ಹೊಟ್ಟೆ ನೋವು, ಹೊಟ್ಟೆ ಕೆಡುವುದು ಕೊರೊನಾ ಲಕ್ಷಣ : ಡಾ.ರವಿ

ಬೆಂಗಳೂರು : ಕೊರೊನಾ ಸೋಂಕು ವೈದ್ಯಲೋಕಕ್ಕೆ ತಲೆನೋವು ತರಿಸಿದೆ. ದಿನಕ್ಕೊಂದು ಲಕ್ಷಣಗಳ ಮೂಲಕ ಸೋಂಕು ಕಾಣಿಸಿ ಕೊಳ್ಳುತ್ತಿದೆ. ಇದೀಗ ಹೊಟ್ಟೆ ನೊವು, ಹೊಟ್ಟೆ ಕೆಡುವುದು,‌ ಬೇಧಿ ಕೂಡ ಕೊರೊನಾ ಲಕ್ಷಣ ಎಂದಿದ್ದಾರೆ ಕೋವಿಡ್ ತಾಂತ್ರಿಕ ಸಮಿತಿಯ ಸದಸ್ಯ ಡಾ.ರವಿ.

ಕೊರೊನಾ ಆರಂಭದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಜ್ವರ, ನೆಗಡಿ, ತಲೆನೋವು ಶೀತ ಸಾಮಾನ್ಯ ಲಕ್ಷಣಗಳಾಗಿತ್ತು. ನಂತರದಲ್ಲಿ ಬಾಯಿ ರುಚಿ‌ ಕೆಡುವ ಲಕ್ಷಣ ಗೋಚರಿಸಿತ್ತು. ಅಷ್ಟೇ ಯಾಕೆ ಹಲವು ಸೋಂಕಿತ ರು ಯಾವುದೇ ಲಕ್ಷಣ ಕಂಡು ಬರದಿದ್ದರೂ ಕೂಡ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇದೀಗ ಕೊರೊನಾ ಹೆಮ್ಮಾರಿ ರೂಪಾಂತರ ಗೊಂಡಿದೆ.

ಹೊಟ್ಟೆ ನೋವು, ಹೊಟ್ಟೆ ಕೆಡವುದು, ಬೇಧಿ ಕಾಣಿಸಿ ಕೊಳ್ಳುವುದು ಕೂಡ ಕೊರೊನಾ ಲಕ್ಷಣ ಎಂದು ವೈದ್ಯರು ತಿಳಿಸಿರೋದು ಆತಂಕ ವನ್ನು ಮೂಡಿಸಿದೆ. ಏನೇ ಆಗಲಿ ಕೊರೊನಾದ ಯಾವುದೇ ಲಕ್ಷಣ ಗಳು ಕಾಣಿಸಿಕೊಂಡ್ರೆ ನಿರ್ಲಕ್ಷ್ಯವಹಿಸದೇ ಟೆಸ್ಟ್ ಮಾಡಿಸಿಕೊಳ್ಳುವುದು ಒಳಿತು.

Comments are closed.