ಸೌಂದರ್ಯಕ್ಕೆ ಸವಾಲೆಸೆದ 19 ವರ್ಷದ ಶಿಖರ್ ಧವನ್ ಪುತ್ರಿ !

0

ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ 19 ವರ್ಷದ ಪುತ್ರಿ ಇದೀಗ ಸಾಮಾಜಿಕ ಕಾರ್ಯವೊಂದರ ಮೂಲಕ ಬಾರೀ ಸುದ್ದಿಯಲ್ಲಿದ್ದಾರೆ.

ಶಿಖರ್ ಧವನ್ ಪುತ್ರಿ ಆಲಿಯಾ ಧವನ್ ಕ್ಯಾನ್ಸರ್ ಸಂಶೋಧನೆ ಮತ್ತು ಕ್ಯಾನ್ಸರ್ ಪೀಡಿತರ ನಿಧಿ ಸಂಗ್ರಹಕ್ಕೆ ವಿಭಿನ್ನ ಸಾಹಸಕ್ಕೆ ಕೈಹಾಕಿದ್ದಾರೆ.

ವಲ್ಡ್ ಗ್ರೇಟೆಸ್ಟ್ ಶೇವ್ ಅಭಿಯಾನದಲ್ಲಿ ಪಾಲ್ಗೊಂಡಿರೋ ಆಲಿಯಾ ಧವನ್ ತನ್ನ ಸಂಪೂರ್ಣ ತಲೆಗೂದಲನ್ನು ಶೇವ್ ಮಾಡೋದಕ್ಕೆ ಮುಂದಾಗಿದ್ದಾರೆ.

ತನ್ನ ತಲೆಯ ಕೂದಲನ್ನು ಶೇವ್ ಮಾಡೋ ಮೂಲಕ ಕ್ಯಾನ್ಸರ್ ಪೀಡಿತರಿಗೆ ತನ್ನ ಕೈಲಾದ ಸಹಾಯ ಮಾಡಲು ದಿಟ್ಟ ಹೆಜ್ಜೆ ಇರಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ 19 ವರ್ಷದ ಆಲಿಯಾ ಧವನ್ ನಿಧಿ ಸಂಗ್ರಹ ಆರಂಭಿಸಿದ್ದಾರೆ.

ಶಿಖರ್ ಧವನ್ 2014 ರಲ್ಲಿ ವಿವಾಹವಾಗಿದ್ದ ಶಿಖರ್ ಧವನ್ ಗೆ ಮೂವರು ಮಕ್ಕಳಿದ್ದಾರೆ.

19 ವರ್ಷದ ಆಲಿಯಾ ಧವನ್ ಅವರು ಕ್ರಿಕೆಟಿಗ ಶಿಖರ್ ಧವನ್ ಹಿರಿಯ ಮಗಳು.

ಸದಾ ಸಾಮಾಜಿಕ ಕಾರ್ಯಕ್ಕೆ ಮಿಡಿಯುವ ಆಲಿಯಾ ಧವನ್ ಇದೀಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ.

ಶಿಖರ್ ಧವನ್ 2014ರಲ್ಲಿ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಬಾಕ್ಸಿಂಗ್ ಪಟು ಭಾರತೀಯ ಮೂಲದ ಆಸ್ಟ್ರೇಲಿಯಾ ನಿವಾಸಿ ಆಯೇಶಾ ಮುಖರ್ಜಿ ಎಂಬವರನ್ನು ವಿವಾಹವಾಗಿದ್ದರು.

2 ಮಕ್ಕಳ ತಾಯಿಯಾಗಿದ್ದ ಆಯೇಶಾ ಮುಖರ್ಜಿಗೆ ಮೊದಲ ಮದುವೆಯಾಗಿ 2 ಮಕ್ಕಳಿದ್ದರು. ನಂತರ ಧವನ್ ಜೊತೆ ಎರಡನೇ ಮದುವೆಯಾಗಿದ್ದರು.

ಮದುವೆಯಾದ ಬಳಿಕ ಶಿಖರ್ ಧವನ್ ಆಯೇಶಾ ಮಕ್ಕಳಾದ ಆಲಿಯಾ ಮತ್ತು ರೆಹಾರನ್ನು ಧವನ್ ದತ್ತು ಪಡೆದಿದ್ದರು.

ಧವನ್ ಹಾಗೂ ಆಯೇಶಾ ದಂಪತಿಗೆ ಝೋರಾವರ್ ಧವನ್ ಎಂಬ ಗಂಡು ಮಗುವಿದ್ದಾನೆ. .

ಆಯೇಶಾ ಧವನ್ ಕುಟುಂಬ

Leave A Reply

Your email address will not be published.