ಕೊರೊನಾ ಸೃಷ್ಟಿಕರ್ತ ಚೀನಾವನ್ನೇ ಕಾಡುತ್ತಿದೆ ಹೆಮ್ಮಾರಿ : ಗಂಟಲು ದ್ರವದ ಬದಲು ಗುದದ್ವಾರದ ಮಾದರಿ ಸಂಗ್ರಹ..!

ಚೀನಾ : ಕೊರೊನಾ ವೈರಸ್ ಸೃಷ್ಟಿಸಿ ವಿಶ್ವಕ್ಕೆ ಹರಿಬಿಟ್ಟ ಚೀನಾ ಇದೀಗ ತಾನು ತೋಡಿದ ಖೆಡ್ಡಾಕ್ಕೆ ತಾನೇ ಬಿದ್ದಿದೆ. ಕೆಂಪುರಾಷ್ಟ್ರ ಚೀನಾದಲ್ಲಿ ಕೊರೊನಾ ಹೆಮ್ಮಾರಿಯ ಆರ್ಭಟ ಹೆಚ್ಚಿದ್ದು, ನಿಯಂತ್ರಣಕ್ಕಾಗಿ ಗಂಟಲು ದ್ರವ ಸಂಗ್ರಹ ಕೈ ಬಿಟ್ಟು ಗುದದ್ವಾರ ಸಂಗ್ರಹಕ್ಕೆ ಮುಂದಾಗಿದೆ.

ಕೊರೊನಾ… ಈ ಹೆಸರು ಕೇಳಿದ್ರೆ ಸಾಕು ವಿಶ್ವದ ಜನರೇ ಬೆಚ್ಚಿಬೀಳುತ್ತಿದ್ದಾರೆ. ಚೀನಾದ ಜೈವಿಕ ಅಸ್ತ್ರವೆನಿಸಿರೋ ಕೋವಿಡ್ -19 ವೈರಸ್ ಸೋಂಕಿನಿಂದ ಹಲವು ರಾಷ್ಟ್ರಗಳು ಇಂದಿಗೂ ಚೇತರಿಸಿಕೊಳ್ಳುತ್ತಿಲ್ಲ.

ವಿಶ್ವದ ಹಿರಿಯಣ್ಣ ಅಮೇರಿಕಾವೇ ಕೊರೊನಾ ಹೆಮ್ಮಾರಿಯ ಮುಂದೆ ಮಂಡಿಯೂರಿದೆ. ವಿಶ್ವ ಆರೋಗ್ಯ ಸಂಸ್ಥೆಯನ್ನೂ ಯಾಮಾರಿಸಿರುವ ಚೀನಾ ಇದೀಗ ತಾನೇ ಸೃಷ್ಟಿಸಿದ ಕೊರೊನಾ ನಿಯಂತ್ರಣಕ್ಕೆ ಪರದಾಡುತ್ತಿದೆ.

ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಕೆಲವೇ ತಿಂಗಳಲ್ಲಿ ಚೀನಾ ಹೆಮ್ಮಾರಿ ಸೋಂಕಿನಿಂದ ಚೇತರಿಸಿಕೊಂಡಿತ್ತು. ಆದ್ರೀಗ ಮತ್ತೆ ಚೀನಾದಲ್ಲಿ ಕೊರೊನಾ ತನ್ನ ಆರ್ಭಟವನ್ನು ಮುಂದುರಿಸಿದೆ. ಆರಂಭದಲ್ಲಿ ಗಂಟಲು ದ್ರವದ ಮಾದರಿ ಸಂಗ್ರಹದ ಮೂಲಕ ಕೊರೊನಾ ಪತ್ತೆ ಮಾಡುತ್ತಿದ್ದ ಚೀನಾ ಇದೀಗ ಗುದದ್ವಾರದ ಮಾದರಿಯ ಮೂಲಕ ಸೋಂಕು ಪತ್ತೆ ಮಾಡುತ್ತಿದೆ.

ಚೀನಾದಲ್ಲಿ ಈಗಾಗಲೇ ಬೀಚಿಂಗ್, ಯುಹಾನ್ ಸೇರಿದಂತೆ ಹಲವು ಕಡೆಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಸಾಮೂಹಿಕ ಪರೀಕ್ಷೆಗೆ ಚೀನಾ ಸಿದ್ದತೆಯನ್ನೂ ಮಾಡಿಕೊಂಡಿದೆ. ಗಂಟಲು ಬದಲು ಗುದದ್ವಾರದ ಮಾದರಿ ಪರೀಕ್ಷೆ ನಡೆಸೋದ್ರಿಂದ ಹೆಚ್ಚಿನ ಫಲಿತಾಂಶ ಸಿಗುತ್ತೆ ಅನ್ನೋದನ್ನು ಚೀನಾದ ಮಾಧ್ಯಮಗಳು ವರದಿ ಮಾಡಿವೆ.

Comments are closed.