ನಿಮ್ಮ ಕುತೂಹಲಕ್ಕೆ ಶೀಘ್ರವೇ ಸಿಗಲಿದೆ ಉತ್ತರ…! ಯಶ್ ಅಭಿಮಾನಿಗಳಿಗೆ ಪ್ರಶಾಂತ್ ನೀಲ್ ಕೊಟ್ರು ಸಿಹಿಸುದ್ದಿ…!!

ಭಾರತ ಚಿತ್ರರಂಗದಲ್ಲಿ ಟೀಸರ್ ಮುಲಕವೇ ಹೊಸ ದಾಖಲೆ ಬರೆದ ಕೆಜಿಎಫ್-೨ ಚಿತ್ರ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದ್ದು, ಸಂಜೆ 6.30 ಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡೋದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ.

ಕೆಜಿಎಫ್ ಸೇರಿದಂತೆ ತಮ್ಮ ಎಲ್ಲಾ ಚಟುವಟಿಕೆಗಳ ಮಾಹಿತಿಯನ್ನು ಸದಾ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡುವ ನೀಲ್, ಕೆಜಿಎಫ್-೨ ರಿಲೀಸ್ ಡೇಟ್ ಸಂಜೆ ಅನೌನ್ಸ್ ಮಾಡೋದಾಗಿ ಟ್ವೀಟ್ ಮಾಡಿದ್ದಾರೆ.

https://twitter.com/prashanth_neel/status/1355010279931711488?s=08

The promise will be fulfilled ಎಂದು ಬರೆದಿರುವ ನೀಲ್ ಸಂಜೆ ಕೆಜಿಎಫ್-೨ ಬಿಡುಗಡೆ ಯಾವಾಗ ಅನ್ನೋದನ್ನು ಹೇಳಲಿದ್ದೇವೆ ಎಂದಿದ್ದು ಸೋಷಿಯಲ್ ಮೀಡಿಯಾ ಹಾಗೂ ಸಿನಿಲೋಕದಲ್ಲಿ ಈ ಟ್ವೀಟ್ ಸಂಚಲನ ಮೂಡಿಸಿದೆ.

ಅಭಿಮಾನಿಗಳು,ಸಿನಿರಸಿಕರು ಚಿತ್ರದ ರಿಲೀಸ್ ಯಾವಾಗ ಆಗುತ್ತೆ ಅನ್ನೋದನ್ನು ತಿಳಿದುಕೊಳ್ಳೋಕೆ ಕಾತರ ರಾಗಿದ್ದರೇ, ಸಿನಿಲೋಕದ ಇತರ ನಿರ್ದೇಶಕ,ನಿರ್ಮಾಪಕರು ಕೆಜಿಎಫ್-೨ ರಿಲೀಸ್ ಸಮಯದಲ್ಲಿ ತಮ್ಮ ಸಿನಿಮಾಗಳ ರಿಲೀಸ್ ಇದ್ಯಾ? ಇದ್ದರೇ ಮುಂದೂಡಬೇಕಾ ಎಂಬ ಟೆನ್ಸನ್ ನಿಂದ ಕಾಯ್ತಿದ್ದಾರೆ.

ಈಗಾಗಲೇ ರಿಲೀಸ್ ಆದ ಟೀಸರ್ ವಿಶ್ವದಾಖಲೆ ನಿರ್ಮಿಸಿದ್ದು ಇದುವರೆಗೂ ಇದ್ದ ಎಲ್ಲ ಟೀಸರ್ ಹಾಗೂ ಟ್ರೈಲರ್ ದಾಖಲೆಗಳನ್ನು ಕೆಜಿಎಫ್-೨ ಟೀಸರ್ ಉಡೀಸ್ ಮಾಡಿದೆ.ಪ್ರಭಾಸ್ ರ ಬಾಹುಬಲಿ ಚಿತ್ರದ ದಾಖಲೆಯನ್ನು ಕೆಜಿಎಫ್-೨ ಟೀಸರ್ ರಿಲೀಸ್ ಆದ ಮೂರೇ ದಿನದಲ್ಲಿ ಸರಿಗಟ್ಟಿದ್ದು ಇದುವರೆಗೂ 125 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ವಿಶ್ವದಾಖಲೆ ನಿರ್ಮಿಸಿದೆ.

ಹಾಲಿವುಡ್,ಬಾಲಿವುಡ್ ನಟರೂ ಸಿನಿಮಾ ಮೆಚ್ಚಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಹೊಗಳುತ್ತಿದ್ದಾರೆ.ಅಷ್ಟೇ ಅಲ್ಲ ಕೆಜಿಎಫ್-೨ ಹಿಂದಿ ಹಾಗೂ ತೆಲುಗು ರೈಟ್ಸ್ ಗಳು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಈಗಾಗಲೇ ಚಿತ್ರದ ರಿಲೀಸ್ ಡೇಟ್ ಬಗ್ಗೆ ಬೆಟ್ಟಿಂಗ್ ಕೂಡ ನಡೆದಿದೆ ಎನ್ನಲಾಗಿದೆ.

ಮೂಲಗಳ ಮಾಹಿತಿ ಪ್ರಕಾರ ಚಿತ್ರತಂಡ ಸಿನಿಮಾವನ್ನು ಜುಲೈ 30 ರಂದು ರಿಲೀಸ್ ಮಾಡಲು ನಿರ್ಧರಿಸಿತ್ತು ಎನ್ನಲಾಗಿದೆ. ಆದರೆ ಈಗ ಕೇಂದ್ರ ಸರ್ಕಾರ ಥಿಯೇಟರ್ ಗಳಿಗೆ 100ಕ್ಕೆ 100 ರಷ್ಟು ಆಸನ ಪ್ರವೇಶಕ್ಕೆ ಅವಕಾಶ ನೀಡಿರೋದರಿಂದ ಕೆಜಿಎಫ್-೨ ರಿಲೀಸ್ ನಿಗದಿತ ಅವಧಿಗಿಂತ ಮೊದಲೇ ಆದರೂ ಅಚ್ಚರಿಯೇನಿಲ್ಲ

Comments are closed.