18 ರಿಂದ 45 ವರ್ಷದವರಿಗೆ ಮೇ 1 ರಿಂದ ದೊರೆಯಲಿದೆ ಲಸಿಕೆ…! ವಾಕ್ಸಿನ್ ಗೂ ಮುನ್ನವೇ ಎಲ್ಲೆಡೆ ರಕ್ತದಾನಕ್ಕೆ ಅಭಿಯಾನ…!!

ಕೊರೋನಾ ಎರಡನೇ ಅಲೆಗೆ ಭಾರತ ಅಕ್ಷರಷಃ ತತ್ತರಿಸಿ ಹೋಗಿರುವ ಬೆನ್ನಲ್ಲೇ, ವರ್ಷಾಂತ್ಯದ ವೇಳೆ ಮೂರನೆ ಅಲೆ ಇದೆ ಎಂಬ ತಜ್ಞರ ಎಚ್ಚರಿಕೆ ಆತಂಕ ಮೂಡಿಸಿದೆ. ಮೂರನೇ ಅಲೆಯನ್ನು ಎದುರಿಸಲು ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಸೂಚಿಸಲಾಗಿದೆ. ಎಲ್ಲರೂ ಲಸಿಕೆ ಪಡೆದರೇ ರಕ್ತದ ಕೊರತೆ ಎದುರಾಗೋದರಿಂದ ಲಸಿಕೆ ಪಡೆಯುವ ಮುನ್ನವೇ ರಕ್ತದಾನ ಮಾಡುವಂತೆ ಆಸ್ಪತ್ರೆಗಳು ಅಭಿಯಾನ ಆರಂಭಿಸಿದೆ.

ಕ್ರಿಕೆಟ್ ಪ್ರಿಯರಿಗೆ ಬಿಗ್ ಶಾಕ್ : ಕೊರೊನಾ ಆರ್ಭಟ, ಐಪಿಎಲ್ ರದ್ದು ಸಾಧ್ಯತೆ…!!!

ದೇಶದಲ್ಲಿ ಔಷಧಿಯಷ್ಟೇ ಅಗತ್ಯವಾಗಿದ್ದು, ರಕ್ತ. ಅಪಘಾತ, ಹೆರಿಗೆ ಸೇರಿದಂತೆ ಹಲವು ತುರ್ತು ಸಂದರ್ಭದಲ್ಲಿ ರೋಗಿಗಳ ಚಿಕಿತ್ಸೆಗೆ  ರಕ್ತ ಅತಿ ಅಗತ್ಯ.  ಈ ರಕ್ತದ  ಪ್ರಮುಖ ಮೂಲ ಅಂದ್ರೇ ಆರೋಗ್ಯವಂತ ಯುವಜನತೆ ಮಾಡೋ ರಕ್ತದಾನ. ಆದರೆ ಈಗ ಕೊರೋನಾ ಹಿನ್ನೆಲೆಯಲ್ಲಿ ಮೇ 1 ರಿಂದ ದೇಶದ 18 ರಿಂದ 45 ವರ್ಷದ  ಎಲ್ಲರೂ ಲಸಿಕೆ ಪಡೆಯುವಂತೆ ಸೂಚಿಸಲಾಗಿದೆ.

ಆಸ್ಪತ್ರೆಗಳ ಕಾರ್ಯವೈಖರಿಗೆ ನಟ ಜಗ್ಗೇಶ್ ಅಸಮಧಾನ…! ವ್ಯವಸ್ಥೆ ಪಾರದರ್ಶಕಗೊಳಿಸುವಂತೆ ಸಿಎಂಗೆ ಮನವಿ…!!

