ಸಾಲದ ಹಣ ಕೇಳಿದ್ರೆ ಅತ್ಯಾಚಾರದ ಕೇಸ್ ಹಾಕ್ತೀನಿ : ಬ್ಯಾಂಕ್ ಸಿಬ್ಬಂದಿ ಕಾಲು ಹಿಡಿದರೂ ನಿಲ್ಲದ ಮಹಿಳೆಯ ದರ್ಪ

0

ಬೆಂಗಳೂರು : ಸಾಲದ ಹಣ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ಗ್ರಾಹಕರ ಮನೆಗೆ ತೆರಳಿದ್ದಾರೆ. ಈ ವೇಳೆಯಲ್ಲಿ ಸಾಲಗಾರ ಪತ್ನಿ ಬ್ಯಾಂಕ್ ಸಿಬ್ಬಂದಿಯ ಮೇಲೆ ದರ್ಪ ತೋರಿದ್ದಾರೆ. ಮಾತ್ರವಲ್ಲ ಸಾಲದ ಹಣ ವಾಪಾಸ್ ಕೇಳಿದ್ರೆ ಅತ್ಯಾಚಾರದ ಕೇಸ್ ದಾಖಲಿಸುತ್ತೇನೆ ಅಂತಾ ಅವಾಜ್ ಹಾಕಿದ್ದಾಳೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಬ್ಯಾಂಕ್ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಸಾಲದ ಹಣದ ರಿಕವರಿಗೆ ಅಂತಾ ಮೂವರು ಬ್ಯಾಂಕ್ ಸಿಬ್ಬಂದಿ ಮಹಿಳೆಯ ಮನೆಗೆ ಬಂದಿದ್ದಾರೆ. ಈ ವೇಳೆ ಮಹಿಳೆ ಸುಖಾ ಸುಮ್ಮನೆ ಬ್ಯಾಂಕ್ ಸಿಬ್ಬಂದಿಯೊಂದಿಗೆ ಕ್ಯಾತೆ ತೆಗೆದಿದ್ದಾಳೆ. ಬ್ಯಾಂಕ್ ಸಿಬ್ಬಂದಿಯನ್ನು ತಾನೇ ಎಳೆದಾಡಿ. ಪೊಲೀಸ್ ಠಾಣೆಯಲ್ಲಿ ತಾನು ಅತ್ಯಾಚಾರದ ಕೇಸ್ ದಾಖಲಿಸುವುದಾಗಿ ಬೆದರಿಕೆಯೊಡ್ಡಿದ್ದಾಳೆ.

ನಿಮ್ಮ ಪೋಟೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿ ನಿಮ್ಮನ್ನು ಅರೆಸ್ಟ್ ಮಾಡಿಸುತ್ತೇನೆ ಅಂತಾ ಅವಾಜ್ ಹಾಕಿದ್ದಾಳೆ. ಈ ವೇಳೆಯಲ್ಲಿ ಬ್ಯಾಂಕ್ ಸಿಬ್ಬಂದಿಯೋರ್ವರು ಮಹಿಳೆಯ ಕಾಲಿಗೆ ಎರಗಿದ್ದಾರೆ. ಆದ್ರೂ ಜಗ್ಗದ ಮಹಿಳೆ ಮತ್ತೆ ಬ್ಯಾಂಕ್ ಸಿಬ್ಬಂದಿಯೊಂದಿಗೆ ಕಿರಿಕ್ ತೆಗೆದು ದರ್ಪ ಮೆರೆದಿದ್ದಾಳೆ. ಮಹಿಳೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಮಹಿಳೆಯ ವರ್ತನೆಗೆ ಇದೀಗ ಎಲ್ಲೆಡೆಯಿಂದಲೂ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

Leave A Reply

Your email address will not be published.