ಖರ್ಜೂರ (Dates Fruits) ಆರೋಗ್ಯಕರವಾದ ಪೋಷಕಾಂಶಗಳ ಖಜಾನೆ. ಇದು ಶಕ್ತಿಯನ್ನು ನೀಡುತ್ತದೆ. ಈ ಕಾರಣದಿಂದಲೇ ಉಪವಾಸದ ಸಮಯದಲ್ಲೂ ಹೆಚ್ಚಿನ ಜನರು ಖರ್ಜೂರವನ್ನು ಸೇವಿಸುತ್ತಾರೆ. ಇದು ನೈಸರ್ಗಿಕ ಸಕ್ಕರೆಯ ಅಂಶವನ್ನು ಹೊಂದಿದೆ. ಈ ಪೋಶಕಾಂಶಗಳು ಇರುವುದರಿಂದಲೇ ಖರ್ಜೂರ ಸೇವಿಸಿದ ತಕ್ಷಣ ನಮ್ಮ ದೇಹದಲ್ಲಿ ಶಕ್ತಿಯ ಸಂಚಾರವಾಗುತ್ತದೆ. ನಿಶ್ಯಕ್ತಿ ಹೋಗಲಾಡಿಸುತ್ತದೆ. ಆದರೆ ಖರ್ಜೂರ ತಿನ್ನುವಾಗ ಹೆಚ್ಚಿನ ಜನರು ಈ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಹೊಟ್ಟೆಯಲ್ಲಿ ಇನ್‌ಫಕ್ಷನ್ ಆಗಿ, ತೊಂದರೆಗಳನ್ನು ಅನುಭವಿಸುತ್ತಾರೆ.
ಖರ್ಜೂರ ತಿನ್ನುವುದರಿಂದ ಸಿಗುವ ಪೋಷಕಾಂಶಗಳು :
- ಪ್ರೋಟೀನ್
- ಪೊಟ್ಯಾಶಿಯಂ
- ಕಾಪರ್
- ವಿಟಮಿನ್ ಬಿ–6
- ಫೈಬರ್
- ಕಾರ್ಬೋಹೈಡ್ರೇಟ್
- ಇವುಗಳ ಜೊತೆಗೆ ಅಧಿಕ ಕ್ಯಾಲೋರಿಯು ಖರ್ಜೂರ ತಿನ್ನುವುದರಿಂದ ಸಿಗುತ್ತದೆ. 100 ಗ್ರಾಂ ಖರ್ಜೂರ್ ನಿಮಗೆ 277 ಕ್ಯಾಲೋರಿ ಕೊಡುತ್ತದೆ.
ಇದನ್ನೂ ಓದಿ: Ganesh Chaturthi 2022 : ಈ ವರ್ಷದ ಗಣೇಶ ಚತುರ್ಥಿಗೆ ವಿಶೇಷವಾಗಿ ಹೀಗೆ ಅಲಂಕಾರ ಮಾಡಿ
ಖರ್ಜೂರ ತಿನ್ನುವ ಸರಿಯಾದ ಕ್ರಮ :
- ಬಹಳಷ್ಟು ಜನರಿಗೆ ಖರ್ಜೂರ ಫ್ರೆಶ್ ಇರುತ್ತದೆ ಅನಿಸುತ್ತದೆ. ಆದ್ದರಿಂದ ಪ್ಯಾಕೆಟ್ ತೆರೆಯುತ್ತಲೇ ತಿನ್ನಲು ಶುರುಮಾಡುತ್ತೇವೆ. ಖರ್ಜೂರದ ಫ್ರೆಶ್‌ನೆಸ್ ಮೇಲೆ ಇದು ನಿರ್ಧಾರವಾಗುತ್ತದೆ. ಖರ್ಜೂರವನ್ನು ಪ್ಯಾಕ್ ಮಾಡಿ ಹೆಚ್ಚೆಂದರೆ 3 ರಿಂದ 4 ತಿಂಗಳ ಒಳಗೆ ಅದು ಫ್ರೆಶ್ ಆಗಿರುತ್ತದೆ. ಅಂದರೆ ತಿನ್ನಲು ಯೋಗ್ಯವಾಗಿರುತ್ತದೆ.
- ಖರ್ಜೂರ ಎಷ್ಟೇ ಅಂದದ ಪ್ಯಾಕೆಟ್‌ನಲ್ಲಿರಲಿ ಅಥವಾ ಎಷ್ಟೇ ದುಬಾರಿಯದ್ದಾಗಿರಲಿ ಇದನ್ನು ತಿನ್ನುವ ಮೊದಲು ತೊಳೆದು ತಿನ್ನಬೇಕು. ಸರಿಯಾಗಿ ತೊಳೆಯುವುದರಿಂದ ಅದರಲ್ಲಿರುವ ಹಾನಿಕಾರಕ ಜೀವಿಗಳು ನಿಮ್ಮ ಶರೀರಕ್ಕೆ ಸೇರುವುದು ತಪ್ಪುತ್ತದೆ.
- ಕೆಲವೊಮ್ಮೆ ಪ್ಯಾಕ್ ಮಾಡದ ಖರ್ಜೂರದಲ್ಲಿ ಸಣ್ಣ ಸಣ್ಣ ಕಲ್ಲುಗಳು ಇರುವುದು. ಆಗ ಖರ್ಜೂರವನ್ನು ಸರಿಯಾಗಿ ಸ್ವಚ್ಛಗೊಳಿಸಿ ತಿನ್ನಬೇಕು.
- ಪ್ಯಾಕೆಟ್‌ಗಳಲ್ಲಿ ಬರುವ ಖರ್ಜೂರ ಸಂಪೂರ್ಣವಾಗಿ ಫ್ರೆಶ್ ಹಾಗೂ ಸ್ವಚ್ಛವಾಗಿರುವುದಿಲ್ಲ ಅದಕ್ಕಾಗಿ ಖರ್ಜೂರವನ್ನು ತಿನ್ನುವ ಮೊದಲು 2 ನಿಮಿಷ ನೀರಿನಲ್ಲಿ ಹಾಕಿ. ನಿಧಾನವಾಗಿ ಕೈಯಾಡಿಸಿ ತೊಳೆಯಿರಿ. ನಂತರ ಸೇವಿಸಿ.
ಇದನ್ನೂ ಓದಿ: Music Therapy : ಸಂಗೀತದಿಂದ ಸ್ವಾಸ್ಥ್ಯ : ಸಾಮಾನ್ಯ ಮಾನಸಿಕ ಆರೋಗ್ಯ ಸುಧಾರಣೆಗೆ ಇದು ಬಹಳ ಮುಖ್ಯ
(Dates Fruits are you doing the same mistake while eating the dates)