ಜ್ಯೋತಿಷ್ಯಕ್ಕೂ ಕೋಡ್ ಆಫ್ ಕಂಡಕ್ಟ್…! ಚುನಾವಣೆ ಭವಿಷ್ಯ ಹೇಳಂಗಿಲ್ಲ…!!

ನವದೆಹಲಿ: ಕೊರೋನಾ ನಡುವೆಯೇ ದೇಶದಲ್ಲಿ ಹಲವೆಡೆ ಉಪಚುನಾವಣೆ ಹಾಗೂ ಕೆಲವೆಡೆ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಗರಿಗೆದರಿದೆ. ಆದರೆ ಈ ಭಾರಿ ನೀತಿ ಸಂಹಿತೆ ನಿಯಮಗಳನ್ನು ಚುನಾವಣಾ ಆಯೋಗ ಮತ್ತಷ್ಟು ಬಿಗಿಗೊಳಿಸಿದ್ದು, ಜ್ಯೋತಿಷ್ಯಿಗಳ ಮೇಲೂ ಕೋಡ್ ಆಫ್ ಕಂಡಕ್ಟ್ ಹೇರಿದೆ.

ಬಿಹಾರದಲ್ಲಿ ಚುನಾವಣೆ ಕಾವು ಜೋರಾಗಿದ್ದು, ಮತದಾರರನ್ನು ಸೆಳೆಯುವ ಸರ್ಕಸ್ ಆರಂಭಗೊಂಡಿದೆ. ಈಗಾಗಲೇ ನೀತಿ ಸಂಹಿತೆ ಜಾರಿ ಮಾಡಿರುವ ಚುನಾವಣಾ ಆಯೋಗ ಮತ್ತೆ ಪರಿಷ್ಕೃತ ನೀತಿ ಸಂಹಿತೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭವಿಷ್ಯ ಹಾಗೂ ಜ್ಯೋತಿಷ್ಯ ಹೇಳೋದರ ಮೇಲೂ ನಿರ್ಭಂದ ಹೇರಿದೆ.

ನೀತಿ ಸಂಹಿತೆ ಜಾರಿಯಲ್ಲಿ ಇರುವರೆಗೂ ಯಾವುದೇ ಜ್ಯೋತಿಷಿ, ಟ್ಯಾರೋ ಕಾರ್ಡ್ ರೀಡರ್ ಸೇರಿದಂತೆ ಯಾವುದೇ ರೀತಿಯ ಭವಿಷ್ಯ ಹೇಳುವವರೆ ಗೆಲ್ಲುವವರ ಯಾರೆಂದು ಹೇಳುವುದು, ಫಲಿತಾಂಶವನ್ನು ಊಹಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಅಲ್ಲದೇ ನೀತಿ ಸಂಹಿತೆ ಜಾರಿ ಇರುವ ವೇಳೆಯಲ್ಲಿ ಯಾವುದೇ  ವ್ಯಕ್ತಿ ಅಥವಾ ಸಂಸ್ಥೆ ಪೋಲ್ ನಡೆಸಬಾರದು, ಮಾಧ್ಯಮಗಳು ಕೂಡ ಪೋಲ್ ಗಳನ್ನು ಪ್ರಸಾರ ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ಆದೇಶಿಸಿದೆ.

ಈಗಾಗಲೇ ನಡೆದ ಉತ್ತರ ಪ್ರದೇಶ್ , ಉತ್ತರಾಖಾಂಡ,ಪಂಜಾಬ್,ಗೋವಾ,ಮಣಿಪುರ ವಿಧಾನಸಭೆಗಳಿಗೆ ನಡೆದ ಚುನಾವಣೆ ವೇಳೆ ನಡೆದ ವಿದ್ಯಮಾನಗಳನ್ನು ಆಧಾರವಾಗಿಟ್ಟುಕೊಂಡು ಆಯೋಗ ಜ್ಯೋತಿಷ್ಯದ ಮೇಲೆ ನಿರ್ಭಂದ ಹೇರಿ ಆದೇಶ ಹೊರಡಿಸಿದೆ ಎನ್ನಲಾಗಿದೆ.

ಚುನಾವಣೆ ಆರಂಭವಾಗುತ್ತಿದ್ದಂತೆ ಕುಂಡಲಿ ಹಿಡಿದು ಸಿಎಂ ಕ್ಯಾಂಡಿಡೇಟ್ ಸೇರಿದಂತೆ ಎಲ್ಲ ಜಾತಕ ವಿಮರ್ಶೆಗೆ ಮುಂದಾಗುತ್ತಿದ್ದ ಜ್ಯೋತಿಷಿಗಳಿಗೆ ಇದರಿಂದ ಹಿನ್ನಡೆಯಾಗಿದ್ದು, ಆಯೋಗದ ನಿರ್ಧಾರದ ವಿರುದ್ಧ ಅಸಮಧಾನ ತೋಡಿಕೊಂಡಿದ್ದಾರೆ.

Comments are closed.