ಮದ್ಯಪ್ರಿಯರಿಗೆ ಬಿಗ್ ಶಾಕ್ ಕೊಟ್ಟ ಕೊರೊನಾ!

ಬೆಂಗಳೂರು : ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಬೆನ್ನಲ್ಲೇ ಮದ್ಯ ಸೇವನೆಯಿಂದ ಕೊರೊನಾ ವೈರಸ್ ಸಾಯುತ್ತೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದ್ರೀಗ ಮದ್ಯಪ್ರಿಯರಿಗೆ ಕೊರೊನಾ ಹೆಮ್ಮಾರಿ ಬಿಗ್ ಶಾಕ್ ಕೊಟ್ಟಿದೆ.

ದೇಶದಾದ್ಯಂತ ಲಾಕ್ ಡೌನ್ ತೆರವಾಗುತ್ತಿದ್ದಂತೆಯೇ ದಾಖಲೆಯ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿತ್ತು. ಕೊರೊನಾ ಸೋಂಕು ಬರುವುದಿಲ್ಲಾ ಅಂತ ಹಬ್ಬಿದ ಗಾಳಿ ಸುದ್ದಿಯ ಬೆನ್ನಲ್ಲೇ ಹಲವು ಮದ್ಯ ಸೇವೆನೆ ಮಾಡಿದ್ರೆ ಕೊರೊನಾ ಸೋಂಕು ಬರೋದೆ ಇಲ್ಲಾ ಅಂತಾನೂ ನಂಬಿದ್ದರು. ಆದ್ರೀಗ ಮದ್ಯ ಸೇವೆನೆ ಮಾಡಿದ್ರೆ ಕೊರೊನಾ ವೈರಸ್ ನಿಂದ ಅಪಾಯ ಎದುರಾಗಲಿದೆ ಅಂತಾ ತಜ್ಞರು ವರದಿಯನ್ನು ನೀಡಿದ್ದಾರೆ.

ದೇಶದದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿರುವವರ ಪೈಕಿ ಬಹುತೇಕ ಮಂದಿ ಲಿವರ್ ಸಮಸ್ಯೆ ಕಾಣಿಸಿಕೊಂಡಿತ್ತು. ಅದ್ರಲ್ಲೂ ಮದ್ಯಪಾನ ಸೇವನೆಯಿಂದ ಲಿವರ್ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹೀಗಾಗಿ ಮದ್ಯ ಪ್ರಿಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ್ರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಕೊರೊನಾ ವೈರಸ್ ಸೋಂಕಿನ ಕಾಲದಲ್ಲಿ ಮದ್ಯಪಾನದಿಂದ ಸಾಧ್ಯವಾದಷ್ಟು ದೂರವಿರಿ ಅಂತಾನೂ ಸಲಹೆ ನೀಡಿದ್ದಾರೆ. ಮದ್ಯ ಸೇವನೆ ಮಾಡುವವರಲ್ಲಿ ರೋಗ ನಿರೋಧಕ ಶಕ್ತಿಯೂ ಕಡಿಮೆಯಿರೋದ್ರಿಂದಾಗಿ ಆದಷ್ಟು ಎಚ್ಚರಿಕೆಯಿಂದ ಇರುವಂತೆಯೂ ತಜ್ಞರು ಹೇಳುತ್ತಿದ್ದಾರೆ.

ಕೊರೊನಾ ಸೋಂಕಿನಿಂದ ದೂರವಿರಬಹುದು ಅನ್ನೋ ಕಾರಣಕ್ಕೆ ಮದ್ಯಪಾನ ಮಾಡುತ್ತಿದ್ದ ಮಂದಿಗೆ ಇದೀಗ ಕೊರೊನಾ ಶಾಕ್ ಕೊಟ್ಟಿದೆ. ತಜ್ಞರ ವರದಿಯಿಂದ ಎಚ್ಚೆತ್ತುಕೊಳ್ಳದೇ ಇದ್ರೆ ಅಪಾಯ ಕಟ್ಟಿಟ್ಟ ಬುತ್ತಿ.

Comments are closed.