ಮೋದಿಯಿಂದಾಗಿ ಜನರು ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿದ್ದಾರೆ….! ಪ್ರಧಾನಿ ವಿರುದ್ಧ ನಟಿ ರಮ್ಯ ಆರೋಪ…!!

ಮೊನ್ನೆ ಮೊನ್ನೆಯಷ್ಟೇ ತಮ್ಮ ಸಕ್ರಿಯ ರಾಜಕಾರಣ ಇನ್ನು ಮುಗಿದ ಅಧ್ಯಾಯ ಎಂದಿದ್ದ ಸ್ಯಾಂಡಲ್ ವುಡ್ ನಟಿ ಹಾಗೂ ಮಾಜಿ ಸಂಸದೆ ರಮ್ಯ ಸೋಷಿಯಲ್ ಮೀಡಿಯಾದಲ್ಲಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ರಾಜಕಾರಣದಿಂದ ದೂರ ಸರಿಯುವುದಾಗಿ ಪ್ರಕಟಿಸಿದ ಬೆನ್ನಲ್ಲೇ ರಮ್ಯ ಥೇಟ್ ಕಾಂಗ್ರೆಸ್ ವಕ್ತಾರಂತೆ ಮೋದಿ ಸರ್ಕಾರದ ವೈಫಲ್ಯಗಳ ಪಟ್ಟಿ ಹಿಡಿದು ಹಾಜರಾಗಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ಸಕ್ರಿಯವಾಗಿರುವ ರಮ್ಯ ಕೊರೋನಾ ಎರಡನೇ ಅಲೆಯಲ್ಲಿ ಜನರ ಸ್ಥಿತಿಗೆ ಕೊರೋನಾ ಸೋಂಕು ಕಾರಣವಲ್ಲ. ಮೋದಿ ಸರ್ಕಾರದ ಅಧಿಕಾರದ ದಾಹ ಹಾಗೂ ಜನರ ಬಗ್ಗೆ ಅನುಕಂಪವಿಲ್ಲದಿರುವುದೇ ಮೂಲ ಕಾರಣ ಎಂದು ಆರೋಪಿಸಿದ್ದಾರೆ.

https://kannada.newsnext.live/breaking/sandalwood-malashree-shruthi-letter-ramu-death-corona-covid-19-emo/ಕೋವಿಡ್ ನಿಂದ ಉಂಟಾದ ಸಾವುಗಳನ್ನು ತಡೆಯಬಹುದಿತ್ತು. ಜನರು ಸಾಯಬೇಕೆಂದಿರಲಿಲ್ಲ. ಆದರೆ ಮೋದಿಯವರ ಅಜಾಗರೂಕತೆ ಹಾಗೂ ದುರಂಹಕಾರದಿಂದ ನೂರಾರು ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಈ ಘಟನೆಗಳು ನನಗೆ ನೋವು ತರಿಸುತ್ತಿದೆ ಮತ್ತು ಕೋಪ ಬರುತ್ತಿದೆ ಎಂದಿದ್ದಾರೆ.

ಕಳೆದ ಬಾರಿ ಸರ್ಕಾರ ಜಾರಿಗೊಳಿಸಿದ ಲಾಕ್ ಡೌನ್, ದೇಶದ ಆರ್ಥಿಕತೆಯನ್ನು ದುರ್ಬಲಗೊಳಿಸಿದ್ದಲ್ಲದೇ, ಲಕ್ಷಾಂತರ ಜನರನ್ನು ಹಸಿವಿನ ಕೂಪಕ್ಕೆ ದೂಡಿತ್ತು. ಈಗ ಮತ್ತೆ ಲಾಕ್ ಡೌನ್ ಜಾರಿಯಾಗಿದೆ. ಇದರಿಂದ ಸೋಂಕು ನಿಯಂತ್ರಣಕ್ಕೆ ಬರೋದಿಲ್ಲ. ಅತ್ತ ಜನರ ಆರ್ಥಿಕತೆಯೂ ಚೇತರಿಸಿಕೊಳ್ಳುವುದಿಲ್ಲ.

https://instagram.com/divyaspandana?igshid=ygrt3ltmsixt

ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಆದರೆ ಬಿಜೆಪಿಯವರು ಮಾತ್ರ ಬುದ್ಧಿಹೀನರಂತೆ ವರ್ತಿಸುತ್ತಿದ್ದಾರೆ ಎಂದು ರಮ್ಯ ಕಿಡಿಕಾರಿದ್ದಾರೆ. ಸದ್ಯ ರಮ್ಯ ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ.

https://kannada.newsnext.live/breaking/bangalore-corona-covid-19-police-sonusood-oxygen-concentrator/ಸದಾ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಕಾಣಸಿಗುತ್ತಿರುವ ರಮ್ಯ ಮೋದಿ ವಿರುದ್ಧ ಟೀಕಿಸಲು ಮಾತ್ರ ಸಕ್ರಿಯರಾಗಿದ್ದು, ಬೇರಾವುದೇ ಸಮಸ್ಯೆಗಳಿಗೆ ಸ್ಪಂದಿಸಿದ ಉದಾಹರಣೆಯಿಲ್ಲ.

https://kannada.newsnext.live/breaking/corona-covid-19-us-citizens-advises-return-india-medical-emergency/ರಮ್ಯ ಸೋಷಿಯಲ್ ಮೀಡಿಯಾದಲ್ಲಿ ಮೋದಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಿದ್ದಂತೆ ರಮ್ಯ ಪರ ಮತ್ತು ವಿರೋಧ ಕಮೆಂಟ್ ಗಳು ಆರಂಭವಾಗಿದ್ದು, ಕೆಲವರು ರಮ್ಯ ಮೊದಲು ಕರ್ನಾಟಕಕ್ಕೆ, ಮಂಡ್ಯಕ್ಕೆ ಬಂದು ನಿನ್ನ ತವರಿನ ಜನರ ಸಮಸ್ಯೆ ಕೇಳಮ್ಮ. ಆಮೇಲೆ ಮೋದಿ ಬಗ್ಗೆ ಮಾತನಾಡಬಹುದು ಅಂತ ಕಿವಿಹಿಂಡಿದ್ದಾರೆ.

Comments are closed.