ದೇಶದಾದ್ಯಂತ ಮತ್ತೆ ಜಾರಿಯಾಗುತ್ತಾ ಲಾಕ್ ಡೌನ್ ?

ನವದೆಹಲಿ : ಒಂದೆಡೆ ಚಳಿಯ ಅಬ್ಬರ, ಇನ್ನೊಂದೆಡೆ ಸಾಲು ಸಾಲು ಹಬ್ಬಗಳಿಂದಾಗಿ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಕೊರೊನಾ ಎರಡನೇ ಅಲೆ ಶುರುವಾಗಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಡುವಲ್ಲೇ ದೇಶದಾದ್ಯಂತ ಮತ್ತೆ ಲಾಕ್ ಡೌನ್ ಜಾರಿಯಾಗುತ್ತೆ ಅನ್ನೋ ಕುರಿತು ಚರ್ಚೆಗಳು ಶುರುವಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಹಾವಳಿ ಒಂದಿಷ್ಟು ದಿನಗಳ ಕಾಲ ಕೊಂಚ ಮಟ್ಟಿಗೆ ತಣ್ಣಗಾಗಿತ್ತು. ಆದ್ರೀಗ ಮತ್ತೆ ಕೊರೊನಾ ಎರಡನೇ ಅಲೆ ಶುರುವಾಗಿದೆ. ಈಗಾಗಲೇ ಗುಜರಾತ್, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಹಲವು ನಿರ್ಬಂಧ ಗಳನ್ನು ಹೇರಲಾಗುತ್ತಿದೆ. ಕೊರೊನಾ ನಡುವಲ್ಲೇ ಶಾಲಾರಂಭ ಮಾಡಿದ ರಾಜ್ಯಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದ್ದರೆ, ದೆಹಲಿಯಲ್ಲಿ ಲಸಿಕೆ ಲಭ್ಯವಾಗುವ ವರೆಗೂ ಶಾಲೆಗಳನ್ನು ಆರಂಭಿಸದಿರಲು ರಾಜ್ಯ ಸರಕಾರ ನಿರ್ಧರಿಸಿದೆ. ದಕ್ಷಿಣ ಭಾರತದಲ್ಲಿ ಶಾಲಾರಂಭ ಮಾಡಿದ ಬೆನ್ನಲ್ಲೇ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗಿದೆ.

ಈ ನಡುವಲ್ಲೇ ದೇಶದಲ್ಲಿ ಕೊರೊನಾ ಮಹಾಮಾರಿಯ ಅಬ್ಬರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಜಾರಿ ಮಾಡಬಹುದಾದ ನಿಟ್ಟಿನಲ್ಲಿ ಚರ್ಚೆಗಳು ಆರಂಭವಾಗಿರುವ ಆಗಲೇ, ಲಾಕ್ ಡೌನ್ ಮಾಡಿದರೆ ಏನೆಲ್ಲ ಅವಾಂತರಗಳು ಆಗಬಹುದು ಎಂಬ ಬಗ್ಗೆ ಜನಸಾಮಾನ್ಯರನ್ನು ಕಾಡಲಾರಂಭಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಂತೂ ಈಗಾಗಲೇ ಮೂರನೇ ಹಂತದ ಅಲೆ ಅಪ್ಪಳಿಸಿದೆ ಎಂಬ ಆತಂಕ ನಿರ್ಮಾಣವಾಗಿದೆ.

ಈ ರೀತಿಯ ಪರಿಸ್ಥಿತಿಯಿಂದ ದೇಶದ ಹಲವು ರಾಜ್ಯಗಳಲ್ಲಿ ವೈದ್ಯಕೀಯ ಮೂಲ ಸೌಕರ್ಯಗಳ ಕೊರತೆ ಮತ್ತು ವೈದ್ಯಕೀಯ ಸಮುದಾಯದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಜನರು ಗುಂಪು ಗುಂಪಾಗಿ ಸೇರಿ ಸೋಂಕು ಪ್ರಕರಣಗಳು ಹೆಚ್ಚಾಗಲಿಕ್ಕೆ ಕಾರಣವಾಗುತ್ತಿದೆ ಎಂಬ ಆತಂಕ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಕೆಲವು ರಾಜ್ಯಗಳು ಮತ್ತೆ ಕೆಲವು ನಿರ್ಬಂಧಗಳನ್ನು ಜಾರಿ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದೆ. ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಈಗಾಗಲೇ ನಿರ್ಬಂಧಗಳನ್ನು ಹಾಗೂ ಭಾಗಶಃ ಖರ್ಚು ಜಾರಿಯಲ್ಲಿದೆ.

ಸಾಲು ಸಾಲು ಹಬ್ಬಗಳಿಂದಾಗಿ ಜನರು ಸಾಮಾಜಿಕ ಅಂತರವನ್ನು ಮರೆತಿರುವುದು ಇದೀಗ ಕೊರೊನಾ ಹೆಚ್ಚಳಕ್ಕೆ ಕಾರಣವೆನ್ನಲಾಗುತ್ತಿದೆ. ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಸಂಪೂರ್ಣ ಲಾಕ್ ಡೌನ್ ಮಾಡಬೇಕು ಅಥವಾ ಭಾಗಶಃ ಜಾರಿ ಮಾಡಬೇಕು ಅಥವಾ ಮಾರುಕಟ್ಟೆಗಳಲ್ಲಿ ಜನರು ಗುಂಪಾಗಿ ಸೇರುವುದನ್ನು ತಡೆಯಲು ಮುಚ್ಚಬೇಕು ಎಂಬ ವಿಚಾರಗಳ ಕುರಿತು ಚರ್ಚೆಗಳು ನಡೆದಿವೆ.
ಆದರೆ ಲಾಕ್‌ಡೌನ್ ನಂತರದ ದಿನಗಳಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತಿವೆ ಯಾದರೂ, ಇನ್ನು ಕೆಲವು ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಚಟುವಟಿಕೆಗಳು ಪ್ರಾರಂಭವಾಗಿಲ್ಲ.

ದಿನಸಿ ವಸ್ತುಗಳು ಔಷಧಿ. ಕೆಲಸ ಕಾರ್ಯಗಳನ್ನು ಮಾಡುವ ಪ್ರದೇಶಗಳಲ್ಲಿ ಜನರು ನಿರ್ಲಕ್ಷ್ಯ ತೋರುತ್ತಿರುವುದು. ವೈದ್ಯಕೀಯ ಸಮುದಾಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧಗಳನ್ನು ಹೇರಲು ಸರ್ಕಾರಗಳು ಚಿಂತನೆ ನಡೆಸಿವೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಿದ್ದಾರೆ. ಒಂದೊಮ್ಮೆ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಎರಡನೇ ಅಲೆ ಸೃಷ್ಟಿಯಾದ್ರೆ ಲಾಕ್ ಡೌನ್ ಹೇರಿಕೆಯಾಗುವುದು ಖಚಿತ ಎನ್ನಲಾಗುತ್ತಿದೆ.

Comments are closed.