20 ವರ್ಷ ಜೀವಂತವಾಗಿರುತ್ತೆ ಕೊರೊನಾ : ಹಸಿ ಮಾಂಸ, ಮೀನು ತುಂಬಾನೇ ಡೇಂಜರ್ !

0

ನವದೆಹಲಿ : ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ಆರ್ಭಟಿಸುತ್ತಿದೆ. ಲಕ್ಷಾಂತರ ಮಂದಿಗೆ ಮಹಾಮಾರಿಗೆ ಬಲಿಯಾಗಿದ್ದಾರೆ. ಆದ್ರೆ ಕೊರೊನಾ ಸೋಂಕು ಇನ್ನೂ 20 ವರ್ಷಗಳ ಕಾಲ ಜೀವಂತವಾಗಿರುತ್ತೆ ಅನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ಅನ್ನೋ ಹೆಮ್ಮಾರಿ ಇಂದು ವಿಶ್ವವನ್ನೇ ನಡುಗಿಸುತ್ತಿದೆ. ಭಾರತದಲ್ಲಿಯೂ ಮರಣ ಮೃದಂಗವನ್ನೇ ಬಾರಿಸುವುದಕ್ಕೆ ಶುರುಮಾಡಿದೆ. ಈ ನಡುವಲ್ಲೇ ಕೊರೊನಾ ವೈರಸ್ ಸೋಂಕಿನ ಕುರಿತು ಭಾರತ ಸೇರಿದಂತೆ ವಿಶ್ವದಾದ್ಯಂತ ಸಂಶೋಧನೆಗಳು ನಡೆಯುತ್ತಿವೆ. ಇದೀಗ ಚೀನಾದ ಖ್ಯಾತ ಸಾಂಕ್ರಾಮಿಕ ತಜ್ಞರಾಗಿರುವ ಪ್ರೊ. ಲೀ ಲಂಜುವಾನ್​ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದ್ದಾರೆ. ನಿಗದಿತ ತಾಪಮಾನದಲ್ಲಿ 20 ವರ್ಷಗಳ ಕಾಲ ಕೊರೊನಾ ವೈರಸ್ ಬದುಕಿರುತ್ತದೆ ಎಂದಿದ್ದಾರೆ.

ಶೀತ ವಾತಾವರಣ ಅಥವಾ ಶೂನ್ಯಕ್ಕಿಂತ ಕಡಿಮೆ ಉಷ್ಣಾಂಶವಿರುವ ಪ್ರದೇಶಗಳಲ್ಲಿ ವೈರಸ್ ಸೋಂಕು ತಿಂಗಳುಗಟ್ಟಲೆ ಜೀವಂತವಾಗಿರುತ್ತದೆ. ಅದ್ರಲ್ಲೂ ಮೈನಸ್ ಡಿಗ್ರಿ ತಾಪಮಾನದಲ್ಲಿ ಬರೋಬ್ಬರಿ 20 ವರ್ಷಗಳವರೆಗೂ ಸೋಂಕು ಬದುಕಿರುತ್ತದೆ ಅಂತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಚೀನಾದಲ್ಲಿ ಸೀ ಪುಡ್ ಗಳಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಹಸಿ ಮಾಂಸ ಹಾಗೂ ಮೀನನ್ನು ಯಾವುದೇ ಕಾರಣಕ್ಕೂ ಮುಟ್ಟಲೇ ಬೇಡಿ. ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಸಾಲ್ಮನ್​ ಹಾಗೂ ಇತರ ಮಾಂಸವನ್ನು ಕಟ್ಟುನಿಟ್ಟಿನ ಪರೀಕ್ಷೆಗೆ ಒಳಪಡಿಸಿ ಎಂದು ತಜ್ಞರು ಹೇಳಿದ್ದಾರೆ.

ಮೀನು, ಮಾಂಸ ಮಾರುಕಟ್ಟೆಗಳಲ್ಲಿಯೇ ಅತೀ ಹೆಚ್ಚು ಪ್ರಮಾಣದಲ್ಲಿ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಕೆಲಸ ಮಾಡುವವರು ಹೆಚ್ಚಾಗಿ ಫೇಸ್ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸುವಂತೆ ಸೂಚನೆಯನ್ನು ನೀಡಲಾಗಿದೆ.

ಅಲ್ಲದೇ ಚೀನಾದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಹಸಿ ಮಾಂಸವನ್ನು ಸೇವನೆ ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ ಎನ್ನಲಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ನಡುವಲ್ಲೇ ಚೀನಾ ತಜ್ಞರ ವರದಿಗೆ ಇದೀಗ ವಿಶ್ವವೇ ಬೆಚ್ಚಿ ಬಿದ್ದಿದೆ.

Leave A Reply

Your email address will not be published.