ಮಹಿಳೆಯ ಗುಪ್ತಾಂಗದಲ್ಲಿ ಬರೋಬ್ಬರಿ 8.31 ಕೋಟಿ ಮೌಲ್ಯದ ಡ್ರಗ್ಸ್ ಸಾಗಾಟ !

0

ಬೆಂಗಳೂರು : ಗುಪ್ತಾಂಗದಲ್ಲಿ 8.31 ಕೋಟಿ ರೂಪಾಯಿ ಮೌಲ್ಯದ 1.385 ಕೆ.ಜಿ. ತೂಕದ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಗುಟೇಮಾಲ್ ದೇಶದ ಹರ್ರೆರಾ ವ್ಯಾಲೆಂಜುಲಾ ಡಿ ಲೋಪೆಜ್ ಸಿಲ್ವಿಯಾ ಗ್ವಾಡಾಲುಪೆ ಎಂಬಾಕೆಯೆ ಬಂಧಿತ ವಿದೇಶಿ ಮಹಿಳೆ. ಸುಮಾರು 1 ಕೆ.ಜಿ. 385 ಗ್ರಾಂ ತೂಕದ ಕೊಕೆಕ್ ಮಾದಕ ವಸ್ತುವನ್ನು ಸುಮಾರು 150 ಟ್ಯೂಬ್ ಮಾತ್ರಗಳನ್ನಾಗಿ ತಯಾರಿಸಿ, ಪ್ಲಾಸ್ಟಿಕ್ ರೀತಿಯ ವಸ್ತುವಿನಿಂದ ಕವರ್ ಮಾಡಿ ತನ್ನ ಗುಪ್ತಾಂಗದಲ್ಲಿ ಇರಿಸಿಕೊಂಡಿದ್ದಳು.

ಸುಮಾರು ಎರಡು ದಿನಗಳ ಕಾಲ ಆಕೆಯ ಯಾವುದೇ ಆಹಾರವನ್ನಾಗಲಿ, ನೀರನ್ನಾಗಲಿ ಕುಡಿದಿರಲಿಲ್ಲ. ಆಡಿಸ್ ಅಬಾಬದಿಂದ ಇಥಿಯೋಫಿಯಾ ಏರ್ ಲೈನ್ಸ್ ಮೂಲಕ ಬೆಂಗಳೂರಿನ ಕೆಂಪೆಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಗೆ ಬಂದಿಳಿದಿದ್ದಾಳೆ.

ಈ ವೇಳೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಆಕೆಯನ್ನು ತಪಾಸಣೆಗೆ ಒಳಪಡಿಸಿದಾಗಿ ಸಿಕ್ಕಿ ಬಿದ್ದಿದ್ದಾಳೆ. ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಸಾಗಾಟ ಮಾಡೋದನ್ನು ನೋಡಿದ ಕಸ್ಟಮ್ಸ್ ಅಧಿಕಾರಿಗಳೇ ಒಮ್ಮೆ ಧಂಗಾಗಿ ಹೋಗಿದ್ದಾರೆ. ಮಹಿಳೆಯೋರ್ವಳು ತನ್ನ ಗುಪ್ತಾಂಗದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಸಾಗಾಟ ಮಾಡಿರೋದು ಇತಿಹಾಸದಲ್ಲಿಯೇ ಮೊದಲು.

ಮಹಿಳೆ ಇದೇ ಮೊದಲ ಬಾರಿಗೆ ಡ್ರಗ್ಸ್ ಸಾಗಾಟ ಮಾಡುತ್ತಿರೋದಾ, ಇಲ್ಲಾ ಈ ಹಿಂದೆಯೂ ಆಕೆ ಡ್ರಗ್ಸ್ ಸಾಗಾಟ ಮಾಡಿದ್ಲಾ ಅನ್ನೋ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮಾತ್ರವಲ್ಲ ಆಕೆಯ ಕೋಟ್ಯಾಂತರ ಮೌಲ್ಯದ ಡ್ರಗ್ಸ್ ಎಲ್ಲಿಗೆ ಸಾಗಾಟ ಮಾಡುತ್ತಿದ್ಲು ಅನ್ನೋ ಬಗ್ಗೆಯೂ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Leave A Reply

Your email address will not be published.