ಐಪಿಎಲ್ ಗೂ ಕೊರೋನಾ ಕರಿನೆರಳು…! ವಾಖೆಂಡೆ ಗ್ರೌಂಡ್ ಸ್ಟಾಫ್ ಗೆ ಕೋವಿಡ್ ಪಾಸಿಟಿವ್…!!

ಕೊರೋನಾದಿಂದ ಜನಜೀವನ ಅಸ್ತವ್ಯಸ್ಥಗೊಂಡಿರೋದರ ಮಧ್ಯೆಯೇ ಕ್ರಿಕೆಟ್ ಪ್ರಿಯರಿಗೂ ಕಹಿಸುದ್ದಿಯೊಂದು ಮಹಾರಾಷ್ಟ್ರದಿಂದ ಹೊರಬಿದ್ದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಪಂದ್ಯಾವಳಿಗೆ ಕೆಲವೇ ದಿನಗಳಿರುವಾಗಲೇ ಪಂದ್ಯದ ಮೇಲೆ ಕೊರೋನಾ ಕರಿಛಾಯೆಯ ಆತಂಕ ಎದುರಾಗಿದೆ.

ಮುಂಬೈನ ವಾಂಖೆಡೆ ಮೈದಾನದ ಗ್ರೌಂಡ್ ಸ್ಟಾಫ್ ಗೆ ಕೊರೋನಾ ತಗುಲಿದ್ದು, ಐಪಿಎಲ್ ಪ್ರಾಯೋಜಕರ ಎದೆಯಲ್ಲಿ ನಡುಕ ಮೂಡಿಸಿದೆ. ಸದ್ಯ ಐಪಿಎಲ್ ಪಂದ್ಯಾವಳಿಗೆ ಯಾವುದೇ ಆತಂಕ ಎದುರಾಗದೇ ಇದ್ದರೂ ಕೊವೀಡ್ ನಿಯಮಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಸೂಚನೆಯನ್ನು ಸರ್ಕಾರ ನೀಡಿದೆ.

ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಮೀತಿಮೀರಿದ್ದು, ಸರ್ಕಾರ ಈಗಾಗಲೇ ನೈಟ್ ಕರ್ಪ್ಯೂ ಮೂಲಕ ಜನಜೀವನದ ಮೇಲೆ ನಿರ್ಬಂಧ ಹೇರಿದೆ. ಹೀಗಾಗಿ ಐಪಿಎಲ್ ಪಂದ್ಯಾವಳಿಗಳು ಅತ್ಯಂತ ಸೂಕ್ಷ್ಮ ಪರಿಸ್ಥಿತಿಯಲ್ಲಿ ನಡೆಯಲಿದೆ. ಇದೇ ಏಪ್ರಿಲ್ 9 ರಂದು ಮೊದಲ ಪಂದ್ಯ ನಡೆಯಲಿದೆ.

ಇನ್ನು ವಾಂಖೆಡೆ ಮೈದಾನದ ಸಿಬ್ಬಂದಿ ಕೊರೋನಾಗೆ ತುತ್ತಾಗಿರುವ ಸಂಗತಿ ತಿಳಿದ ಮುಂಬೈ ಪ್ರಾಂಚೆಸಿ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಪಂದ್ಯಾವಳಿ ಆರಂಭಕ್ಕೆ ಕೆಲವೆ ದಿನಗಳಿರುವಾಗ ಇಂತಹ ಸುದ್ದಿಗಳು ಹೊರಬಂದರೆ ಖಂಡಿತಾ ಆತಂಕ ಹೆಚ್ಚುತ್ತದೆ. ಆದರೆ ನಾವು ಎಲ್ಲ ಕೊರೋನಾ ಮುಂಜಾಗ್ರತಾ ನಿಯಮಗಳನ್ನು ಪಾಲಿಸುತ್ತಿದ್ದೇವೆ ಎಂದಿದ್ದಾರೆ.

ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಿರುವ ಮಹಾರಾಷ್ಟ್ರದ ಮುಂಬೈನ ವಾಖೆಂಡೆ ಮೈದಾನ ಐಪಿಎಲ್ 2021 ರ ಆವೃತ್ತಿಯ 10 ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಏಪ್ರಿಲ್ 10 ರಂದು ಚೈನೈ ಸೂಪರಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ.

Comments are closed.