ಒಂದು ಲಸಿಕೆ ಪಡೆದ ನಾಲ್ಕು ವಾರಗಳ ಬಳಿಕ ಇನ್ನೊಂದು ಲಸಿಕೆ ಪಡೆಯಲು ಆರೋಗ್ಯ ಇಲಾಖೆ ಸೂಚಿಸಿದೆ. ಆದರೆ ಮೊದಲ ಲಸಿಕೆ ಪಡೆದ ನಾಲ್ಕು ವಾರ ಹಾಗೂ ಎರಡನೇ ಲಸಿಕೆ ಪಡೆದ ನಾಲ್ಕು ವಾರ ರಕ್ತದಾನ ಮಾಡುವಂತಿಲ್ಲ. ಸಾಮಾನ್ಯವಾಗಿ ರಕ್ತದಾನ ಮಾಡುವವರು 18 ರಿಂದ 45ರ ವಯೋಮಾನದವರು.

ಕೊಡಗಿನ ಕುವರಿಯ ಕೈ ಹಿಡಿದ ಮಾಯಾನಗರಿ ಮುಂಬೈ…! ಎರಡು ಸಿನಿಮಾ ಮುಗಿಯುವ ಮುನ್ನವೇ ಮೂರನೇ ಸಿನಿಮಾಗೆ ಸೈಎಂದ ರಶ್ಮಿಕಾ…!!

ಹೀಗಾಗಿ ಇವರೆಲ್ಲ ಲಸಿಕೆ ಪಡೆದ ಮೇಲೆ ರಕ್ತದಾನ ಮಾಡೋದು ಕಷ್ಟ. ಹೀಗಾಗಿ ರಾಜ್ಯದ ಹಾಗೂ ದೇಶದ ಆಸ್ಪತ್ರೆಗಳಲ್ಲಿ  ರಕ್ತಕ್ಕೆ ಕೊರತೆ ಎದುರಾಗುವ ಲಕ್ಷಣ ದಟ್ಟವಾಗಿದೆ. ಹೀಗಾಗಿ ಆಸ್ಪತ್ರೆಗಳು ಸೋಷಿಯಲ್ ಮೀಡಿಯಾದಲ್ಲಿ ರಕ್ತದಾನ ಮಾಡುವಂತೆ ಅಭಿಯಾನ ಆರಂಭಿಸಿವೆ.

ಸೆಲೆಬ್ರೆಟಿಗಳ ಮಾಲ್ಡೀವ್ಸ್ ಕನಸಿಗೆ ಬೀಗ….! ಭಾರತೀಯ ಪ್ರವಾಸಿಗರಿಗೆ ನಿಷೇಧ ಹೇರಿದ ಪ್ರವಾಸಿದ್ವೀಪ…!!

ಸುರಕ್ಷಿತವಾಗಿರಿ, ಕೊರೋನಾವನ್ನು ಹಿಮ್ಮೆಟ್ಟಿಸಲು ಲಸಿಕೆ ಪಡೆಯಿರಿ. ಆದರೆ ಲಸಿಕೆ ಪಡೆಯುವ ಮುನ್ನ ಇತರರಿಗಾಗಿ ರಕ್ತದಾನ ಮಾಡಿ ಎಂದು ಮನವಿ ಮಾಡಲಾಗಿದೆ.

ತಾಯ್ನಾಡಿನ ಸಂಕಷ್ಟಕ್ಕೆ ಮಿಡಿದ ಬಾಲಿವುಡ್ ನಟಿ…! ಭಾರತಕ್ಕೆ ಸಹಾಯ ನೀಡುವಂತೆ ಅಮೇರಿಕಾಕ್ಕೆ ಮನವಿ ಮಾಡಿದ ಪ್ರಿಯಾಂಕಾ…!!

ಬೆಂಗಳೂರು , ಚೈನೈ ಸೇರಿದಂತೆ ಎಲ್ಲ ಮಹಾನಗರದಲ್ಲೂ ಬ್ಲಡ್ ಡೊನೇಶನ್ ಗಾಗಿ ಮನವಿ ಮಾಡುತ್ತಿರುವ ವಿಡಿಯೋ,ಪೋಸ್ಟರ್ ಗಳನ್ನು ಹಾಕಲಾಗಿದೆ.

Comments are closed.