ಆದಷ್ಟು ಬೇಗ ಭಾರತ ಬಿಟ್ಟು ಬನ್ನಿ….! ತನ್ನ ನಾಗರೀಕರಿಗೆ ಅಮೇರಿಕಾ ಕರೆ…!!

ನವದೆಹಲಿ:ಭಾರತದಲ್ಲಿ ಕೊರೋನಾ ಎರಡನೇ ಅಲೆ ಆತಂಕಕಾರಿ ಹಂತ ತಲುಪಿದ್ದು, ವಿಶ್ವದ ಬಹುತೇಕ ರಾಷ್ಟ್ರಗಳು ಭಾರತದೊಂದಿಗೆ ವಿಮಾನಯಾನ ಸಂಪರ್ಕ ಕಡಿದುಕೊಂಡಿದೆ. ಈ ಮಧ್ಯೆ ಭಾರತದ ಕೊರೋನಾ ಸ್ಥಿತಿಗತಿಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಮೇರಿಕಾ ಆದಷ್ಟು ಬೇಗ ಭಾರತ ಬಿಟ್ಟು ಬರುವುದು ಒಳ್ಳೆಯದು ಎನ್ನುವ ಮೂಲಕ ತನ್ನ ನಾಗರೀಕರಿಗೆ ಕೊನೆಯ ಎಚ್ಚರಿಕೆ ರವಾನಿಸಿದೆ.

ಹೊಟ್ಟೆ ನೋವು, ಹೊಟ್ಟೆ ಕೆಡುವುದು ಕೊರೊನಾ ಲಕ್ಷಣ : ಡಾ.ರವಿ

ಕೊರೋನಾ ಸೋಂಕು ಭಾರತದಲ್ಲಿ ತೀವ್ರವಾಗಿ ಹರಡುತ್ತಿದೆ.  ಜೊತೆಗೆ ತನ್ನ ದೇಶದ ಸೋಂಕಿತರಿಗೆ ಸೌಲಭ್ಯಗಳನ್ನು ನೀಡುವಲ್ಲಿ ಭಾರತ ಸೋಲುತ್ತಿದೆ. ವೈದ್ಯಕೀಯ ಸೌಲಭ್ಯಗಳು,ಮೆಡಿಸಿನ್ ಹಾಗೂ ಚುಚ್ಚುಮದ್ದಿನ ಕೊರತೆ ಎದುರಾಗಿದೆ. ಹೀಗಾಗಿ ಭಾರತದಲ್ಲಿರುವ ಅಮೇರಿಕಾ ನಾಗರೀಕರು ಆದಷ್ಟು ಬೇಗ ತಾಯ್ನಾಡಿಗೆ ಮರಳುವುದು ಸೂಕ್ತ ಎಂದು ಅಮೇರಿಕಾ ಹೇಳಿದೆ.

ಈ ಬಗ್ಗೆ ಅಮೇರಿಕಾದ ಆರೋಗ್ಯ ಇಲಾಖೆ, ಭಾರತ ಬಿಟ್ಟು ಬರಲು ಬಯಸುವ ಅಮೇರಿಕಾದ ನಾಗರೀಕರು ಈಗಿರುವ ವಾಣಿಜ್ಯ ವಿಮಾನಯಾನ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಸದ್ಯ ಭಾರತದಿಂದ ಅಮೇರಿಕಾಕ್ಕೆ ನೇರ ವಿಮಾನವಿದ್ದು, ಈ ಅವಕಾಶ ಬಳಸಿಕೊಂಡು ತಾಯ್ನಾಡಿಗೆ ಮರಳಿ ಎಂದು ಮನವಿ ಮಾಡಿದೆ.

https://kannada.newsnext.live/breaking/sandalwood-malashree-shruthi-letter-ramu-death-corona-covid-19-emo/ಭಾರತದಲ್ಲಿ ಸೋಂಕಿನ ಹರಡುವಿಕೆ ವೇಗವಾಗಿದೆ. ಇದಕ್ಕೆ ಪೂರಕವಾಗಿ ಆರೋಗ್ಯ ಸೌಲಭ್ಯಗಳಿಲ್ಲ. ಆಮ್ಲಜನಕ ಕೊರತೆ, ಇಂಜಕ್ಷನ್ ಕೊರತೆ, ಆಸ್ಪತ್ರೆಯಲ್ಲಿ ಬೆಡ್ ಕೊರತೆ ಎದುರಾಗಿದೆ. ಭಾರತದ  ಈ ಸ್ಥಿತಿ ಆತಂಕ ಮೂಡಿಸುತ್ತಿದೆ.

https://kannada.newsnext.live/dont-miss/a-surprise-for-doctors-who-do-not-have-lemon-juice-in-their-nose/ಹೀಗಾಗಿ ನಾಗರೀಕರು ವಾಪಸ್ಸಾಗುವುದು ಸೂಕ್ತ ಎಂದು ಅಮೇರಿಕಾ ರಾಯಭಾರ ಸಂಸ್ಥೆಯೂ ಅಭಿಪ್ರಾಯಿಸಿದೆ.

ಈಗಾಗಲೇ ಅಮೇರಿಕಾ, ಜರ್ಮನಿ,ಇಟಲಿ,ಇಂಗ್ಲೆಂಡ್,ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ವಿಮಾನಕ್ಕೆ ನಿಷೇಧ ಹೇರಿವೆ.

Comments are closed.