ಕೊರೋನಾ ಸಂತ್ರಸ್ಥರಿಗೆ ಮಿಡಿದ ವಿರುಷ್ಕಾ…! ಸಹಾಯನಿಧಿಗೆ 2 ಕೋಟಿ ದಾನ ಮಾಡಿ ನೀವು ಕೈಜೋಡಿಸಿ ಎಂದ ಸ್ಟಾರ್ ದಂಪತಿ…!!

ದೇಶದಲ್ಲಿ ಕೊರೋನಾ ಆರೋಗ್ಯ ತುರ್ತು ಪರಿಸ್ಥಿತಿ ಸೃಷ್ಟಿಸಿದ್ದು, ಜನರು ಜೀವ ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ಎದುರಾಗಿದೆ. ಈ ಮಧ್ಯೆ ದೇಶಕ್ಕೆ ಸಹಾಯದ ಅಗತ್ಯವಿದೆ. ನೀವು ಕೈಜೋಡಿಸಿ ಎಂದು ಮನವಿ ಮಾಡಿರುವ ಸ್ಟಾರ್ ಕ್ರಿಕೇಟರ್ ಹಾಗೂ ಬಾಲಿವುಡ್ ನಟಿ ವಿರಾಟ್, ಅನುಷ್ಕಾ ದಂಪತಿ 2 ಕೋಟಿ ದಾನ ಮಾಡಿದ್ದಾರೆ.

https://kannada.newsnext.live/karnataka-oxigen-relief-give-supreme-court/

ದೇಶದಲ್ಲಿ ಒಂದು ಆರೋಗ್ಯ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದ್ದು, ವಿವಿಧ ರಾಜ್ಯಗಳಲ್ಲಿ ಜನರು ಆಕ್ಸಿಜನ್, ಬೆಡ್, ಔಷಧಿ,ಇಂಜಕ್ಷನ್ ಸೇರಿದಂತೆ ಅಗತ್ಯ ವಸ್ತುಗಳಿಗಾಗಿ ಪರದಾಡುತ್ತಿದ್ದಾರೆ. ಹೀಗಾಗಿ ಸರ್ಕಾರಗಳಿಗೆ ಉಳ್ಳವರ ಸಹಾಯ ಹಸ್ತದ ಅವಶ್ಯಕತೆ ಇದೆ. ಇದನ್ನು ಅರ್ಥೈಸಿಕೊಂಡು ಕೊರೋನಾ ಪರಿಹಾರ ನಿಧಿಗೆ ಸಹಾಯಹಸ್ತ ಚಾಚಿರುವ ಅನುಷ್ಕಾ ಹಾಗೂ ವಿರಾಟ್ 2 ಕೋಟಿ ರೂಪಾಯಿ ನೆರವು ನೀಡಿದ್ದಾರೆ.

ಈ ಸಂಗತಿಯನ್ನು ಟ್ವೀಟ್ ನಲ್ಲಿ ವಿರಾಟ್ ಹಾಗೂ ಅನುಷ್ಕಾ ಜಂಟಿಯಾಗಿ ಹಂಚಿಕೊಂಡಿದ್ದು, ದೇಶಕ್ಕೆ ಈ ಸಂಕಷ್ಟದ ಹೊತ್ತಿನಲ್ಲಿ ನಮ್ಮೆಲ್ಲರ ಸಹಾಯದ ಅಗತ್ಯವಿದೆ. ಕೈ ಜೋಡಿಸಿ. ನೀವು ಕೊಡುವ ಸಣ್ಣ ಸಹಾಯವೂ ಮಹತ್ವದ್ದೇ ಎಂದಿದ್ದು ಪರಿಹಾರ ನಿಧಿಗೆ ದಾನ ನೀಡುವಂತೆ ಮನವಿ ಮಾಡಿದ್ದಾರೆ.

https://kannada.newsnext.live/sandalwood-sannidi-agnisakshi-bigboss-readyto-marriage-announced/

ಈಗಾಗಲೇ ಬಾಲಿವುಡ್ ನಟರು, ಸಾಹಿತಿಗಳು, ಕ್ರಿಕೇಟರ್ ಗಳು ಸಹಾಯನಿಧಿಗೆ ಧನ ಸಹಾಯ ಮಾಡುತ್ತಿದ್ದು, ದೇಶದ ಸಂಕಷ್ಟದ ಹೊತ್ತಿನಲ್ಲಿ ಜೊತೆ ನಿಲ್ಲುವ ವಾಗ್ದಾನ ಮಾಡಿದ್ದಾರೆ.

https://kannada.newsnext.live/karnataka-15days-lockdown-fix-officers-meeting-decide/

ಸೋನುಸೂದ್, ಅಜಯ್ ದೇವಗನ್, ಸುನೀಲ್ ಶೆಟ್ಟಿ ಸೇರಿದಂತೆ ಹಲವರು ರೋಗಿಗಳ ಸಹಾಯಕ್ಕೆ ವಾರ್ ರೂಂ, ಆಕ್ಸಿಜನ್ ಸಪ್ಲೈಯಂತಹ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

https://kannada.newsnext.live/corona-patient-demand-bed-cm-yeddyurappa-house-road-close/amp/

ಇತ್ತೀಚಿಗಷ್ಟೇ ಹೆಣ್ಣುಮಗುವಿಗೆ ಜನ್ಮ ನೀಡಿರುವ ಅನುಷ್ಕಾ ತಾಯ್ತನದ ಸಂಭ್ರಮದಲ್ಲಿದ್ದು, ಕೊರೋನಾ ಹಿನ್ನೆಲೆಯಲ್ಲಿ ಐಪಿಎಲ್ ರದ್ದಾಗಿರೋದರಿಂದ ವಿರಾಟ್ ಕೊಹ್ಲಿ ಕೂಡ ಮನೆಯಲ್ಲೇ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ.

Comments are closed.