ್ಲಿಯೇ ಸಿಬ್ಬಂದಿಯೋರ್ವ ಯುವತಿಯೊಂದಿಗೆ ಲವ್ವಿ ಡವ್ವ ನಡೆಸಿದ್ದಾನೆ.

ಮಂಗಳೂರು ಡಿಸಿ ಕಚೇರಿ ಸಂಕೀರ್ಣದಲ್ಲಿರುವ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಭಾನುವಾರವಾಗಿದ್ದರಿಂದ ಡಿಸಿ ಕಚೇರಿಯ ಸಂಕೀರ್ಣ ಎಲ್ಲಾ ಕಚೇರಿಯ ಬಾಗಿಲು ಮುಚ್ಚಿಟ್ಟು. ಸಿಬ್ಬಂದಿಗಳು ರಜೆಯಿರೋದ್ರಿಂದಾಗಿ ಕಚೇರಿಗೆ ಬಂದಿಲ್ಲ. ಆದ್ರೆ ರಾಜಕಾರಣಿಯೋರ್ವರ ಕಚೇರಿಯ ಬಾಗಿಲು ಅರ್ಧ ತೆಗೆದಿತ್ತು.

ಕಚೇರಿಯಲ್ಲಿ ಸಿಬ್ಬಂದಿಯ ಜೊತೆಗೆ ಗೋವಾ ಮೂಲದ ಯುವತಿಯೋರ್ವಳು ಇರೋದು ಪತ್ತೆಯಾಗಿತ್ತು. ಇಬ್ಬರೂ ಕೂಡ ಕಚೇರಿಯ ಅರ್ಧ ಬಾಗಿಲು ಮುಚ್ಚಿಕೊಂಡು ಕದ್ದು ಮುಚ್ಚಿ ವರ್ತನೆ ಮಾಡುತ್ತಿದ್ದರು. ರಾಜಕಾರಣಿಯ ಕಚೇರಿಯ ಸಿಬ್ಬಂದಿ ಹಾಗೂ ಯುವತಿಯ ಮೇಲೆ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸಿದ್ದಾರೆ.

ಈ ವೇಳೆಯಲ್ಲಿ ಯುವತಿ ಮೂಲತಃ ಗೋವಾದವಳಾಗಿದ್ದು ಪದವಿನಂಗಡಿಯಲ್ಲಿ ವಾಸವಾಗಿದ್ದಳು ಎಂದು ತಿಳಿದು ಬಂದಿದೆ. ಯುವತಿ ಹಾಗೂ ಸಿಬ್ಬಂದಿಗೆ ಬುದ್ದಿ ಮಾತು ಹೇಳಿ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.

Leave A Reply

Your email address will not be published.